ನಾಮಕ್ಕಲ್ (ತಮಿಳುನಾಡು): ತಮಿಳುನಾಡಿನ ನಾಮಕ್ಕಲ್ ನಲ್ಲಿ ಮಹಿಳೆಯೊಬ್ಬಳು (30) ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಗುಣವತಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಮಕ್ಕಳಾದ ಪ್ರಿಯಾನ್ (5) ಸುಜಿತ್ಪ್ರಿಯನ್ (2) ಕೂಡಾ ಸಾವಿಗೀಡಾಗಿದ್ದಾರೆ.
ಪತ್ನಿ ಹಾಗೂ ಮಕ್ಕಳು ಸಾವಿನ ಸುದ್ದಿ ಕೇಳಿದ ತಂದೆ ಕೇಶವನ್ ನಿದ್ರೆ ಮಾತ್ರೆಗಳನ್ನು ನುಂಗಿದ್ದರಿಂದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಳ ಪತಿ ಗೋಪಿ ಮೊಗನೂರು ಹೊಸ ಬೀದಿಯ ನಿವಾಸಿಯಾಗಿದ್ದು, ಈ ಪ್ರದೇಶದಲ್ಲಿ ಟೀ ಅಂಗಡಿ ನಡೆಸುತ್ತಿದ್ದಾನೆ.
ಕೌಟುಂಬಿಕ ಕಲಹದಿಂದ ದುರಂತ: ಸೋಮವಾರ ರಾತ್ರಿ ಕೌಟುಂಬಿಕ ಕಲಹವಿದ್ದು, ಮೃತಳ ತಂದೆ ಕೇಶವನ್ ಎಂಬಾತ ಆಕೆಯನ್ನು ನಿಂದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಪಿ ಕೆಲಸಕ್ಕೆ ಹೋದ ನಂತರ ಆಕ್ರೋಶಗೊಂಡ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೊರ ಬಂದಿದ್ದಾಳೆ. ಅವಳು ತಕ್ಷಣ ಹತ್ತಿರದ ಬಾವಿಯ ಕಡೆಗೆ ಹೋಗಿ ತನ್ನ ಮಕ್ಕಳನ್ನು ಅದರಲ್ಲಿ ಎಸೆದಳು. ನಂತರ ಪಕ್ಕದ ಪಂಪ್ ರೂಮಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಮತ್ತು ಮೊಮ್ಮಕ್ಕಳ ಸಾವಿನ ಸುದ್ದಿ ತಿಳಿದ ನಂತರ ಆಘಾತ ಸಹಿಸಲಾಗದೇ ಮೃತನ ತಂದೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ ಗೋಪಿ ಮನೆಗೆ ಮರಳಿದ ನಂತರ ತನ್ನ ಮಾವ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿ ಆತಂಕಗೊಂಡಿದ್ದಾನೆ. ನೆರೆಹೊರೆಯವರ ಸಹಾಯ ಪಡೆದು ಚಿಕಿತ್ಸೆಗಾಗಿ ನಾಮಕ್ಕಲ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾನೆ. ಮನೆಯಲ್ಲಿ ಪತ್ನಿ, ಪುತ್ರರು ಕಾಣದಿದ್ದಾಗ ಅವರಿಗೆ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಬಾವಿಯ ಬಳಿ ಹೋದಾಗ ಅವರ ಶವಗಳು ಪತ್ತೆಯಾಗಿವೆ. ಬಾವಿಯ ಸಮೀಪ ಇದ್ದ ಪಕ್ಕದ ಪಂಪಹೌಸ್ ರೂಮ್ದಲ್ಲಿ ತನ್ನ ಪತ್ನಿ ಗುಣವತಿ ನೇಣಿಗೆ ಶರಣಾಗಿದ್ದನ್ನು ನೋಡಿ ,ಅಲ್ಲಿಯೇ ಕುಸಿದು ಬಿದ್ದಿದ್ದಾನೆ.
ಈ ಪ್ರಕರಣದ ಮಾಹಿತಿ ಪಡೆದ ಮೋಹನೂರು ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಾಮಕಲ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾವನನ್ನೇ ಕೊಲೆ ಮಾಡಿದ ಸೊಸೆ:ಕೊಡಗು: ಕುಟುಂಬ ಕಲಹ ಹಿನ್ನೆಲೆಯಲ್ಲಿ ಮಾವನ ಮೇಲೆ ಸೊಸೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೆ.ಎ ಮಂದಣ್ಣ (73) ಕೊಲೆಯಾದ ವ್ಯಕ್ತಿ. ಸೊಸೆ ನೀಲಮ್ಮ ಕೊಲೆ ಮಾಡಿದ ಮಹಿಳೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಕಿಕ್ಕರಳ್ಳಿಯಲ್ಲಿ ಸೋಮವಾರ ಘಟನೆ ನಡೆದಿದೆ. ಮಾವನನ್ನು ಕೊಲೆ ಮಾಡಿದ ಸೊಸೆ ನೀಲಮ್ಮಳನ್ನು ಸೋಮವಾರ ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ಗುಂಡು ಹಾರಿಸಿ ಕೊಲೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ವಿರಾಜಪೇಟೆ ಭಾಗದಲ್ಲಿ ಗುಂಡಿನ ಶಬ್ಧ ಕೇಳಿತ್ತು. ಈಗ ಸೋಮವಾರ ಪೇಟೆ ಭಾಗದಲ್ಲಿ ನಡೆದಿದೆ. ಮಾವ ಮತ್ತು ಸೊಸೆ ನಡುವೆ ಕೌಟುಂಬಿಕ ಕಾರಣಕ್ಕೆ ಗಲಾಟೆ ನಡೆದಿದ್ದು, ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮಗನಿಗೆ ಮದುವೆ ಮಾಡಿದರೆ ಮಗನನ್ನು ಜೊತೆಗೆ ನನ್ನನ್ನೂ ಚೆನ್ನಾಗಿ ನೋಡಿಕೊಳ್ಳತ್ತಾಳೆ ಎಂದು ಎರಡು ವರ್ಷಗಳ ಹಿಂದೆ ಕೆ ಎ ಮಂದಣ್ಣ ಮಗನಿಗೆ ನೀಲಮ್ಮಳನ್ನು ಮದುವೆ ಮಾಡಿಸಿದ್ದರು.
ಇದನ್ನೂಓದಿ:ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ಆರೋಪ: ಮಾಜಿ ಸಚಿವರ ಪುತ್ರನ ವಿರುದ್ಧ ಎಫ್ಐಆರ್