ಪೂರ್ವ ಚಂಪಾರಣ್ (ಬಿಹಾರ್): ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸಾಲ್ ಪ್ರದೇಶದ ಭಾರತ-ನೇಪಾಳ ಗಡಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ರಷ್ಯಾದ ಪ್ರಜೆಗಳನ್ನು ವಲಸೆ ಇಲಾಖೆ ಬಂಧಿಸಿದೆ. ಬಂಧಿತರಲ್ಲಿ ಓರ್ವ ಮಹಿಳೆ ಸೇರಿದ್ದಾರೆ. ರೋಲ್ಡುಂಗಿನ್ ಅಲೆಕ್ಸಿ, ಜೆರ್ಡೆವ್ವಿಲಿಯಾ ಮತ್ತು ಬಾಲಸೋವಾ ಅನ್ನಾ (ಮಹಿಳೆ) ಬಂಧಿತರು.
ಈ ಮೂವರು ಶನಿವಾರ ದೆಹಲಿಯಿಂದ ನೇಪಾಳಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ತನಿಖೆಯ ಸಮಯದಲ್ಲಿ, ಅವರ ಬಳಿ ಯಾವುದೇ ಮಾನ್ಯ ದಾಖಲೆಗಳು ಕಂಡು ಬಂದಿಲ್ಲ. ಅನುಮಾನಗೊಂಡ ವಲಸೆ ಇಲಾಖೆ ತಡೆದು ಬ್ಯಾಗ್ ಪರಿಶೀಲಿಸಿದಾಗ ಇಪ್ಪತ್ತೈದು ಪ್ಯಾಕೆಟ್ ಗಾಂಜಾ ಪತ್ತೆಯಾಗಿದೆ.
ಬಂಧಿತರಿಂದ ಅಂದಾಜು 1.5 ಕೋಟಿ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ವಲಸೆ ಇಲಾಖೆ ಅವರನ್ನು ರಕ್ಸಾಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.
ಇದನ್ನೂ ಓದಿ: ಆಂಧ್ರದಲ್ಲಿ 13 ಹೊಸ ಜಿಲ್ಲೆಗಳ ರಚನೆ; ಡಿಸಿ, ಎಸ್ಪಿಗಳ ನೇಮಿಸಿದ ಜಗನ್ ಸರ್ಕಾರ