ಯವತ್ಮಲ್(ಮಹಾರಾಷ್ಟ್ರ): ಯವತ್ಮಲ್ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಹೆಚ್‌ಸಿ) ಬಾಗಿಲಲ್ಲೇ ಶುಕ್ರವಾರ ಮಹಿಳೆಯೊಬ್ಬರು ಹೆರಿಗೆಯಾಗಿದ್ದು, ಮಗು ಸಾವನ್ನಪ್ಪಿದೆ. ವೈದ್ಯಕೀಯ ಸಿಬ್ಬಂದಿ ಇಲ್ಲದ ಕಾರಣ ಮಗು ಸಾವನ್ನಪ್ಪಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಯವತ್ಮಲ್ನ ಉಮರ್‌ಖೇಡ್ ತಾಲೂಕಿನ ವಿದುಲ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಶುಭಾಂಗಿ ಹಫ್ಸೆ ಎಂಬ ಮಹಿಳೆ ಹೆರಿಗೆಗಾಗಿ ತನ್ನ ಹುಟ್ಟೂರಾದ ವಿದುಲ್‌ಗೆ ಬಂದಿದ್ದರು. ಅವರ ಹೆರಿಗೆ ನೋವು ಶುರುವಾಗುತ್ತಿದ್ದಂತೆ ಮಹಿಳೆಯ ತಂದೆ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ 2 ಗಂಟೆಯಾದರೂ ಆ್ಯಂಬುಲೆನ್ಸ್ ಬಾರದ ಕಾರಣ ಗರ್ಭಿಣಿಯನ್ನ ಆಟೋದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು.
ಇಲ್ಲಿ ವೈದ್ಯಾಧಿಕಾರಿಯಾಗಲಿ, ಸಿಬ್ಬಂದಿ ಇಲ್ಲದ ಕಾರಣ ಆಸ್ಪತ್ರೆ ಪ್ರವೇಶ ದ್ವಾರದ ಬಳಿಯ ವರಾಂಡಾದಲ್ಲಿಯೇ ಹೆರಿಗೆಯಾಗಿದೆ. ಇದರಿಂದಾಗಿ ನವಜಾತ ಶಿಶು ಸಾವನ್ನಪ್ಪಿದೆ ಎಂದು ಮಹಿಳೆಯ ತಂದೆ ಆರೋಪಿಸಿದ್ದಾರೆ. ಆದರೆ, ಜಿಲ್ಲಾ ಆರೋಗ್ಯಾಧಿಕಾರಿ ಪ್ರಹ್ಲಾದ್ ಚವ್ಹಾಣ್, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮತ್ತು ದಾದಿಯರು ಇದ್ದರು. ಆದರೆ, ಮಹಿಳೆಯನ್ನು ತಡವಾಗಿ ಕೇಂದ್ರಕ್ಕೆ ಕರೆತರಲಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾರ್ಥ ಚಟರ್ಜಿ ಆಪ್ತ ಸಹಾಯಕನನ್ನು ಹಿಡಿಯಲು ಜಾರ್ಖಂಡ್ ಹೋಟೆಲ್ ಮೇಲೆ ಐಟಿ ದಾಳಿ