ETV Bharat / bharat

ಬಿಸಿ ಟೀ ತರಲಿಲ್ಲ ಎಂದು ಗದರಿಸಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ..

ಬಿಸಿ ಚಹಾ ಯಾಕೆ ತರಲಿಲ್ಲ ಎಂದು ಗದರಿಸಿದ್ದ ಅತ್ತೆಗೆ ಸೊಸೆ ರಾಡ್​ನಿಂದ ಹೊಡೆದು ತೀವ್ರ ಗಾಯಗೊಳಿಸಿ ಕೊಂದಿರುವ ಘಟನೆ ಪುದುಕೋಟೆ ಜಿಲ್ಲೆಯ ವಿರಾಲಿಮಲೈ ಗ್ರಾಮದಲ್ಲಿ ನಡೆದಿದೆ.

Kanaku  Palaniammal
ಸೊಸೆ ಕನಕು ಅತ್ತೆ ಪಳನಿಯಮ್ಮಾಳ್
author img

By

Published : Mar 9, 2023, 10:17 PM IST

ಚೆನ್ನೈ: ಬಿಸಿ ಚಹಾ ಯಾಕೆ ತರಲಿಲ್ಲ ಎಂದು ಗದರಿಸಿದ್ದ ಅತ್ತೆಗೆ ಸೊಸೆ ರಾಡ್​ನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿ ಕೊಂದಿರುವ ಘಟನೆ ಮಹಿಳೆ ದಿನಾಚರಣೆ ದಿನ ನಡೆದಿದೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ತಮಿಳುನಾಡಿನ ಪುದುಕೋಟೆ ಜಿಲ್ಲೆಯ ವಿರಾಲಿಮಲೈ ಮೂಲದ ಪಳನಿಯಮ್ಮಾಳ್ ಕೊಲೆಯಾದವರು. ಸ್ಥಳೀಯ ಸೈಕಲ್ ರಿಪೇರಿ ಅಂಗಡಿ ನಡೆಸುತ್ತಿದ್ದ ಸುಬ್ರಹ್ಮಿ ಅವರ ಪತ್ನಿ ಕನಕು ತನ್ನ ಅತ್ತೆಯನ್ನು ಕೊಂದಿರುವ ಆರೋಪಿ. ದಿನವೂ ಪಳನಿಯಮ್ಮಾಳ್ ಸೊಸೆಗೆ ಚಹಾ ತರಲು ಸೊಸೆಯನ್ನು ಅಂಗಡಿಗೆ ಕಳುಹಿಸುತ್ತಿದ್ದಳು. ಹಿಂದಿನ ದಿನವೂ ಇದೇ ರೀತಿಯಲ್ಲಿ ಪಳನಿಯಮ್ಮಾಳ್ ತನ್ನ ಸೊಸೆಯನ್ನು ಚಹಾ ತರಲು ಕಳುಹಿಸಿದ್ದರು. ಅತ್ತೆ ಪಳನಿಯಮ್ಮಾಳ್ ಬಿಸಿ ಚಹಾ ತಂದಿಲ್ಲ ಎಂದು ಗದರಿಸಿದ್ದಾಳೆ. ಇದರಿಂದ ಕೋಪಗೊಂಡ ಅಸ್ವಸ್ತ ಸೊಸೆ ಕನಕು ಸೈಕಲ್ ರಿಪೇರಿಗೆ ಬಳಸುವ ಕಬ್ಬಿಣದ ರಾಡ್ ನಿಂದ ಪಳನಿಯಮ್ಮಾಳ್ ತಲೆಗೆ ಜೋರಾಗಿ ಹೊಡೆದಿದ್ದಾಳೆ. ಇದರಿಂದ ಪಳನಿಯಮ್ಮಾಳ್ ಸ್ಥಳದಲ್ಲಿ ತೀವ್ರ ರಕ್ತಸ್ರಾವದಿಂದಾಗಿ ಮೂರ್ಛೆ ಹೋಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅತ್ತೆ ಪಳನಿಯಮ್ಮಳನ್ನು ನೆರೆಹೊರೆಯವರು ಸೇರಿ ಸ್ಥಳೀಯ ವಿರಾಲಿಮಲೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಲ್ಲಿ ಚಿಕಿತ್ಸೆ ಫಲಿಸಿದ ಪರಿಣಾಮ ಸಂಬಂಧಿಕರು ಪಳನಿಯಮ್ಮಾಳ್ ಅವರನ್ನು ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಷ್ಟೇ ಪ್ರಯತ್ನಿಸಿದರೂ, ದುರದೃಷ್ಟವಶಾತ್ ಪಳನಿಯಮ್ಮಾಳ್ ಅವರ ಜೀವ ಉಳಿಸಲು ಆಗಲಿಲ್ಲ.

ಸಮೀಪದ ಇಲುಪುರ ಪೊಲೀಸ್ ಅಧಿಕಾರಿಗಳು ಘಟನೆ ಮಾಹಿತಿ ಪಡೆದು ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಳನಿಯಮ್ಮಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಂತರ ಪೊಲೀಸರು ಕನಕು ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ,ಘಟನೆಯ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಕನಕು ಮಾನಸಿಕ ಅಸ್ವಸ್ಥೆಯಾಗಿದ್ದಾಳೆ. ಹಾಗಾಗಿ ಪ್ರತಿದಿನ ಸರಿಯಾಗಿ ಔಷಧ ಸೇವಿಸುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಕನಕು ಔಷಧ ಸೇವಿಸಿರಲಿಲ್ಲ. ಗದರಿಸಿದ್ದಕ್ಕೆ ಕೋಪಗೊಂಡ ಅಸ್ವಸ್ಥೆ ಕನಕು ಕಬ್ಬಿಣದ ರಾಡ್ ನಿಂದ ಅತ್ತೆ ಪಳನಿಯಮ್ಮಾಳ್ ತಲೆಗೆ ಜೋರಾಗಿ ಹೊಡೆ ತೀವ್ರಗಾಯಗೊಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಣ್ಣ ಎರಚಬೇಡಿ ಎಂದಿದ್ದ ವೃದ್ಧೆಯನ್ನು ಕೊಂದ ಯುವಕರು: ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ 65 ವರ್ಷದ ಮಹಿಳೆಯೊಬ್ಬರನ್ನು ಯುವಕರ ಗುಂಪೊಂದು ಥಳಿಸಿ ಸಾಯಿಸಿದ ದಾರುಣ ಘಟನೆ ಇತ್ತೀಚೆಗೆ ನಡೆದಿದೆ. ಹೋಳಿ ಆಚರಣೆಯ ಸಂದರ್ಭದಲ್ಲಿ ಪಾನಮತ್ತ ಯುವಕರ ಗುಂಪು ಈ ದುಷ್ಕೃತ್ಯ ಎಸಗಿದೆ. ಬುಧವಾರ ಬಲಬದ್ದಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋರ್ ನಿಮಾ ಗ್ರಾಮದಲ್ಲಿ ಘಟನೆ ನಡೆದಿದೆ. ಅಧಿಕೃತ ಮೂಲಗಳ ಪ್ರಕಾರ, ಹೋಳಿ ಬಣ್ಣದಾಟದ ಸಮಯದಲ್ಲಿ ಬಲವಂತವಾಗಿ ಬಣ್ಣ ಎರಚುವುದನ್ನು ವಯಸ್ಸಾದ ಮಹಿಳೆಯೊಬ್ಬರು ವಿರೋಧಿಸಿದ್ದಾರೆ. ಇದೇ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಯುವಕರು ಆಕೆಯನ್ನು ಥಳಿಸಿದ್ದರಿಂದ ಆಕೆ ಮೃತಪಟ್ಟಿದ್ದಾರೆ. ಮೃತರನ್ನು ದುಚ್ಚಿ ದೇವಿ ಎಂದು ಗುರುತಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂಓದಿ:ಮದುವೆಯಾದ ಮರುದಿನವೇ ಹೆಂಡತಿಯನ್ನು ಟ್ರಾಫಿಕ್​ನಲ್ಲಿ ಬಿಟ್ಟು ಪರಾರಿಯಾದ ನವವಿವಾಹಿತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.