ETV Bharat / bharat

ಮದುವೆಯಾಗಿ 3 ತಿಂಗಳಾದ್ರೂ ಮನೆಗೆ ಬಾರದ ಪತ್ನಿ: ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಪತಿ - ಆಂಧ್ರ ಪ್ರದೇಶದ ಗಂಟೂರು ಜಿಲ್ಲೆಯಲ್ಲಿ ಇಂತಹ ವಿಚಿತ್ರ ಪ್ರಕರಣ

ಪ್ರತ್ಯೇಕ ಮನೆ ಮಾಡಿದ ಮೇಲೂ ಆಕೆ ತವರು ಮನೆಗೆ ಹೋಗಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧವೇ ವರದಕ್ಷಿಣೆಗಾಗಿ ಕಿರುಕುಳ ಕೊಟ್ಟರೆಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೇ, ತನಗೆ 10 ಲಕ್ಷ ರೂ. ಹಣ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾಳೆ ಎಂದು ಗಂಡ ಆರೋಪಿಸಿದ್ದಾನೆ.

woman cheated young man in guntur, ap
ಮದುವೆಯಾಗಿ ಮೂರು ತಿಂಗಳಾದರೂ ಮನೆಗೆ ಬಾರದ ಪತ್ನಿ: ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋದ ಪತಿ
author img

By

Published : Jun 28, 2022, 6:14 PM IST

ಗುಂಟೂರು (ಆಂಧ್ರಪ್ರದೇಶ): ಮದುವೆಯ ಸಂದರ್ಭದಲ್ಲಿ ವಧುವಿನ ಕಡೆಯಿಂದ ವರದಕ್ಷಿಣೆ ಪಡೆಯುವುದು ಭಾರತೀಯ ಕಾನೂನಿನ್ವಯ ಶಿಕ್ಷಾರ್ಹ ಅಪರಾಧ. ಹೀಗಿದ್ದರೂ ಅಲ್ಲಲ್ಲಿ ಗೌಪ್ಯವಾಗಿ ವರದಕ್ಷಿಣೆ ತೆಗೆದುಕೊಳ್ಳುವ ಅನೇಕ ಪ್ರಕರಣಗಳು ನಡೆಯುತ್ತಿರುತ್ತವೆ. ಗಂಡನ ಕಡೆಯವರು ದುಡ್ಡಿಗಾಗಿ ಪೀಡಿಸುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ತಂದೆ ಇಲ್ಲದ ಹುಡುಗಿಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮದುವೆಯಾಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ ತನಗೆ ನ್ಯಾಯ ಕೊಡಿಸಬೇಕೆಂದು ಹೆಂಡ್ತಿ ವಿರುದ್ಧ ಪೊಲೀಸರು ಮೊರೆ ಹೋಗಿದ್ದಾನೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಬಿ.ಟೆಕ್ ಮುಗಿಸಿರುವ ಶ್ರೀನಿವಾಸರಾವ್ ಎಂಬಾತ ಮೋಟಾರ್ ಕಂಟ್ರೋಲರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಇದೇ ಫೆಬ್ರವರಿಯಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಆಕೆಗಾಗಿ 2 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನೂ ಮಾಡಿಸಿ, ಆಕೆಯ ಇಚ್ಛೆಯಂತೆಯೇ ಬೇರೆ ಮನೆ ಕೂಡ ಮಾಡಿದ್ದಾನೆ. ಆದರೆ, ಇಲ್ಲಿಯವರೆಗೂ ಆಕೆ ಗಂಡನ ಮನೆಗೆ ಬಂದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗಂಡನ ವಿರುದ್ಧವೇ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಇದೀಗ ಇದಕ್ಕೆ ಪ್ರತಿಯಾಗಿ ಗಂಡ ಶ್ರೀನಿವಾಸರಾವ್ ಕೂಡ ದೂರು ನೀಡಿದ್ದಾನೆ.

ಶ್ರೀನಿವಾಸರಾವ್​ ಹೇಳುವುದೇನು?: ಶ್ರೀನಿವಾಸರಾವ್​ನ ತಂದೆ ಪೋಲಿಯೊದಿಂದ ಬಳಲುತ್ತಿದ್ದು, ತಾಯಿಯೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಒಬ್ಬನೇ ಮಗನಾಗಿರುವ ಈತನಿಗೆ ಪರಿಚಯಸ್ಥರೊಬ್ಬರ ಮೂಲಕ ಮದುವೆ ಪ್ರಸ್ತಾವ ಬಂದಿತ್ತು. ಈ ವೇಳೆ ಯುವತಿಗೆ ತಂದೆ ಇಲ್ಲ. ಹಾಗಾಗಿ, ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ಆಕೆಯ ತಾಯಿ ಹೇಳಿದ್ದರು. ಇದಕ್ಕೆ ಒಪ್ಪಿಕೊಂಡು ಆಕೆಗೆ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮಾಡಿಸಿಕೊಟ್ಟು ಮದುವೆ ಮಾಡಿಕೊಂಡಿದ್ದೇನೆ ಎಂದು ಶ್ರೀನಿವಾಸರಾವ್​ ಹೇಳಿದ್ದಾನೆ.

ಅಲ್ಲದೇ, ತನ್ನೂರಿನಲ್ಲಿ 6 ಲಕ್ಷ ರೂ. ವೆಚ್ಚ ಮಾಡಿ ಆರತಕ್ಷತೆಯನ್ನೂ ಮಾಡಿಸಿದ್ದಾನೆ. ಆದರೆ, ಆರತಕ್ಷತೆಯಾದ ಕೂಡಲೇ ಮಗಳನ್ನು ಅತ್ತೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿಂದ ಒಂದು ತಿಂಗಳಾದರೂ ಗಂಡನ ಮನೆಗೆ ಮಗಳನ್ನು ಕಳುಹಿಸಿಲ್ಲ. ಆಗ ಹಿರಿಯರು ಹೋಗಿ ವಿಚಾರಿಸಿದಾಗ, ಆಕೆ ಗುಂಟೂರಿನಲ್ಲಿ ಬೇರೆ ಮನೆ ಕೊಡಬೇಕೆಂದು ಹೇಳಿದ್ದಾಳೆ. ಇದಕ್ಕೂ ಒಪ್ಪಿಕೊಂಡ ಗಂಡ, ಬಾಡಿಗೆ ಮನೆ ಮಾಡಿದ್ದೇನೆ. ಒಂದು ದಿನ ಮಾತ್ರವೇ ಮನೆಗೆ ಬಂದಿದ್ದು, ಮರುದಿನವೇ ಮತ್ತೆ ತವರು ಮನೆಗೆ ಹೋಗಿದ್ದಾಳೆ ಎಂದು ಅಳಲು ತೋಡಿಕೊಂಡಿದ್ದಾನೆ.

10 ಲಕ್ಷ ರೂ.ಗೆ ಬೇಡಿಕೆ: ಹೆಂಡ್ತಿಯ ಇಚ್ಛೆಯಂತೆ ಬೇರೆ ಮನೆ ಮಾಡಿದ ಮೇಲೂ ಆಕೆ ತವರು ಮನೆಗೆ ಹೋಗಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ವಿರುದ್ಧವೇ ವರದಕ್ಷಿಣೆಗಾಗಿ ಕಿರುಕುಳ ಕೊಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೇ, ತನಗೆ 10 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ ಎಂದೂ ಶ್ರೀನಿವಾಸರಾವ್​ ಆರೋಪಿಸಿದ್ದಾರೆ.

ಅಲ್ಲದೇ, ಈ ಹಿಂದೆಯೇ ಆಕೆಗೆ ಬೇರೊಬ್ಬರೊಂದಿಗೆ ಮದುವೆ ನಿಶ್ಚಿತಾರ್ಥ ಆಗಿತ್ತು. ಇದನ್ನು ಮುಚ್ಚಿಟ್ಟು ನನ್ನೊಂದಿಗೆ ಮದುವೆ ಮಾಡಲಾಗಿದೆ. ಇಷ್ಟೇ ಅಲ್ಲ, ಮತ್ತೊಬ್ಬರೊಂದಿಗೆ ಮದುವೆ ಮಾಡಿಕೊಳ್ಳುವ ತಂತ್ರ ಮಾಡಿದ್ದಾರೆ. ಇದಕ್ಕೆ ನಾನು ಅಡ್ಡ ಆಗಬಹುದು ಎಂದಿದ್ದು ಈ ರೀತಿಯೆಲ್ಲ ಮಾಡಲಾಗುತ್ತದೆ. ನನಗೆ ಮೋಸ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಮತ್ತು ನನಗೆ ನ್ಯಾಯ ಕೊಡಿಸಬೇಕೆಂದು ಶ್ರೀನಿವಾಸರಾವ್ ಎಸ್​ಪಿಗೆ ಮನವಿ ಮಾಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.