ನವದೆಹಲಿ: ಭಾರತದಲ್ಲಿ ಕೋವಿಡ್ ಮೃತರ ಸಂಖ್ಯೆ 1,47,343ಕ್ಕೆ ಏರಿಕೆಯಾಗಿದ್ದರೂ, ದಿನನಿತ್ಯ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಶುಕ್ರವಾರ 251 ಮಂದಿ ವೈರಸ್ನಿಂದ ಮೃತಪಟ್ಟಿದ್ದಾರೆ.
-
#IndiaFightsCorona#Unite2FightCorona pic.twitter.com/GVZlHB6OjH
— Ministry of Health (@MoHFW_INDIA) December 26, 2020 " class="align-text-top noRightClick twitterSection" data="
">#IndiaFightsCorona#Unite2FightCorona pic.twitter.com/GVZlHB6OjH
— Ministry of Health (@MoHFW_INDIA) December 26, 2020#IndiaFightsCorona#Unite2FightCorona pic.twitter.com/GVZlHB6OjH
— Ministry of Health (@MoHFW_INDIA) December 26, 2020
ಕಳೆದ 24 ಗಂಟೆಗಳಲ್ಲಿ 22,272 ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಕೇಸ್ಗಳ ಸಂಖ್ಯೆ 1,01,69,118ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 97,40,108 ಮಂದಿ ಗುಣಮುಖರಾಗಿದ್ದಾರೆ.
ಓದಿ: ಕೋವಿಡ್ ಲಸಿಕೆ ಪಡೆದ ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್
ಜನಸಂಖ್ಯೆಯ ಆಧಾರದ ಮೇಲೆ ಕೋವಿಡ್ ಪೀಡಿತ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲೇ ಅತಿಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇನ್ನು ಉಳಿದಂತೆ 2,81,667 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಡಿಸೆಂಬರ್ 25ರ ವರೆಗೆ 16,71,59,28 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 8,53,527 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.