ನಮಕ್ಕಲ್(ತಮಿಳುನಾಡು): ತಮಿಳುನಾಡಿನ ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಇಂದು ಅಧಿಕಾರ ವಹಿಸಿಕೊಳ್ಳಲಿದ್ದು, ಕಳೆದ ಮೂರು ದಿನಗಳಿಂದ ರೋಡ್ ಶೋಗಳಲ್ಲಿ ಭಾಗಿಯಾಗಿದ್ದಾರೆ. ಇದರ ಮಧ್ಯೆ ಅವರ ನೀಡಿರುವ ಹೇಳಿಕೆವೊಂದು ಹೆಚ್ಚಿನ ವಿವಾದಕ್ಕೆ ಕಾರಣವಾಗಿದೆ.
ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಮಾಧ್ಯಮಗಳ ಬಗ್ಗೆ ಮರೆತು ಬಿಡಿ, ಮುಂದಿನ ಆರು ತಿಂಗಳಲ್ಲಿ ಮಾಧ್ಯಗಳ ಮೇಲೆ ನಾವು ನಿಯಂತ್ರಣ ಸಾಧಿಸಲಿದ್ದೇವೆ ಎಂದು ಹೇಳಿದ್ದಾರೆ. ಬಹಳಷ್ಟು ದಿನಗಳವರೆಗೆ ನಮ್ಮ ಬಗ್ಗೆ ಸುಳ್ಳು ಬಿತ್ತರಿಸಲು ಸಾಧ್ಯವಿಲ್ಲ. ಇದೀಗ ಅದಕ್ಕೆ ಕಡಿವಾಣ ಹಾಕಲಾಗುವುದು ಎಂದು ಹೇಳಿದ್ದಾರೆ. ಇವರ ಹೇಳಿಕೆ ಅಲ್ಲಿನ ಮಾಧ್ಯಮದಲ್ಲಿ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿರಿ: ಬಿಗ್ಬಾಸ್ ಮನೆಯಲ್ಲಿ ಒಂದಾದ ಮಾವ-ಅಳಿಯ... ಮಂಜುಗೆ ಕೈತುತ್ತು ತಿನ್ನಿಸಿದ ಪ್ರಶಾಂತ್!
ಈ ಹಿಂದೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿದ್ದ ಎಲ್. ಮುರುಗನ್ ಇದೀಗ ಸ್ಟಾಲಿನ್ ಸರ್ಕಾರದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದು, ಎಲ್ಲ ಮಾಧ್ಯಮಗಳು ಅವರ ಹಿಡಿತದಲ್ಲಿವೆ. ಹೀಗಾಗಿ ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈರೀತಿಯಾಗಿ ಹೆಚ್ಚಿನ ದಿನ ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವಿಚಾರವಾಗಿ ಟ್ವಿಟ್ ಮಾಡಿರುವ ತಮಿಳುನಾಡಿನ ಐಟಿ ಸಚಿವ ಮನೋ ತಂಗರಾಜ್ ಈ ರೀತಿಯಾಗಿ ಹೇಳಿಕೆ ನೀಡಿ ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.