ETV Bharat / bharat

ಸ್ಮಾರ್ಟ್‌ಫೋನ್ ವಿಚಾರವಾಗಿ ದಂಪತಿ ನಡುವೆ ಜಗಳ: ವಿಷ ಸೇವಿಸಿ ಪತ್ನಿ ಸಾವು, ಪತಿ ಸ್ಥಿತಿ ಗಂಭೀರ - woman Commits Suicide After quarrel with husband

ಸ್ಮಾರ್ಟ್‌ಫೋನ್ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದ್ದು, ಬಳಿಕ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಕಲಿಮೇಲ ಬ್ಲಾಕ್‌ನ ಎಂಪಿವಿ 14ರಲ್ಲಿ ನಡೆದಿದೆ.

ಸ್ಮಾರ್ಟ್‌ಫೋನ್ ವಿಚಾರವಾಗಿ ದಂಪತಿ ನಡುವೆ ಜಗಳ
woman Commits Suicide
author img

By

Published : Oct 20, 2022, 6:44 AM IST

ಮಲ್ಕಂಗಿರಿ(ಒಡಿಶಾ): ಸ್ಮಾರ್ಟ್‌ಫೋನ್ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲ್ಕಂಗಿರಿ ಜಿಲ್ಲೆಯ ಕಲಿಮೇಲ ಬ್ಲಾಕ್‌ನ ಎಂಪಿವಿ 14ರಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ಗ್ರಾಮದ ಕನೈ ಎಂಬುವರು ಒಂದು ವರ್ಷದ ಹಿಂದೆ ಜ್ಯೋತಿ ಎಂಬುವವರನ್ನು ಮದುವೆಯಾಗಿದ್ದರು. ಬಳಿಕ ಕನೈ ಇಎಂಐನಲ್ಲಿ ಜ್ಯೋತಿಗಾಗಿ ಸ್ಮಾರ್ಟ್‌ಫೋನ್ ಖರೀದಿಸಿದ್ದರು. ಆದರೆ, ಜ್ಯೋತಿಗೆ ಹಣಕಾಸಿನ ವಿಚಾರ ತಿಳಿಸಿರಲಿಲ್ಲ. ಎಲ್ಲ ಕಂತುಗಳನ್ನು ಪಾವತಿಸಿದ ನಂತರ ಫೈನಾನ್ಸ್ ಕಂಪನಿಯ ಉದ್ಯೋಗಿ ಡಾಕ್ಯುಮೆಂಟ್‌ ಸಹಿಗಾಗಿ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ಇಎಂಐನಲ್ಲಿ ಮೊಬೈಲ್ ಫೋನ್ ಖರೀದಿಸಿರುವುದರ ಬಗ್ಗೆ ಜ್ಯೋತಿಗೆ ತಿಳಿದಿದೆ.

ನಂತರ ಪತಿ ಮನೆಗೆ ಹಿಂದಿರುಗಿದಾಗ ಜ್ಯೋತಿ ಅವನೊಂದಿಗೆ ಜಗಳವಾಡಿ ವಿಷ ಸೇವಿಸಿದ್ದಾಳೆ. ಇದನ್ನು ನೋಡಿದ ಕನೈ ಕೂಡ ವಿಷ ಸೇವಿಸಿದ್ದು, ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜ್ಯೋತಿ ಮೃತಪಟ್ಟಿದ್ದಾರೆ. ಕನೈ ಸ್ಥಿತಿ ಕೂಡ ಗಂಭೀರವಾಗಿದೆ.

ಇದನ್ನೂ ಓದಿ: ಹೆಂಡತಿ ಹೊಟ್ಟೆಗೆ ಚೂರಿ ಹಾಕಿದ ಗಂಡ: ಭಯಗೊಂಡು ಆತ್ಮಹತ್ಯೆಗೆ ಶರಣು

ನನ್ನ ಹೆಂಡತಿ ದುಬಾರಿ ಫೋನ್ ಖರೀದಿಸುವಂತೆ ಕೇಳಿದಳು. ಆದರೆ ನನ್ನ ಬಳಿ ಹಣವಿಲ್ಲದ ಕಾರಣ ನಾನು ಅವಳಿಗೆ ಹೇಳದೇ ಫೈನಾನ್ಸ್‌ನಲ್ಲಿ ಫೋನ್ ಖರೀದಿಸಿದೆ. ಈ ವಿಷಯ ತಿಳಿದ ನಂತರ ನಮ್ಮಿಬ್ಬರ ನಡುವೆ ಜಗಳವಾಯಿತು. ನಂತರ ಅವಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಳು ಎಂದು ಕನೈ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.