ETV Bharat / bharat

ಕರ್ನಾಟಕ, ರಾಜಸ್ಥಾನ, ಒಡಿಶಾದಲ್ಲಿ ಹನಿಟ್ರ್ಯಾಪ್​.. ಉದ್ಯಮಿಗಳನ್ನು ಬೆತ್ತಲಾಗಿಸಿದ ಮಹಿಳೆ ಅರೆಸ್ಟ್​

author img

By

Published : Nov 13, 2022, 7:24 PM IST

ಕರ್ನಾಟಕ ಮೂಲದ ಮಹಿಳೆಯೊಬ್ಬಳು ರಾಜಸ್ಥಾನ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹನಿಟ್ರ್ಯಾಪ್​ ಜಾಲ ಬೀಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಭುವನೇಶ್ವರದಲ್ಲಿ ವಂಚಕಿಯನ್ನು ಬಂಧಿಸಲಾಗಿದೆ.

karnataka women arrest in honeytrap case
ಉದ್ಯಮಿಗಳ ವಂಚಿಸಿದ ರಾಜ್ಯದ ಮಹಿಳೆ ಅರೆಸ್ಟ್​

ಭುವನೇಶ್ವರ(ಒಡಿಶಾ): ಹನಿಟ್ರ್ಯಾಪ್​ ಮೂಲಕ ಉದ್ಯಮಿಗಳನ್ನು ವಂಚಿಸುತ್ತಿದ್ದ ಕರ್ನಾಟಕ ಮೂಲದ ಮಹಿಳೆಯನ್ನು ರಾಜಸ್ಥಾನ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ. ರಾಜಸ್ಥಾನದ ವ್ಯಕ್ತಿಯೊಬ್ಬರನ್ನು ವಿವಾಹವಾಗಿ ಹಣ ಲೂಟಿ ಮಾಡಿದ್ದ ಪ್ರಕರಣದ ತನಿಖೆಯಲ್ಲಿ ಹನಿಟ್ರ್ಯಾಪ್​ ವಿಷಯ ಬಹಿರಂಗವಾಗಿದೆ. ಈಕೆಯ ವಿರುದ್ಧ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ.

ಪ್ರೀತಿ ದೇಸಾಯಿ(42) ಬಂಧಿತ ಆರೋಪಿ. ಎಂಜಿನಿಯರ್​ ಎಂದು ಹೇಳಿಕೊಂಡು ಒಡಿಶಾದ ಭುವನೇಶ್ವರದಲ್ಲಿ ನೆಲೆಸಿದ್ದ ಈಕೆ ಕರ್ನಾಟಕ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಉದ್ಯಮಿಗಳನ್ನು ವಂಚಿಸಿದ ಆರೋಪ ಕೇಳಿಬಂದಿದೆ. ಈಕೆಯ ಬಲೆಗೆ ಬಿದ್ದ ಉದ್ಯಮಿಗಳು ಮೋಸ ಹೋಗಿದ್ದು ತನಿಖೆಯಲ್ಲಿ ಬಯಲಾಗಿದೆ.

ಸೋಷಿಯಲ್​ ಮೀಡಿಯಾ ಮೂಲಕ ವಂಚನೆ: ಹನಿಟ್ರ್ಯಾಪರ್​ ಪ್ರೀತಿ ದೇಸಾಯಿ ಸಾಮಾಜಿಕ ಮಾಧ್ಯಮಗಳ ಮೂಲಕ ದೊಡ್ಡ ಕುಳಗಳನ್ನು ಪರಿಚಯ ಮಾಡಿಕೊಂಡು ಬಳಿಕ ಅವರನ್ನು ಪ್ರೀತಿಯ ಬಲೆಗೆ ಬೀಳಿಸುತ್ತಿದ್ದರು. ಸ್ನೇಹ ಬೆಳೆಸಿದವರ ಜೊತೆ ಸಲುಗೆಯಿಂದ ಇರುತ್ತಿದ್ದ ಈಕೆ ಆತ್ಮೀಯ ಕ್ಷಣಗಳ ಚಿತ್ರಗಳನ್ನು ಕ್ಲಿಕ್ಕಿಸಿ ಹಣಕ್ಕೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಳು ಎಂದು ಹೇಳಲಾಗ್ತಿದೆ.

ರಾಜಸ್ಥಾನಿಗನ ವಿವಾಹವಾಗಿ ಯಾಮಾರಿಸಿದ ಪ್ರೀತಿ: ರಾಜಸ್ಥಾನದ ಉದ್ಯಮಿಯೊಬ್ಬನನ್ನು ಈಚೆಗೆ ವಿವಾಹವಾಗಿದ್ದ ಪ್ರೀತಿ ದೇಸಾಯಿ, ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಲಕ್ಷಾಂತರ ರೂಪಾಯಿ ಹಣವನ್ನು ಆತನಿಂದ ಪೀಕಿ ಅಲ್ಲಿಂದ ಪರಾರಿಯಾಗಿದ್ದಾಳೆ. ಈ ಬಗ್ಗೆ ಮೋಸ ಹೋದ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿತ್ತು.

ವಂಚಕಿ ಪ್ರೀತಿ ಬೆನ್ನುಬಿದ್ದ ಪೊಲೀಸರು, ಆಕೆಯನ್ನು ಒಡಿಶಾದ ಭುವನೇಶ್ವರದಲ್ಲಿ ಇರುವುದು ಪತ್ತೆ ಮಾಡಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದ ಈಕೆಯನ್ನು ಬಂಧನಕ್ಕೆ ರಾಜಸ್ಥಾನ ಪೊಲೀಸರು, ಸ್ಥಳೀಯ ಸಿಬ್ಬಂದಿ ನೆರವಿನ ಜೊತೆ ದಾಳಿ ಮಾಡಿ ಬಂಧಿಸಿದ್ದಾರೆ. ಈಕೆಯಿಂದ ಒಂದು ಕಾರನ್ನು ಕೂಡ ಜಪ್ತಿ ಮಾಡಲಾಗಿದೆ.

ಒಡಿಶಾದಲ್ಲೂ ಮೋಸಗಾತಿಯ ಆಟ: ರಾಜಸ್ಥಾನದಲ್ಲಿ ಉದ್ಯಮಿಯನ್ನು ವಿವಾಹವಾದ ನಾಟಕವಾಡಿ ಹಣ ಪೀಕಿ ಪರಾರಿಯಾಗಿದ್ದ ವಂಚಕಿ, ಒಡಿಶಾದಲ್ಲೂ ತನ್ನ ಜಾಲ ಬೀಸಿದ್ದಾಳೆ. ಭುವನೇಶ್ವರದಲ್ಲೂ ಐವರಿಗೆ ಮಕ್ಮಲ್​ ಟೋಪಿ ಹಾಕಿ ಹಣ ಪೀಕಿದ ಆರೋಪವಿದೆ. ತಾನಿದ್ದ ಅಪಾರ್ಟ್​ಮೆಂಟ್​ ಕೂಡ ಮೋಸದಿಂದಲೇ ಪಡೆದಿದ್ದು ಎಂದು ದೂರಿನಲ್ಲಿದೆ.

ಕರ್ನಾಟಕದಲ್ಲಿ ವಂಚಿಸಿದ್ದ ಪ್ರೀತಿ: ಕರ್ನಾಟಕದಲ್ಲಿ ಈ ಮೊದಲು ಜವಳಿ ವ್ಯಾಪಾರಿಯನ್ನು ಯಾಮಾರಿಸಿ ಹಣ ಲೂಟಿ ಮಾಡಿ ರಾಜಸ್ಥಾನಕ್ಕೆ ಪಲಾಯನ ಮಾಡಿದ್ದಳು. ಈ ಬಗ್ಗೆ ರಾಜ್ಯದಲ್ಲೂ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆಯ ಜಾಲ ಬೀಸಿ ಉದ್ಯಮಿಗಳನ್ನು ಪ್ರೀತಿಯ ಖೆಡ್ಡಾಕ್ಕೆ ಕೆಡವುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ: ಏರ್‌ಪೋರ್ಟ್​ನಲ್ಲಿ ಸೊಂಟಕ್ಕೆ ಸುತ್ತಿಕೊಂಡು ಸಾಗಿಸುತ್ತಿದ್ದ 32 ಕೋಟಿ ಮೌಲ್ಯದ 61 ಕೆಜಿ ಚಿನ್ನ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.