ಮುಂಬೈ(ಮಹಾರಾಷ್ಟ್ರ): ಇಲಿಯ ಕಾಟದಿಂದ ರೋಸಿ ಹೋಗಿ ಮಹಿಳೆಯೋರ್ವಳು ಅವುಗಳನ್ನ ಸಾಯಿಸುವ ಉದ್ದೇಶದಿಂದ ಟೊಮೆಟೊದಲ್ಲಿ ಪಾಷಾಣ ಬೆರೆಸಿ ಇಟ್ಟಿದ್ದರು. ಬಳಿಕ ಟಿವಿ ನೋಡುತ್ತ ಮೈಮರೆತು ಅದನ್ನ ಅಡುಗೆಯಲ್ಲಿ ಬಳಕೆ ಮಾಡಿ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಮಾಲ್ವಾನಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾಸ್ಕಲ್ವಾಡಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ.
27 ವರ್ಷದ ಮಹಿಳೆಯೋರ್ವರು ಇಲಿ ಕೊಲ್ಲಲು ಟೊಮೆಟೊದಲ್ಲಿ ವಿಷ ಬೆರೆಸಿ ಇಟ್ಟಿದ್ದರು. ನಂತರ ಟಿವಿ ನೋಡುತ್ತ ಕುಳಿತು ಎಲ್ಲವನ್ನೂ ಮರೆತು ಬಿಟ್ಟಿದ್ದಾರೆ. ಅಡುಗೆ ಮಾಡುವ ಸಂದರ್ಭದಲ್ಲಿ ವಿಷ ಹಾಕಿಟ್ಟಿದ್ದ ಟೊಮೆಟೊವನ್ನೇ ಅಡುಗೆಯಲ್ಲಿ ಹಾಕಿದ್ದಾರೆ. ಬಳಿಕ ಊಟ ಸಹ ಮಾಡಿದ್ದಾಳೆ. ಆಗ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಲಾಗಿದೆ. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಗ ಮಹಿಳೆ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಳವಣಿ ಪೊಲೀಸ್ ಠಾಣೆಯ ಪೊಲೀಸ್ ವರಿಷ್ಠಾಧಿಕಾರಿ ಮೂಸಾ ದೇವರ್ಶಿ ಮಾಹಿತಿ ನೀಡಿದ್ದು, ಮಹಿಳೆಯ ದೇಹದಲ್ಲಿ ವಿಷ ಹರಡಿರುವ ಕಾರಣ ಸಾವನ್ನಪ್ಪಿದ್ದಾಳೆಂದು ಹೇಳಿದ್ದಾರೆ.
ಇದನ್ನೂ ಓದಿರಿ: ಈಟಿವಿ ಭಾರತ ಹೆಸರಿನಲ್ಲಿ 'ನಕಲಿ ಕಚೇರಿ'.. ವ್ಯಕ್ತಿ ವಿರುದ್ಧ ಪ್ರಕರಣ