ETV Bharat / bharat

ಗೇರುಹಣ್ಣಿನಲ್ಲಿ ವೈನ್ ತಯಾರಿಸಿ ಪೇಟೆಂಟ್‌ ಪಡೆದ ಮಂಗಳೂರಿನ ಎನ್​ಐಟಿಕೆ ಪ್ರೊಫೆಸರ್! - Mangalore NITK College Professor prepared Cashew Apple Wine

ಗೋವಾದಲ್ಲಿ ಗೇರುಹಣ್ಣಿನ ಮದ್ಯ ಲಭ್ಯವಿದೆ. ಆದರೆ ಗೇರುಹಣ್ಣಿನ ವೈನ್​ ಎಲ್ಲೂ ಇಲ್ಲ. ಇದೀಗ ಮಂಗಳೂರಿನ ಎನ್​ಐಟಿಕೆ ಪ್ರೊಫೆಸರ್​ ಪ್ರಸನ್ನ ಅವರು ಗೇರುಹಣ್ಣಿನಿಂದ ವೈನ್​ ತಯಾರಿಸಿ, ಯಶಸ್ವಿಯಾಗಿದ್ದು ಪೇಟೆಂಟ್​ ಕೂಡ ತಮ್ಮದಾಗಿಸಿಕೊಂಡಿದ್ದಾರೆ.

cashew apple wine: patent recieved by nitk professor
ಗೇರುಹಣ್ಣಿನಲ್ಲಿ ವೈನ್ ತಯಾರಿ - ಮಂಗಳೂರಿನ ಎನ್​ಐಟಿಕೆ ಪ್ರೊಫೆಸರ್ ಪಡೆದರು ಪೇಟೆಂಟ್
author img

By

Published : May 10, 2022, 1:08 PM IST

Updated : May 10, 2022, 1:18 PM IST

ಮಂಗಳೂರು: ಮಾರುಕಟ್ಟೆಗಳಲ್ಲಿ ವಿವಿಧ ಹಣ್ಣುಗಳಿಂದ ಮಾಡಿದ ವೈನ್​ಗಳು ದೊರೆಯುತ್ತದೆ. ಆದರೆ ಗೇರು ಹಣ್ಣಿನ (Cashew Apple) ವೈನ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸಾಮಾನ್ಯವಾಗಿ ಮರದಿಂದ ಗೇರುಹಣ್ಣು ಕೊಯ್ದು ಗೋಡಂಬಿಯನ್ನು ಮಾತ್ರ ಚೀಲಕ್ಕೆ ತುಂಬಿ ಹಣ್ಣನ್ನು ಬಿಸಾಡಲಾಗುತ್ತದೆ. ಹೀಗೆ ವ್ಯರ್ಥವಾಗುವ ಹಣ್ಣಿನಿಂದಲೇ ಮಂಗಳೂರಿನ ಪ್ರೊಫೆಸರ್ ಒಬ್ಬರು ವೈನ್ ತಯಾರಿಸಿ ಯಶಸ್ವಿಯಾಗಿದ್ದಾರೆ.

ಎನ್​ಐಟಿಕೆ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಪ್ರಸನ್ನ ಬಿ.ಡಿ. ಅವರು ಗೇರುಹಣ್ಣಿನಿಂದ ವೈನ್ ತಯಾರಿಸಿ ಯಶಸ್ವಿಯಾಗಿದ್ದಾರೆ. 2010ರಲ್ಲಿಯೇ ಇವರು ವೈನ್ ತಯಾರಿಸಿ ಯಶ ಕಂಡಿದ್ದರು. ಆದರೆ ಇದೀಗಷ್ಟೆ ಭಾರತೀಯ ಪೇಟೆಂಟ್ ದೊರೆತಿದೆ.

ಉಳಿದ ಹಣ್ಣಿನಿಂದ ಮಾಡುವ ವೈನ್​ಗಿಂತಲೂ ಗೇರು ಹಣ್ಣಿನಲ್ಲಿ ಮಾಡುವ ವೈನ್​ಗೆ ಸವಾಲುಗಳು ಜಾಸ್ತಿ. ಗೇರು ಹಣ್ಣಿನಿಂದ ಮಾಡುವ ಮದ್ಯದಲ್ಲಿರುವ ವಾಸನೆ, ಬಣ್ಣದಿಂದಾಗಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಇದಕ್ಕಾಗಿ ಈ ಪ್ರೊಫೆಸರ್ ವಿಶೇಷ ಪ್ರಯತ್ನ ಮಾಡಿ ಇದರ ವಾಸನೆ, ಬಣ್ಣವನ್ನು ಮಾರ್ಪಾಡು ಮಾಡುವಲ್ಲಿ ಸಫಲರಾಗಿದ್ದಾರೆ.

ಗೇರುಹಣ್ಣಿನಲ್ಲಿ ವೈನ್ ತಯಾರಿ - ಮಂಗಳೂರಿನ ಎನ್​ಐಟಿಕೆ ಪ್ರೊಫೆಸರ್ ಪಡೆದರು ಪೇಟೆಂಟ್

ಗೇರುಹಣ್ಣಿನ ಮದ್ಯವನ್ನು ಗೋವಾದಲ್ಲಿ ತಯಾರಿಸಲಾಗುತ್ತಿದ್ದರೂ ಉಳಿದೆಡೆ ಲಭ್ಯವಿಲ್ಲ. ಗೋವಾದಲ್ಲಿ ಗೇರುಹಣ್ಣನ್ನು ಕೊಳೆಸಿ ಮದ್ಯ ತಯಾರಿಕೆ ಮಾಡಲಾಗುತ್ತದೆ. ಆದರೆ ಇದರಿಂದ ವೈನ್ ತಯಾರಿಸುತ್ತಿರುವುದು ಇದೇ ಮೊದಲು. ಈ ವೈನ್​ನಲ್ಲಿ ಗೇರು ಹಣ್ಣಿನ ಮದ್ಯದಂತೆ ಕಿಕ್ ಇಲ್ಲ. ಇದರ ಆಲ್ಕೊಹಾಲ್ ಪ್ರಮಾಣವನ್ನು ಶೇಕಡಾ 8 ರಿಂದ 15 ಶೇಕಡಾದವರೆಗೆ ಇಳಿಸಲಾಗಿದೆ. ಗ್ಲಾಸ್​ಗೆ ವೈನ್ ಸುರಿದಾಗ ಹಿತವಾದ ಪರಿಮಳ ಬಂದರೆ, ಕುಡಿದಾಗ ಹುಳಿ, ಸಿಹಿ ಹಾಗೂ ಒಗರುಮಿಶ್ರಿತ ರುಚಿಯಿರುವಂತೆ ಮಾಡಲಾಗಿದೆ.

ಗೇರುಹಣ್ಣಿನ ವೈನನ್ನು ಗುಣಮಟ್ಟದ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾಗಿದೆ. 500 ಲೀಟರ್‌ ಸಾಮರ್ಥ್ಯ ಇರುವ ಪ್ಲಾಂಟ್​ನಲ್ಲಿ ವೈನ್ ತಯಾರಿಸಿ ಅದಕ್ಕೆ ತಗುಲುವ ಖರ್ಚು ವೆಚ್ಚಗಳು ಮತ್ತು ಯಾವ ರೀತಿಯಲ್ಲಿ ತಯಾರು ಮಾಡಬಹುದು ಎಂದು ಪ್ರಯೋಗ ಮಾಡಲಾಗಿದೆ.

2010ರಲ್ಲಿಯೇ ಇವರು ವೈನ್ ತಯಾರಿಸುವ ಸಂಶೋಧನೆ ಆರಂಭಿಸಿ ಯಶಸ್ವಿಯಾಗಿದ್ದು 2012 ರಲ್ಲಿ ಪೇಟೆಂಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಇದಕ್ಕೆ ಪೇಟೆಂಟ್ ದೊರೆತಿದೆ. ಪೇಟೆಂಟ್​ ಅನ್ನು ಎನ್​ಐಟಿಕೆಗೆ ನೀಡಲು ನಿರ್ಧರಿಸಲಾಗಿದ್ದು, ಅವರ ಮೂಲಕ ವೈನ್ ತಯಾರಕರಿಗೆ ಸಿಗಲಿದೆ. ಮದ್ಯ ತಯಾರಿಕರ ಮೂಲಕ ಹೊಸ ರುಚಿಯ ಗೇರುಹಣ್ಣಿನ ವೈನ್ ಮಾರುಕಟ್ಟೆಗೆ ಲಭ್ಯವಾಗಲಿದೆ.

ಇದನ್ನೂ ಓದಿ: ಕಿರುಕುಳ ನೀಡಲು ಬಂದ್ರೆ 1000 ವೋಲ್ಟ್​ ಶಾಕ್..​ ಮಹಿಳೆಯರ ಸುರಕ್ಷತೆಗೆ ಸಾಧನ ಆವಿಷ್ಕರಿಸಿದ ಬಿ.ಕಾಂ ವಿದ್ಯಾರ್ಥಿನಿ

Last Updated : May 10, 2022, 1:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.