ಹೈದರಾಬಾದ್: ಮಹೆಶ್ವರಂನಲ್ಲಿ ವಿಪ್ರೋ ಕಂಪನಿ 300 ಕೋಟಿ ರೂಗಳ ಹೂಡಿಕೆಯೊಂದಿಗೆ ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್ ಕಾರ್ಖಾನೆಯನ್ನು ಆರಂಭಿಸಿದೆ. ತೆಲಂಗಾಣ ಕೈಗಾರಿಕಾ ಸಚಿವ ಕೆ ಟಿ ರಾಮರಾವ್ ಮತ್ತು ವಿಪ್ರೋ ಸಮೂಹದ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಈ ಕಾರ್ಖಾನೆ ಉದ್ಘಾಟಿಸಿದರು.
ವಿಪ್ರೋ ಕನ್ಸ್ಯೂಮರ್ ಕೇರ್ 2018 ರಲ್ಲಿ ಮಹೇಶ್ವರಂನಲ್ಲಿ 30 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಕಾರ್ಖಾನೆಯನ್ನು ಅಭಿವೃದ್ಧಿಪಡಿಸಿದೆ. ಸಂಸ್ಥೆಯು ಈ ಸೌಲಭ್ಯಕ್ಕಾಗಿ 300 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ. ಸಂತೂರ್ ಸೋಪ್‌ಗಳು ಮತ್ತು ಸಾಫ್ಟ್‌ಟಚ್ ಫ್ಯಾಬ್ರಿಕ್ ಕಂಡಿಷನರ್‌ಗಳನ್ನು ಉತ್ಪಾದಿಸುತ್ತದೆ. ಯಾರ್ಡ್ಲಿ ಟಾಲ್ಕಮ್ ಪೌಡರ್, ಸಂತೂರ್ ಹ್ಯಾಂಡ್ ವಾಶ್ ಮತ್ತು ಗಿಫಿ ಡಿಶ್ ವಾಶ್ ಉತ್ಪಾದಿಸಲಾಗುತ್ತದೆ.
ಈ ಕಾರ್ಖಾನೆ ಸುಮಾರು 900 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸಿದೆ. ಶೇಕಡಾ 90 ಕ್ಕಿಂತ ಹೆಚ್ಚು ಉದ್ಯೋಗಳನ್ನು ಸ್ಥಳೀಯರಿಗೆ ನೀಡಲಾಗಿದೆ. ಇದರಲ್ಲಿ ಶೇ 15 ರಷ್ಟು ಮಹಿಳೆಯರಿಗೆ ಉದ್ಯೋಗ ಒದಗಿಸಲಾಗಿದೆ. ಮಕ್ಕಳಿಗೆ ಇಲ್ಲಿ ಶಿಶು ವಿಹಾರವನ್ನು ಕೂಡಾ ತೆರೆಯಲಾಗಿದೆ ಎಂದು ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್ ಸಿಇಒ ವಿನೀತ್ ಅಗರವಾಲ್ ಹೇಳಿದರು.
ಇದನ್ನು ಓದಿ:ಪೆಟ್ರೋಲ್, ಡೀಸೆಲ್ 80 ಪೈಸೆ ಹೆಚ್ಚಳ: ಕಳೆದ 16 ದಿನಗಳಲ್ಲಿ 10 ರೂ. ದರ ಏರಿಕೆ