ETV Bharat / bharat

ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಮಹಿಳಾ ಹಾಕಿ ಟೀಂ : ಗಣ್ಯರಿಂದ ಅಭಿನಂದನೆಗಳ ಮಹಾಪೂರ - ಗಣ್ಯರಿಂದ ಶುಭಾಷಯ

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದಿಸಿದ್ದಾರೆ. ​

Indian Women Hockey Team
ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಮಹಿಳಾ ಹಾಕಿ ಟೀಂ
author img

By

Published : Aug 2, 2021, 12:32 PM IST

ಟೋಕಿಯೋ: ಒಲಿಂಪಿಕ್ಸ್​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿರುವ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಮಿಫೈನಲ್​ಗೆ ಲಗ್ಗೆಯಿಟ್ಟಿರುವ ಭಾರತದ ತಂಡಕ್ಕೆ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಪ್ರಧಾನಿ ಮೋದಿ : ಪಿ.ವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ. ಪುರುಷ ಮತ್ತು ಮಹಿಳೆಯರ ಹಾಕಿ ತಂಡಗಳು ಕೂಡ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಪ್ರಯತ್ನಗಳನ್ನು ಮಾಡಿವೆ. 130 ಕೋಟಿ ಭಾರತೀಯರು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶ ಉನ್ನತ ಮಟ್ಟಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮಹಿಳಾ ಹಾಕಿ ತಂಡ ಸೇರಿದಂತೆ ಒಲಿಂಪಿಕ್ಸ್​ ಸಾಧಕರಿಗೆ ಅಭಿನಂದನೆ ಹೇಳಿದ್ದಾರೆ.

ಜಯಾ ಬಚ್ಚನ್ : ಭಾರತ ಮಹಿಳಾ ಹಾಕಿ ತಂಡ ಫೈನಲ್​ ಪಂದ್ಯದಲ್ಲೂ ಜಯ ಗಳಿಸಲಿದೆ. ಈ ಮೂಲಕ ದೇಶಕ್ಕೆ ಗೌರವ ತಂದು ಕೊಡಲಿದೆ ಎಂದು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಸಂಸತ್ ಬಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಿರಣ್ ರಿಜಿಜು : ಭಾರತದ ಕನಸು ನನಸಾಗುತ್ತಿದೆ. ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಟೋಕಿಯೋ ಒಲಿಂಪಿಕ್ಸ್​ನ ಸೆಮಿ ಫೈನಲ್​ ತಲುಪಿವೆ ಎಂದು ಕೇಂದ್ರ ಕಾನೂನು ಮತ್ತು ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಸಂತಸ ವ್ಯಕ್ತಪಡಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ : ಮತ್ತೊಂದು ಐತಿಹಾಸಿಕ ಗೆಲುವು. ಪುರುಷರ ತಂಡದ ನಂತರ, ಈಗ ಭಾರತೀಯ ಮಹಿಳಾ ಹಾಕಿ ತಂಡ ಕೂಡ ಟೋಕಿಯೋ ಒಲಿಂಪಿಕ್ಸ್‌ನ ಸೆಮಿಫೈನಲ್ ಪ್ರವೇಶಿಸಿದೆ. ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಬಸವರಾಜ ಬೊಮ್ಮಾಯಿ : ಆಸ್ಟ್ರೇಲಿಯಾ ತಂಡವನ್ನು 1:0 ಅಂತರದಿಂದ ಸೋಲಿಸಿ ಟೋಕಿಯೋ ಒಲಿಂಪಿಕ್ಸ್​ನ ಸೆಮಿಫೈನಲ್​ ತಲುಪುವ ಮೂಲಕ ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ಟೀಂ ಇಂಡಿಯಾಗೆ ಅಭಿನಂದನೆಗಳು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆನಂದ್ ಮಹೀಂದ್ರಾ : ಮಹಿಳಾ ಹಾಕಿ ತಂಡ ಸೆಮಿ ಫೈನಲ್ ಪ್ರವೇಶಿಸಿರುವ ಸುದ್ದಿಯ ಟ್ವೀಟ್ ಅನ್ನು ರಿ ಟ್ವೀಟ್ ಮಾಡಿರುವ ಮಹಿಂದ್ರಾ ಗ್ರೂಪ್ ಚೇರ್​ಮ್ಯಾನ್ ಆನಂದ್ ಮಹೀಂದ್ರಾ, ನೀವು ಎಲ್ಲೇ ಇದ್ದರೂ ಎದ್ದು ನಿಂತು ಈ ಹೀರೋಗಳಿಗೆ ಅರ್ಹವಾದ ಗೌರವ ನೀಡಿ ಎಂದು ಬರೆದುಕೊಂಡಿದ್ದಾರೆ.

ಓದಿ : ಚಕ್‌ದೇ ಇಂಡಿಯಾ! ಬಲಾಢ್ಯ ಆಸ್ಟ್ರೇಲಿಯಾ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ 'ಭಾರತೀ'ಯರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.