ETV Bharat / bharat

ಮಲಪ್ಪುರಂ ಕ್ಷೇತ್ರದಲ್ಲಿ ಕಮಲ ಅರಳಿಸಲು ಮುಂದಾದ ಎ.ಪಿ ಅಬ್ದುಲ್ಲಕುಟ್ಟಿ

ಬಿಜೆಪಿ ಮುಖಂಡ ಎ.ಪಿ.ಅಬ್ದುಲ್ಲಕುಟ್ಟಿ ಅವರು ಮಲಪ್ಪುರಂ ಕ್ಷೇತ್ರದಿಂದ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ.

author img

By

Published : Mar 10, 2021, 10:26 AM IST

ಎ.ಪಿ ಅಬ್ದುಲ್ಲಕುಟ್ಟಿ
ಎ.ಪಿ ಅಬ್ದುಲ್ಲಕುಟ್ಟಿ

ತಿರುವನಂತಪುರ(ಕೇರಳ): ಮುಂಬರುವ ಲೋಕಸಭಾ ಉಪಚುನಾವಣೆಗೆ ಮಲಪ್ಪುರಂ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪರವಾಗಿ ಸ್ಪರ್ಧಿಸಲು ಬಿಜೆಪಿ ಮುಖಂಡ ಎ.ಪಿ ಅಬ್ದುಲ್ಲಕುಟ್ಟಿ ಸಜ್ಜಾಗಿದ್ದಾರೆ ಎನ್ನಲಾಗಿದೆ.

ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಹೊಗಳಿದ ಕಾರಣಕ್ಕೆ ಅಬ್ದುಲ್ಲಕುಟ್ಟಿ ಅವರನ್ನು 2009ರಲ್ಲಿ ಸಿಪಿಎಂನಿಂದ ಉಚ್ಚಾಟಿಸಲಾಗಿತ್ತು. ಆನಂತರ ಅವರು ಕಾಂಗ್ರೆಸ್‌ ಸೇರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಪುನಃ ಮೋದಿಯನ್ನು ಹೊಗಳಿದ ಕಾರಣಕ್ಕೆ ಕಾಂಗ್ರೆಸ್‌ನಿಂದಲೂ ಉಚ್ಚಾಟನೆಗೊಂಡರು.

ಇನ್ನು 2019 ರ ಹೊತ್ತಿಗೆ ಅಬ್ದುಲ್ಲಕುಟ್ಟಿ ಅವರು ಬಿಜೆಪಿ ಪಕ್ಷದಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಜಕೀಯ ರಂಗದಲ್ಲಿ ಮತ್ತೆ ಕಾಣಿಸಿಕೊಂಡರು. ಬಿಜೆಪಿ ರಾಜ್ಯ ನಾಯಕತ್ವವು ಅಬ್ದುಲ್ಲಕುಟ್ಟಿ ಅವರನ್ನು ಆಧಾರದಿಂದ ಸ್ವಾಗತಿಸಿತು. ಇದೀಗ ರಾಷ್ಟ ಮಟ್ಟದಲ್ಲಿ ಗಮನ ಸೆಳೆಯಲು ಬಿಜೆಪಿ, ಅಬ್ದುಲ್ಲ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ನಿರ್ಧರಿಸಿದೆ. ಆದರಂತೆ ಅಬ್ದುಲ್ಲಕುಟ್ಟಿ ಅವರು ಮಲಪ್ಪುರಂ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧರಾಗುತ್ತಿದ್ದು, ಕೇರಳದ ರಾಜಕೀಯವು ಭಾರೀ ಕುತೂಹಲ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.