ETV Bharat / bharat

ಪತಿಯನ್ನು ಹತ್ಯೆ ಮಾಡಿ ಮನೆ ಆವರಣದಲ್ಲಿ ಹೂತಿಟ್ಟ ಪತ್ನಿ..!

ಪತಿಯನ್ನು ಕೊಂದು ತನ್ನ ಮನೆಯ ಆವರಣದಲ್ಲೇ ಗೃಹಿಣಿಯೊಬ್ಬಳು ಸಮಾಧಿ ಮಾಡಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ವನಸ್ಥಲಿ ಪುರಂನಲ್ಲಿ ನಡೆದಿದೆ.

wife-murdered-her-husband-and-buried-him-in-the-house-at-vanasthalipuram
ಪತಿಯನ್ನು ಹತ್ಯೆ ಮಾಡಿ ಮನೆ ಆವರಣದಲ್ಲಿ ಹೂತಿಟ್ಟ ಪತ್ನಿ..!
author img

By

Published : Mar 10, 2021, 7:27 PM IST

ವನಸ್ಥಲಿಪುರಂ, ರಂಗಾರೆಡ್ಡಿ ಜಿಲ್ಲೆ : ಪತ್ನಿ ತನ್ನ ಪತಿಯನ್ನು ಕೊಂದು ಮನೆಯ ಆವರಣದಲ್ಲಿಯೇ ಹೂತಿಟ್ಟ ದಾರುಣ ಘಟನೆ ರಂಗಾರೆಡ್ಡಿ ಜಿಲ್ಲೆಯ ವನಸ್ಥಲಿ ಪುರಂನಲ್ಲಿ ನಡೆದಿದೆ. ಈ ಮೂಲಕ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ.

ಫೆಬ್ರವರಿ 8ರಂದು ಗಗನ್ ಅಗರ್​ವಾಲ್ ಎಂಬ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ಆತನ ಪತ್ನಿ ನೌಸಿನ್ ಬೇಗಂ ಎಲ್​.ಬಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದರ ತನಿಖೆ ಕೈಗೊಂಡ ಪೊಲೀಸರು ತನಿಖೆ ಮುಂದುವರೆಸಿದ್ದರು.

ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಕಾಲಿಗೆ ಗಾಯ: ನಂದಿಗ್ರಾಮದಲ್ಲಿ ಮಮತಾ ಮೇಲೆ ಹಲ್ಲೆ?

ಗಗನ್ ಅಗರ್ವಾಲ್ ಸಂಬಂಧಿಗಳನ್ನು ವಿಚಾರಿಸಿ, ತನಿಖೆ ತೀವ್ರಗೊಳಿಸಿದಾಗ ಪತ್ನಿಯೇ ಆತನನ್ನು ಹತ್ಯೆ ಮಾಡಿ, ಮನೆಯ ಆವರಣದಲ್ಲಿಯೇ ಹೂತಿಟ್ಟಿರುವುದಾಗಿ ತಿಳಿದುಬಂದಿದೆ. ಈಗ ಮಹಿಳೆಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

ಎರಡು ವರ್ಷಗಳ ಹಿಂದೆ ಗಗನ್ ಮೊದಲೇ ಪತ್ನಿಗೆ ವಿಚ್ಛೇದನ ನೀಡಿ, ನೌಸಿನ್ ಬೇಗಂಳನ್ನು ವಿವಾಹವಾಗಿದ್ದನು. ನೌಸಿನ್ ಬೇಗಂ ಈಗ ಗಗನ್​ ಅನ್ನು ಹತ್ಯೆ ಮಾಡಿದ್ದು, ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಸ್ಥಳೀಯ ತಹಶೀಲ್ದಾರ್ ಸಮಕ್ಷಮದಲ್ಲಿ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.