ನವದೆಹಲಿ: ಸಂಘರ್ಷದ ನೆಲೆಯಾಗಿರುವ ಪೂರ್ವ ಲಡಾಖ್ನಲ್ಲಿ ತೀವ್ರ ಚಳಿಯ ವಾತಾವರಣವಿದೆ. ಚೀನಾ ಸೈನಿಕರು ಪ್ರತಿದಿನವೂ ಬದಲಾವಣೆಯಾಗುತ್ತಿದ್ದು, ಅವರು ಚಳಿಗೆ ತಡೆದುಕೊಳ್ಳುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಲಡಾಖ್ನಲ್ಲಿ ನಿಯೋಜನೆಯಾಗಿರುವ ಭಾರತೀಯ ಸೇನೆಯ ಸಿಬ್ಬಂದಿ ಒಂದೇ ಸ್ಥಳದಲ್ಲಿ ಬಹುಕಾಲ ನಿಯೋಜಿಸಲ್ಪಟ್ಟಿದ್ದು, ಚೀನಾ ಸೇನೆಯ ಸಿಬ್ಬಂದಿ ದಿನವೂ ಬದಲಾಗುತ್ತಿದ್ದಾರೆ. ಕಠಿಣ ಹವಾಮಾನಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ಮೂಲವು ಎಎನ್ಐಗೆ ತಿಳಿಸಿದೆ.
ಇದನ್ನೂ ಓದಿ: ಟಿಬೆಟ್ನ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲು ಮುಂದಾದ ಚೀನಾ
ಸಿಯಾಚಿನ್ ಹಾಗೂ ಇತರ ಸ್ಥಳಗಳಲ್ಲಿ ಚಳಿ ಹೆಚ್ಚಾಗಿದ್ದು, ಹವಾಮಾನವನ್ನು ಎದುರಿಸುವ ವಿಚಾರದಲ್ಲಿ ಚೀನಾಗಿಂತ ಭಾರತದ ಸಿಬ್ಬಂದಿಯೇ ಮುಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚೀನಾ ಆಕ್ರಮಣಕಾರಿಯಾಗಿ ವರ್ತಿಸಿದ್ದು, ಪೂರ್ವ ಲಡಾಖ್ನಲ್ಲಿ ಸುಮಾರು 60 ಸಾವಿರ ಸೈನಿಕರನ್ನು ನಿಯೋಜನೆ ಮಾಡಿತ್ತು. ಜೊತೆಗೆ ಟ್ಯಾಂಕರ್ಗಳು ಕೂಡಾ ಕಳಿಸಿತ್ತು.
ಈಗ ಸದ್ಯಕ್ಕೆ ಆಕ್ರಮಣಶೀಲತೆ ಸ್ವಲ್ಪಮಟ್ಟಿಗೆ ಕಡಿಮೆಯಾಗೊದ್ದು, ಭಾರತ ಹಾಗೂ ಚೀನಾದ ನಡುವೆ ಮಾತುಕತೆ ನಡೆಯುತ್ತಿದ್ದು, ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ಎಂಟು ಸುತ್ತಿನ ಮಾತುಕತೆ ನಡೆಸಲಾಗಿದೆ.