ETV Bharat / bharat

ವಿಧವೆಯೊಂದಿಗೆ ಗಂಡನ ಚೆಲ್ಲಾಟ ಬಹಿರಂಗಗೊಳಿಸಿದ ಪತ್ನಿ.. ಪ್ರೇಮಿಗಳನ್ನು ಕಂಬಕ್ಕೆ ಕಟ್ಟಿ ಥಳಿಸಿದ ಜನ! - ವಿಧವೆಯ ಮೇಲೆ ಪ್ರೇಮಾಕುಂರ

ವಿಧವೆಯೊಂದಿಗೆ ಗಂಡನ ಚೆಲ್ಲಾಟವನ್ನು ರೆಡ್​ಹ್ಯಾಂಡ್​ ಆಗಿ ಪತ್ನಿಯೇ ಹಿಡಿಯುವ ಮೂಲಕ ಬಹಿರಂಗಪಡಿಸಿರುವ ಘಟನೆ ಜಾರ್ಖಂಡ್​ನ ಜಮ್ತಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

husband romance in Jharkhand  People Tied Couples To Electric Pole  woman revealed her husband romance  ವಿಧವೆಯೊಂದಿಗೆ ಗಂಡನ ಚೆಲ್ಲಾಟ  ಗಂಡನ ಚೆಲ್ಲಾಟ ಬಹಿರಂಗಗೊಳಿಸಿದ ಪತ್ನಿ  ಪ್ರೇಮಿಗಳನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು  ಗಂಡನ ರಾಸಲೀಲೆಯನ್ನು ಬಹಿರಂಗ  ವಿಧೆವೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಗಂಡ  ಕುಂಧಿತ್ ಪೊಲೀಸ್ ಠಾಣೆ ವ್ಯಾಪ್ತಿ  ವಿಧವೆಯ ಮೇಲೆ ಪ್ರೇಮಾಕುಂರ  ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿ
ವಿಧವೆಯೊಂದಿಗೆ ಗಂಡನ ಚೆಲ್ಲಾಟ ಬಹಿರಂಗಗೊಳಿಸಿದ ಪತ್ನಿ
author img

By

Published : Oct 27, 2022, 12:17 PM IST

ಜಮ್ತಾರ(ಜಾರ್ಖಂಡ್​): ಪತ್ನಿಯೇ ತನ್ನ ಗಂಡನ ರಾಸಲೀಲೆಯನ್ನು ಬಹಿರಂಗಪಡಿಸಿದ್ದಾರೆ. ವಿಧೆವೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಗಂಡನನ್ನು ಪತ್ನಿ ಊರಿನ ಜನರ ಮುಂದೆ ಬಹಿರಂಗಪಡಿಸಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ಕುಂಧಿತ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ 30 ವರ್ಷದ ವಿವಾಹಿತನಿಗೆ ಮತ್ತೊಂದು ಗ್ರಾಮದ 29 ವರ್ಷ ವಯಸ್ಸಿನ ವಿಧವೆಯ ಮೇಲೆ ಪ್ರೇಮಾಂಕುರವಾಗಿದೆ. ಇಬ್ಬರ ನಡುವಿನ ಪ್ರೀತಿ ಬಹಳ ದಿನಗಳಿಂದ ಮುಂದುವರಿದಿತ್ತು. ಮಂಗಳವಾರ ಬೆಳಗ್ಗೆ ವ್ಯಕ್ತಿಯು ತನ್ನ ಗೆಳತಿಯ ಮನೆಗೆ ಹೋಗಿದ್ದಾನೆ. ಆಗ ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದರು. ಈ ವೇಳೆ ಆತನ ಹೆಂಡತಿ ನೇರವಾಗಿ ಅಲ್ಲಿ ತೆರಳಿ ಅವರಿಬ್ಬರಿದ್ದ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರೂ ನಗ್ನ ಸ್ಥಿತಿಯಲ್ಲಿ ಇರುವುದನ್ನು ಪತ್ನಿ ನೋಡಿದ್ದಾರೆ. ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದಾಗ ಪತಿ ಹಲ್ಲೆ ಮಾಡಿದ್ದಾನೆ. ಇದರಿಂದ ಪತ್ನಿಗೆ ಗಾಯವಾಗಿತ್ತು.

ಘಟನೆ ಕುರಿತು ಮಾಹಿತಿ ಪಡೆದ ವ್ಯಕ್ತಿಯ ತಂದೆ ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಯುವಕನ ತಂದೆ ತನ್ನ ಸೊಸೆಯನ್ನು ಆಂಬ್ಯುಲೆನ್ಸ್‌ನಲ್ಲಿ ಪ್ರಥಮ ಚಿಕಿತ್ಸೆಗಾಗಿ ಕುಂಧಿತ್ ಆಸ್ಪತ್ರೆಗೆ ಕರೆದೊಯ್ದರು. ಇತ್ತ ಇತರ ಗ್ರಾಮಸ್ಥರು ಕೂಡ ಅಲ್ಲಿಗೆ ಆಗಮಿಸಿ ವಿವಾಹೇತರ ಸಂಬಂಧ ಹೊಂದಿರುವ ಪ್ರೇಮಿಗಳಿಬ್ಬರನ್ನೂ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಓದಿ: ಅಡುಗೆಯವಳೊಂದಿಗೆ ಪ್ರಿನ್ಸಿಪಾಲ್​ ಲಿಪ್​ ಲಾಕ್​.. ರೋಮಾನ್ಸ್​ ವಿಡಿಯೋ ವೈರಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.