ETV Bharat / bharat

ಬಡ ರೈತರಿಗೆ ಭರ್ಜರಿ ಗನ್​, ಇದರ ಶಬ್ದಕ್ಕೆ ಆನೆಗಳೇ ಪೇರಿಕೀಳುತ್ತವೆ: ನೀವೂ ತಯಾರಿಸಿಕೊಳ್ಳಿ - ಇದನ್ನ ಮನೆಯಲ್ಲಿ ನೀವೇ ತಯಾರು ಮಾಡಬಹುದು

ಸ್ಥಳೀಯವಾಗಿ 'ಮೂಲವೇದಿ' ಬಿದಿರು ಬಂದೂಕು ಎಂದು ಕರೆಯಲ್ಪಡುವ ಈ ಉಪಕರಣವು ಮಾರಣಾಂತಿಕವಲ್ಲದ, ನೈಸರ್ಗಿಕ ಅಸ್ತ್ರವಾಗಿದೆ. ಜಮೀನುಗಳಿಗೆ ದಾಳಿ ಮಾಡುವ ಕಾಡುಪ್ರಾಣಿಗಳನ್ನು ಓಡಿಸಲು ಇದು ಬಹಳ ಪರಿಣಾಮಕಾರಿ.

ಬಿದಿರಿನಿಂದ ತಯಾರು ಮಾಡಿದ ಗನ್​
ಬಿದಿರಿನಿಂದ ತಯಾರು ಮಾಡಿದ ಗನ್​
author img

By

Published : Mar 3, 2022, 8:42 PM IST

Updated : Mar 3, 2022, 10:06 PM IST

ಇಡುಕ್ಕಿ(ಕೇರಳ): ಮಾರ್ಚ್ 3ರಂದು ವಿಶ್ವ ವನ್ಯಮೃಗಗಳ ದಿನ. ದಟ್ಟವಾದ ಜನಸಂಖ್ಯೆ ಹೊಂದಿರುವ ಕೇರಳದಲ್ಲಿ ಕಾಡುಪ್ರಾಣಿಗಳು ಮತ್ತು ಮನುಷ್ಯರ ನಡುವೆ ಹೆಚ್ಚುತ್ತಿರುವ ಸಂಘರ್ಷ ಚರ್ಚೆಯ ವಿಷಯವಾಗಿದೆ.

ಹೆಚ್ಚುತ್ತಿರುವ ಮಾನವ-ಪ್ರಾಣಿ ಹೋರಾಟದಿಂದ ಪ್ರಾಣಿಗಳು ಮತ್ತು ಮನುಷ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಾಣಿಗಳನ್ನು ಓಡಿಸಲು ಜನರು ಬೆಂಕಿ ಬಾಣಗಳು ಮತ್ತು ಏರ್‌ಗನ್‌ಗಳಂತಹ ಹಾನಿಕಾರಕ ಕ್ರಮಗಳನ್ನು ಆಶ್ರಯಿಸುತ್ತಿದ್ದಾರೆ. ಇದರ ನಡುವೆ ಓರ್ವರು ಯಾರಿಗೂ ತೊಂದರೆ ಮಾಡದಂತಹ ವಿಭಿನ್ನ ಸಾಧನದ ಮೂಲಕ ಕಾಡುಪ್ರಾಣಿಗಳನ್ನು ಓಡಿಸುತ್ತಿದ್ದಾರೆ.

ಕೇರಳದ ಇಡುಕ್ಕಿ ಜಿಲ್ಲೆಯ ಕಂಜಿಯಾರ್‌ನ ಕುಂಜುಮೋನ್‌ ಅವರು ಈ ವಿಶಿಷ್ಟ ಸಾಧಕ ಕಂಡು ಹಿಡಿದಿದ್ದು ಇದಕ್ಕೆ ಬಿದಿರಿನ ತುಂಡು, ಹತ್ತಿಯ ಬಟ್ಟೆ ಮತ್ತು ಸ್ವಲ್ಪ ಸೀಮೆಎಣ್ಣೆ ಇದ್ದರೆ ಸಾಕು.

ಸ್ಥಳೀಯವಾಗಿ 'ಮೂಲವೇದಿ' ಬಿದಿರು ಬಂದೂಕು ಎಂದು ಕರೆಯಲ್ಪಡುವ ಈ ಉಪಕರಣವು ಮಾರಣಾಂತಿಕವಲ್ಲದ, ನೈಸರ್ಗಿಕ ಬಂದೂಕಾಗಿದೆ. ಜಮೀನುಗಳಿಗೆ ದಾಳಿ ಮಾಡುವ ಕಾಡು ಪ್ರಾಣಿಗಳನ್ನು ಓಡಿಸಲು ಇದು ಬಹಳ ಪರಿಣಾಮಕಾರಿ.

ಇದನ್ನೂ ಓದಿ: ಕದ್ದ ಯುದ್ಧ ಟ್ಯಾಂಕರ್​ನ್ನು ಆನ್​ಲೈನ್​ನಲ್ಲಿ ಮಾರಾಟಕ್ಕಿಟ್ಟನಾ ಉಕ್ರೇನ್​ ರೈತ!?

ನಾಲ್ಕು ಅಡಿಯ ಬಿದಿರಿನ ತುಂಡಿನಿಂದ ತಯಾರಿಸಿದ ಈ ಗನ್ ಪ್ರಾಣಿಗಳಿಗೆ ಯಾವುದೇ ಹಾನಿಯಾಗದಂತೆ ದೊಡ್ಡ ರೀತಿಯ ಶಬ್ದ ಮಾತ್ರ ಮಾಡುತ್ತದೆ. ದಶಕಗಳ ಹಿಂದೆ ಪ್ರಾಣಿಗಳನ್ನು ಓಡಿಸಲು ಮೂಲವೇದಿ ಅತ್ಯಂತ ಪ್ರಮುಖ ಸಾಧನವಾಗಿತ್ತು. ಆದರೆ, ಪರಿಣಾಮಕಾರಿ ಸಾಧನವನ್ನು ತಯಾರಿಸಲು ಪರಿಣತಿಯನ್ನು ಹೊಂದಿರುವ ಜನರ ಕೊರತೆಯ ಹಿನ್ನೆಲೆಯಲ್ಲಿ ಅದು ಹೆಚ್ಚು ಬಳಕೆಗೆ ಬಂದಿಲ್ಲ. ಆದಾಗ್ಯೂ, ಕುಂಜುಮೋನ್ ಹಿಂದಿನಿಂದಲೂ ಈ ಸಾಧನ ತಯಾರಿಸುತ್ತಿದ್ದಾರೆ. ಕುಂಜುಮೋನ್ ಈಗ ತಮ್ಮ 'ಬಿದಿರಿನ ಗನ್' ಪ್ರದರ್ಶಿಸಲು ಚರ್ಚ್ ಹಬ್ಬಗಳಿಗೆ ಆಹ್ವಾನಗಳನ್ನು ಸಹ ಪಡೆಯುತ್ತಿದ್ದಾರೆ.

ದಾಳಿ ಮಾಡುವ ಪ್ರಾಣಿಗಳನ್ನು ಓಡಿಸಲು ಇಂತಹ ನಿರುಪದ್ರವಿ ಉಪಕರಣಗಳನ್ನು ಬಳಸಬೇಕೆಂದು ಕುಂಜುಮೋನ್ ಹೇಳುತ್ತಾರೆ. ಅದಕ್ಕಾಗಿಯೇ ಅವನು ಅವುಗಳನ್ನು ತಯಾರಿಸುವುದನ್ನು ಮುಂದುವರಿಸಿದ್ದೇನೆ ಎನ್ನುತ್ತಿದ್ದಾರೆ ಕುಂಜುಮೋನ್. ನನ್ನ ಅಜ್ಜ ಮತ್ತು ತಂದೆ ಈ ಪ್ರದೇಶಕ್ಕೆ ವಲಸೆ ಬಂದಾಗ ಅವರು ಆನೆ ಮತ್ತು ಕಾಡುಹಂದಿಗಳನ್ನು ಓಡಿಸಲು ಇದನ್ನು ಬಳಕೆ ಮಾಡುತ್ತಿದ್ದರು. ನಾನು ಅವರಿಂದ ಕಲಿತಿದ್ದೇನೆ. ಬಿದಿರು ಚೆನ್ನಾಗಿದ್ದರೆ, ಧ್ವನಿ ತುಂಬಾ ಚೆನ್ನಾಗಿ ಬರುತ್ತದೆ ಎಂದು ಹೇಳಿದ್ದಾರೆ.

ಇದನ್ನು ನಿರ್ಮಾಣ ಮಾಡುವುದು ಹೇಗೆ? ಇಲ್ಲಿ ತಂತ್ರ ಬೇಕಿರುವುದು ನಾವು ಹೇಗೆ ಅದನ್ನು ಬಳಕೆ ಮಾಡುತ್ತೇವೆ ಎಂಬುದರ ಕೌಶಲ. ಕೊರೆಯಲಾದ ಹೋಲ್​ನಲ್ಲಿ ಸ್ವಲ್ಪ ಕಾಟನ್​ ಬಟ್ಟೆ ಹಾಕಬೇಕು. ಅದಕ್ಕೂ ಮೊದಲು ಆ ಬಿದಿರಿನ ಗನ್​ನ ಮುಂದಿನ ಭಾಗವನ್ನು ಸ್ವಲ್ಪ ಎತ್ತರ ಇರುವಂತೆ ಮಾಡಿಕೊಳ್ಳಬೇಕು. ಇನ್ನು ಹೋಲ್​ನಲ್ಲಿ ಬಟ್ಟೆ ಹಾಕಿದ ನಂತರ 100 ಎಂಎಲ್​ನಷ್ಟು ಸೀಮೆ ಎಣ್ಣೆ ಹಾಕಿ ನಂತರ ಉರಿಯುತ್ತಿರುವ ಸಣ್ಣ ಕಟ್ಟಿಗೆಯನ್ನು ಬಾಯಿಯಿಂದ ಗಾಳಿ ಊದುವುದರ ಜೊತೆ ಅಲ್ಲಿಗೆ ಇಡಬೇಕು. ಅಲ್ಲಿ ಒತ್ತಡ ನಿರ್ಮಾಣ ದೊಡ್ಡ ಶಬ್ದ ಹೊರಬರುತ್ತದೆ.

Last Updated : Mar 3, 2022, 10:06 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.