ETV Bharat / bharat

ಸಂಸದರ ಅಮಾನತು ಹಿಂತೆಗೆತ: ಲೋಕಸಭೆಯಲ್ಲಿ ಹಣದುಬ್ಬರ ಮೇಲಿನ ಚರ್ಚೆ

ಪ್ರಮುಖ ಬೆಳವಣಿಗೆಯೊಂದರಲ್ಲಿ, ಸಂಸತ್ತಿನ ಮುಂಗಾರು ಅಧಿವೇಶನದ 11ನೇ ದಿನವಾದ ಸೋಮವಾರದಂದು ಕಾಂಗ್ರೆಸ್‌ನ ನಾಲ್ವರು ಲೋಕಸಭಾ ಸಂಸದರ ಅಮಾನತು ಹಿಂಪಡೆಯಲಾಗಿದೆ.

Withdrawal of suspension of MPs: Debate on inflation begins in Lok Sabha
ಸಂಸದರ ಅಮಾನತು ಹಿಂತೆಗೆತ: ಲೋಕಸಭೆಯಲ್ಲಿ ಹಣದುಬ್ಬರ ಮೇಲಿನ ಚರ್ಚೆ ಆರಂಭ
author img

By

Published : Aug 1, 2022, 3:49 PM IST

ನವದೆಹಲಿ: ಸಂಸತ್ತಿನಿಂದ ಕಾಂಗ್ರೆಸ್ ಸಂಸದರ ಅಮಾನತು ಆದೇಶವನ್ನು ಇಂದು (ಸೋಮವಾರ) ಹಿಂಪಡೆಯಲಾಗಿದೆ. ಪ್ರತಿಪಕ್ಷಗಳ ಸದಸ್ಯರ ಕೋಲಾಹಲದ ನಂತರ ಮುಂದೂಡಲ್ಪಟ್ಟಿದ್ದ ಉಭಯ ಸದನಗಳ ಕಲಾಪ ಮತ್ತೆ ಮಧ್ಯಾಹ್ನ 2ಕ್ಕೆ ಆರಂಭಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಸಂಸದರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಪ್ರಕಟಿಸಿದರು.

ಸಚಿವ ಪ್ರಹ್ಲಾದ ಜೋಶಿ ಸಂಸದರ ಅಮಾನತು ಆದೇಶ ಹಿಂಪಡೆಯವ ಪ್ರಸ್ತಾವನೆಯನ್ನು ಸದನದ ಮುಂದಿಟ್ಟಿದ್ದರು. ಅಮಾನತು ರದ್ದುಗೊಳಿಸುವ ಮುನ್ನ, ಪ್ರತಿಪಕ್ಷ ಸದಸ್ಯರು ಸದನದೊಳಗೆ ಮತ್ತೊಮ್ಮೆ ಭಿತ್ತಿಪತ್ರಗಳನ್ನು ತರುವುದಿಲ್ಲ ಎಂಬ ಷರತ್ತಿನ ಮೇರೆಗೆ ಸ್ಪೀಕರ್ ಅಮಾನತು ಆದೇಶವನ್ನು ಹಿಂಪಡೆದರು. ನಂತರ ಸದನದಲ್ಲಿ ಹಣದುಬ್ಬರದ ಮೇಲಿನ ಚರ್ಚೆ ಆರಂಭವಾಯಿತು.

ಏತನ್ಮಧ್ಯೆ, ರಾಜ್ಯಸಭೆಯಲ್ಲಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ತಿದ್ದುಪಡಿ ಮಸೂದೆ, 2022 ಯನ್ನು ಅಂಗೀಕರಿಸಲಾಯಿತು. ಈ ಮಸೂದೆ ಏಪ್ರಿಲ್‌ನಲ್ಲಿ ಲೋಕಸಭೆಯಲ್ಲಿ ಅನುಮೋದನೆ ಪಡೆದಿತ್ತು. ಬೆಲೆಯೇರಿಕೆ, ಇಡಿ ದುರುಪಯೋಗ, ಅಗ್ನಿಪಥ್ ಯೋಜನೆ ಮತ್ತು ಇತರ ವಿಷಯಗಳ ಬಗ್ಗೆ ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಿರುವ ಮಧ್ಯದಲ್ಲೇ ಈ ಮಸೂದೆ ಅಂಗೀಕಾರಗೊಂಡಿತು.

ಇದಕ್ಕೂ ಮುನ್ನ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಪಿಯೂಷ್ ಗೋಯಲ್ ಅವರು ಸದನವು ಸರಾಗವಾಗಿ ನಡೆಯಲು ಬಿಡದ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, “ನಾವು ಅನೇಕ ಮಸೂದೆಗಳನ್ನು ಪಾಸ್ ಮಾಡಬೇಕಿದೆ. ಆದರೆ ದುರದೃಷ್ಟವಶಾತ್ ಸದನವನ್ನು ಮುಂದೂಡಲಾಗುತ್ತಿದೆ. ಸಂಸದರು ಭಿತ್ತಿಪತ್ರಗಳೊಂದಿಗೆ ಬರುವುದಿಲ್ಲ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರು ಸದನದಲ್ಲಿ ಭರವಸೆ ನೀಡಿದರೆ, ನಾವು ಅಮಾನತು ಹಿಂಪಡೆಯಲು ಸಿದ್ಧರಿದ್ದೇವೆ." ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.