ETV Bharat / bharat

ಊರು ಬಂದ್ರೂ ನಿದ್ರೆಯಲ್ಲಿದ್ರು... ಬಳಿಕ ಚಲಿಸುತ್ತಿದ್ದ ರೈಲಿನಿಂದ ಜಿಗಿದ್ರು... ದೇವರಾಗಿ ಬಂದ ಪೊಲೀಸ್

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಕೆಳಗೆ ಜಾರಿಬಿದ್ದ ಮಹಿಳೆಯನ್ನ ರೈಲ್ವೆ ಪೊಲೀಸ್ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ.

jump from train
jump from train
author img

By

Published : May 6, 2021, 1:11 AM IST

ತಿರುಪತಿ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿ ಅಪಾಯಕ್ಕೆ ಸಿಲುಕಿದ್ದ ಮಹಿಳೆಯನ್ನು ರೈಲ್ವೆ ಕಾನ್ಸ್​ಟೇಬಲ್ ರಕ್ಷಿಸಿದ್ದಾರೆ. ತಿರುಪತಿ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ರೈಲ್ವೆ ಕಾನ್ಸ್​ಟೇಬಲ್ ಸತೀಶ್ ಅವರ ಸಮಯ ಪ್ರಜ್ಞೆಯಿಂದ ಮಹಿಳೆ ಬದುಕುಳಿದಿದ್ದಾಳೆ. ತಿರುಮಲ ಎಕ್ಸ್​ಪ್ರೆಸ್​ ರೈಲಿನಲ್ಲಿ ಕುಟುಂಬವೊಂದು ತಿರುಪತಿಗೆ ಆಗಮಿಸುವ ವೇಳೆ ಈ ಅವಘಡ ಸಂಭವಿಸಿದೆ.

ಚಲಿಸುತ್ತಿದ್ದ ರೈಲಿನಿಂದ ಜಿಗಿದ ಮಹಿಳೆಯ ರಕ್ಷಣೆ

ರೈಲು ತಿರುಪತಿ ಪ್ಲಾಟ್ ಫಾರ್ಮ್​ ತಲುಪಿದಾಗ ಕುಟುಂಬಸ್ಥರು ನಿದ್ರೆಯಲ್ಲಿದ್ದರು. ಆದ್ರೆ ರೈಲು ಪ್ಲಾಟ್ ಫಾರ್ಮ್​​ ಬಿಡುವಷ್ಟರಲ್ಲಿ ಎಚ್ಚರಗೊಂಡ ಕುಟುಂಬಸ್ಥರು, ಚಲಿಸುತ್ತಿದ್ದ ರೈಲಿನಿಂದಲೇ ಜಿಗಿಲು ಯತ್ನಿಸಿದ್ದಾರೆ. ಓರ್ವ ಯುವತಿ ಯಶಸ್ವಿಯಾಗಿ ಚಲಿಸುತ್ತಿದ್ದ ರೈಲಿನಿಂದ ಇಳಿದಿದ್ದರು. ಆದ್ರೆ ಹಿಂದೆಯಿದ್ದ ಮಹಿಳೆ ರೈಲಿನಿಂದ ಜಿಗಿಯುವಾಗ ಆಯತಪ್ಪಿ ಕೆಳಗೆಬಿದ್ದಿದ್ದರು. ಆಗ ಅಲ್ಲೇ ಕರ್ತವ್ಯದಲ್ಲಿದ್ದ ಕಾನ್ಸ್​ಟೇಬಲ್ ತಕ್ಷಣವೇ ಅಪಾಯದಲ್ಲಿದ್ದ ಮಹಿಳೆಯನ್ನು ಎಳೆದು ಪ್ಲಾಟ್ ಫಾರ್ಮ್​ಗೆ ತಂದು ಜೀವ ಉಳಿಸಿದ್ದಾರೆ. ಬಳಿಕ ಮಹಿಳೆಯ ಗಂಡನನ್ನು ಕಾನ್ಸಟೇಬಲ್ ಇದೇ ರೀತಿ ರಕ್ಷಿಸಿದ್ದಾರೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾನ್ಸ್​ಟೇಬಲ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.