ETV Bharat / bharat

ಗುಜರಾತ್ ವಿಧಾನಸಭೆ ಚುನಾವಣೆ ಬಳಿಕ ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಗಬಹುದೇ? - 2024 Lok Sabha Elections

2022 ರ ಗುಜರಾತ್ ವಿಧಾನಸಭೆ ಚುನಾವಣೆ ಬಳಿಕ ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷವಾಗಲಿದೆಯೇ? ಪ್ರಸ್ತುತ ವಿಧಾನಸಭೆಯಲ್ಲಿ ಎಎಪಿ ರಾಷ್ಟ್ರೀಯ ಪಕ್ಷವಾಗಲು ಶೇ.6ರಷ್ಟು ಮತ ಗಳಿಸಲೇಬೇಕು. ಅಷ್ಟೇ ಅಲ್ಲ..

Etv Bharat
ಆಮ್ ಆದ್ಮಿ ಪಕ್ಷದ ಚಿತ್ರ
author img

By

Published : Nov 18, 2022, 4:12 PM IST

ಗುಜರಾತ್ ವಿಧಾನಸಭೆ ಚುನಾವಣೆ 2022 ರಲ್ಲಿ ಜಯ ದಾಖಲಿಸಲು ಆಮ್ ಆದ್ಮಿ ಪಕ್ಷವು ಬಿರುಸಿನ ಪ್ರಚಾರ ಕೈಗೊಂಡಿದೆ. ಹೊಸ ರಣನೀತಿ, ತಂತ್ರ-ಪ್ರತಿತಂತ್ರ ರೂಪಿಸುವ ಮೂಲಕ ಆಪ್‌ ಗೆಲುವು ಸಾಧಿಸಲು ಹವಣಿಸುತ್ತಿದೆ. ಇಲ್ಲಿ ಹೆಚ್ಚು ಸ್ಥಾನ ಗೆದ್ದರೆ ರಾಷ್ಟ್ರೀಯ ಪಕ್ಷವಾಗಿ ಎಎಪಿ ದೇಶಾದ್ಯಂತ ವಿಸ್ತರಿಸಲಿದೆಯೇ? 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧವಿದೆಯೇ? ಮುಂದೆ ಭಾರತದಾದ್ಯಂತ ಒಂದೇ ಚಿಹ್ನೆಯೊಂದಿಗೆ ಸ್ಪರ್ಧಿಸಬಹುದೇ? ರಾಷ್ಟ್ರೀಯ ಪಕ್ಷವಾಗಲು ಎಎಪಿ ಏನು ಮಾಡಬೇಕು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ.

ದೆಹಲಿಯಲ್ಲಿ ಭದ್ರ ನೆಲೆ ರೂಪಿಸಿರುವ ಎಎಪಿ ನಾಯಕರು ಇತ್ತೀಚಿಗೆ ಮೂರು ತಿಂಗಳಿಂದ ಗುಜರಾತ್‌ನಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಗುಜರಾತ್ ರಾಜ್ಯ ಉಸ್ತುವಾರಿ ಸಂಸದ ರಾಘವ್ ಚಡ್ಡಾ ಅವರು ರಾಜ್ಯದಲ್ಲೇ ಉಳಿದುಕೊಂಡು ರೋಡ್‌ ಶೋ, ಸಾರ್ವಜನಿಕ ಸಭೆ, ಮಾಧ್ಯಮ ಶೋ ಮತ್ತು ವ್ಯಾಪಕ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಪ್ರಸ್ತುತ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿರಲು ಶೇ.6ರಷ್ಟು ಮತ ಗಳಿಸಲೇಬೇಕು. ಲೋಕಸಭೆಗೆ ಸಾರ್ವತ್ರಿಕ ಚುನಾವಣೆಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೆ ಅಥವಾ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 2ರಷ್ಟು ಮತ ಪಡೆಯಬೇಕು. ಅಲ್ಲದೇ, ಪ್ರಾದೇಶಿಕ ಪಕ್ಷವಾಗಿ ನಾಲ್ಕು ರಾಜ್ಯಗಳ ಚುನಾವಣೆಗೆ ಸ್ಪರ್ಧಿಸುವುದೂ ಸೇರಿ ಈ ಷರತ್ತುಗಳನ್ನು ಪೂರೈಸಿದರೆ ರಾಜಕೀಯವಾಗಿ ರಾಷ್ಟ್ರೀಯ ಪಕ್ಷವಾಗುವುದು ಖಚಿತವಾಗಲಿದೆ.

ದೆಹಲಿ ವಿಧಾನಸಭೆ: ಆಮ್ ಆದ್ಮಿ ಪಕ್ಷವು 2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಒಟ್ಟು 70 ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಗೆದ್ದಿತ್ತು. 2015ರಲ್ಲಿ 70ರಲ್ಲಿ 67 ಸ್ಥಾನಗಳನ್ನು ಭರ್ಜರಿಯಾಗಿ ವಿಜಯ ಸಾಧಿಸುವುದರೊಂದಿಗೆ ಅಧಿಕಾರಕ್ಕೇರಿತು. 2020 ರಲ್ಲಿ 70 ರಲ್ಲಿ 62 ಸ್ಥಾನಗಳನ್ನು ಮತ್ತೆ ಗೆದ್ದು ದೆಹಲಿಯಲ್ಲಿ ಅಧಿಕಾರವನ್ನು ಪುನರ್ ಸ್ಥಾಪಿಸಿತು.

ಪಂಜಾಬ್ ವಿಧಾನಸಭೆ: 2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಪ್ ಒಟ್ಟು 112 ಸ್ಥಾನಗಳಲ್ಲಿ 20 ಸ್ಥಾನಗಳನ್ನು ಗೆದ್ದಿತ್ತು. 2022 ರಲ್ಲಿ ಒಟ್ಟು 117 ಸ್ಥಾನಗಳಲ್ಲಿ 92 ಗೆದ್ದು ಸರ್ಕಾರ ರಚಿಸಿತು.

ಲೋಕಸಭೆ: 2014 ರಲ್ಲಿ ಲೋಕಸಭೆಯಲ್ಲಿ ಒಟ್ಟು 432 ಸ್ಥಾನಗಳಲ್ಲಿ 4 ಸ್ಥಾನಗಳನ್ನು ಗೆದ್ದಿತ್ತು. 2019ರಲ್ಲಿ 35 ರಲ್ಲಿ 1 ಸ್ಥಾನ ಪಡೆದಿದೆ.

ದೆಹಲಿ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆ ಬಳಿಕ ಈಗ ಆಮ್ ಆದ್ಮಿ ಪಕ್ಷವು ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಯ ಕಡೆಗೆ ದೃಷ್ಟಿ ಹರಿಸಿದೆ. ಅಂದರೆ ಗುಜರಾತ್ ಅಸೆಂಬ್ಲಿ ಚುನಾವಣೆ 2022ರಲ್ಲಿ ಭಾರಿ ಸದ್ದು ಮಾಡುತ್ತಿದೆ. ಈಗ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಷರತ್ತು ಈಡೇರಲಿದೆ. ಶೇ 6 ರಷ್ಟು ಮತ ಹಂಚಿಕೆ ಪಡೆಯುವುದು ಎರಡನೇ ಷರತ್ತು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಶೇ 6 ಮತಗಳನ್ನು ಪಡೆಯಲು ಗುಜರಾತ್‌ನಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದೆ. ಆಮ್ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷವು ಸರ್ಕಾರ ರಚಿಸುವ ವಿಶ್ವಾಸವನ್ನೂ ಸಹ ಹೊಂದಿದೆ ಎನ್ನಲಾಗಿದೆ.

2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಶೇ 6ರಷ್ಟು ಮತ ಹಂಚಿಕೆಯನ್ನು ಸಾಧಿಸುವುದು ಕಷ್ಟವೇನಲ್ಲ. ಆದರೂ ಸುಲಭವಲ್ಲ ಎಂದು ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಹರೇಶ್ ಝಾಲಾ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಚುನಾವಣೆ ಪ್ರಚಾರದಲ್ಲಿ ಬಿಟ್ಟಿ ಹೇಳಿಕೆಗಳಿಂದ ಮೂಲಕ ಜನಸಾಮಾನ್ಯರಲ್ಲಿ ಹವಾ ಸೃಷ್ಟಿಸಿದ್ದಾರೆ. ಬದಲಾವಣೆ ಪರ್ವ ಹೆಸರಿನಲ್ಲಿ ಮುಂಚೂಣಿ ನಾಯಕ ಕೇಜ್ರಿವಾಲ್ ಪ್ರಚಾರ ನಡೆಸುತ್ತಿದ್ದಾರೆ.

ಆದರೆ ಅಂತಿಮವಾಗಿ ಮತದಾರ ಮತಗಟ್ಟೆವರೆಗೂ ಸ್ವಇಚ್ಛೆಯಿಂದ ಬಂದು ಪಕ್ಷದ ಪರ ಹಾಕಲು ಹುರಿದುಂಬಿಸಬೇಕಾಗಿದೆ. ಈಗ ಗಾಳಿ ಇದ್ದರೂ ಅಲೆ ಇಲ್ಲ. ಈ ಪರಿಸ್ಥಿತಿಯಲ್ಲಿ ಶೇ 6ರಷ್ಟು ಮತ ಗಳಿಸುವುದು ಕಷ್ಟ.

ರಾಜಕೀಯ ವಿಶ್ಲೇಷಕ ಪಾಲಾ ಅವರು ಮಾತನಾಡುತ್ತಾ, ಅರವಿಂದ್ ಕೇಜ್ರಿವಾಲ್ ಅವರ ರಣನೀತಿ, ತಂತ್ರದೊಂದಿಗೆ ಆಮ್ ಆದ್ಮಿ ಪಕ್ಷವು ಮುನ್ನಡೆಯುತ್ತಿದೆ. ದೆಹಲಿ, ಪಂಜಾಬ್, ಗೋವಾ, ಹಿಮಾಚಲ ಮತ್ತು ಈಗ ಗುಜರಾತ್ ನಂತಹ ಸಣ್ಣ ರಾಜ್ಯಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಅಲ್ಲಿ ಮತ ಹಂಚಿಕೆ ಸುಲಭವಾಗಿ ಪಡೆಯಬಹುದು. ಆಮ್ ಆದ್ಮಿಯವರು ಯುಪಿ ಮತ್ತು ಎಂಪಿಯಲ್ಲಿ ಗಮನ ಹರಿಸಲಿಲ್ಲ. 6 ರಷ್ಟು ಮತಗಳನ್ನು ಪಡೆದರೆ ಅದು ರಾಷ್ಟ್ರೀಯ ಪಕ್ಷವಾಗಲಿದೆ. ಇದರಿಂದ 2024 ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆಯ ಲಾಭ ಪಡೆಯುತ್ತದೆ. ಅದು ಕೂಡ ಆ ಕಡೆಗೆ ಸಾಗುತ್ತಿದೆ. ಆಮ್ ಆದ್ಮಿ ಪಕ್ಷವೂ ರಾಷ್ಟ್ರೀಯ ಪಕ್ಷವಾಗಿ ಪ್ರಧಾನಿ ಮೋದಿಗೆ ಸವಾಲಾಗಬಹುದು. ಪ್ರಬಲ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕೂರಬಹುದು. ಆದ್ದರಿಂದ, ಆಮ್ ಆದ್ಮಿ ಪಕ್ಷವು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರಸ್ತುತ ಶೇ 6 ರಷ್ಟು ಮತಗಳನ್ನು ಪಡೆಯಲು ಹಗಲಿರುಳು ಶ್ರಮಿಸುತ್ತಿದೆ. ಅಂತೂ ಈ ಬಾರಿಯ ಗುಜರಾತ್ ಚುನಾವಣೆ ಆಮ್ ಆದ್ಮಿಗೆ ದಿಕ್ಸೂಚಿಯಾಗಲಿದೆಯೇ? ಕಾದು ನೋಡಬೇಕಷ್ಟೇ.

ಇದನ್ನೂ ಓದಿ:24 ಮಾಜಿ ಕಾಂಗ್ರೆಸ್ಸಿಗರಿಗೆ ಬಿಜೆಪಿ ಟಿಕೆಟ್​.. ಗುಜರಾತಿನ ರಾಜಕೀಯದಲ್ಲಿ ನಡೆಯುತ್ತಿರುವುದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.