ಲಖನೌ(ಉತ್ತರ ಪ್ರದೇಶ) : 2013ರ ಮುಜಫರ್‌ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಬಿಜೆಪಿ ಮುಖಂಡರು ಸೇರಿ 52 ಮಂದಿ ಆರೋಪಿಗಳ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸಿದ ಪ್ರಕರಣವನ್ನು ಹಿಂಪಡೆಯಲು ಸಂಸದ ಮತ್ತು ಶಾಸಕರ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.
ಬಿಜೆಪಿ ನಾಯಕರಾದ ಉತ್ತರಪ್ರದೇಶ ಸಚಿವ ಸುರೇಶ್ ರಾಣಾ, ಸಂಗೀತ್ ಸೋಮ್, ಮಾಜಿ ಸಂಸದ ಭರ್ತೇಂಡು ಸಿಂಗ್ ಮತ್ತು ವಿಹೆಚ್‌ಪಿ ನಾಯಕಿ ಸಾಧ್ವಿ ಪ್ರಾಚಿಯವರಿಗೆ ವಿಶೇಷ ಶಾಸಕ/ಸಂಸದ ನ್ಯಾಯಾಲಯದ ನ್ಯಾಯಾಧೀಶ ರಾಮ್ ಸುಧ್ ಸಿಂಗ್ ಸರ್ಕಾರದ ವಕೀಲರಿಗೆ ಪ್ರಕರಣ ಹಿಂಪಡೆಯಲು ಅವಕಾಶ ನೀಡಿದ್ದಾರೆ.
ಮೇಲೆ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದಲ್ಲದೆ, ಪ್ರಚೋದನಕಾರಿ ಭಾಷಣ ಮಾಡಿ ಹಿಂಸಾಚಾರಕ್ಕೆ ಪ್ರಚೋದಿಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಪ್ರಕರಣ ಸಂಬಂಧ ಉತ್ತರಪ್ರದೇಶ ಸರ್ಕಾರವು ಆರೋಪಿಗಳ ಮೇಲೆ ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ, ಈ ಪ್ರಕರಣ ಹಿಂಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
2013ರಲ್ಲಿ ಮುಜಾಫರ್ನಗರ ಸೇರಿ ಸುತ್ತಲಿನ ಜಿಲ್ಲೆಯಲ್ಲಿ ನಡೆದ ಗಲಭೆಯಲ್ಲಿ 62 ಮಂದಿ ಮೃತಪಟ್ಟಿದ್ದರು, 93 ಮಂದಿ ಗಾಯಗೊಂಡಿದ್ದರು. ಅಲ್ಲದೆ ಸುಮಾರು 50 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: ಅಸ್ಸೋಂ ಕದನ ಕಣ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ