ETV Bharat / bharat

ಉತ್ತರಪ್ರದೇಶದ ಬಿಜೆಪಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ - ಯೋಗಿ ಆದಿತ್ಯನಾಥ್​ಗೆ ಮಹಿಳೆ ಶಾಕ್​

ಉತ್ತರಪ್ರದೇಶ ಲಖನೌದಲ್ಲಿರುವ ಬಿಜೆಪಿ ಕಚೇರಿಯ ಮುಂದೆ ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ..

woman-attempts
ಬಿಜೆಪಿ ಕಚೇರಿ
author img

By

Published : Apr 1, 2022, 4:24 PM IST

ಲಖನೌ : ಉತ್ತರಪ್ರದೇಶದಲ್ಲಿ 2ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ ಖುಷಿಯಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರಿಗೆ ಮಹಿಳೆಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಶಾಕ್​ ನೀಡಿದ್ದಾಳೆ.

ಸಿಎಂ ಯೋಗಿ ಆದಿತ್ಯನಾಥ್​ ಅವರು ಲಖನೌದಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ಬಳಿಕ ಪ್ರತಿಭಟನೆಗೆ ಮುಂದಾದ ಮಹಿಳೆ, ಹಠಾತ್ತಾಗಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾಳೆ.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್​ ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ. ಮಹಿಳೆ ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದರು ಎಂಬ ಕಾರಣ ತಿಳಿದು ಬಂದಿಲ್ಲ. ಮಹಿಳೆಯನ್ನು ವಶಕ್ಕೆ ಪಡದುಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಓದಿ: ಪ್ರಧಾನಿ ಮೋದಿಗೆ ಬೆದರಿಕೆಯ ಮೇಲ್ ​: 20 ಕೆಜಿ ಆರ್‌ಡಿಎಕ್ಸ್​ ರೆಡಿ ಮಾಡಿಟ್ಟುಕೊಳ್ಳಲಾಗಿದೆಯಂತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.