ETV Bharat / bharat

ಕೋವಿಡ್​ನಿಂದ ಸತ್ತನೆಂದು ಹತ್ತಿರಕ್ಕೂ ಬಾರದ ಸಂಬಂಧಿ.. ಪತಿ ಅಂತ್ಯಕ್ರಿಯೆ ನಡೆಸಿದ ಪತ್ನಿ - ಕೋವಿಡ್​ನಿಂದ ಸಾವನ್ನಪ್ಪಿದ ವ್ಯಕ್ತಿ ಅಂತ್ಯಕ್ರಿಯೆ

ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಆತನ ಅಂತ್ಯಕ್ರಿಯೆ ನಡೆಸಲು ಯಾರೂ ಮುಂದೆ ಬಾರದ ಕಾರಣ ಪತ್ನಿ ಏಕಾಂಗಿಯಾಗಿ ಮುಂದೆ ನಿಂತು ಎಲ್ಲ ಕೆಲಸ ಮಾಡಿ ಮುಗಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

WIFE DONE LAST RITUAL
WIFE DONE LAST RITUAL
author img

By

Published : May 16, 2021, 4:32 PM IST

ದರ್ಭಾಂಗ್​ (ಬಿಹಾರ): ಭಾರತೀಯ ಸಂಪ್ರದಾಯದಲ್ಲಿ ಸಂಬಂಧಗಳಿಗೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಕೋವಿಡ್​​ ಸಾಂಕ್ರಾಮಿಕ ಯುಗದಲ್ಲಿ ಸಂಬಂಧಗಳಿಗೆ ಯಾವುದೇ ರೀತಿಯ ಬೆಲೆ ಇಲ್ಲದಂತಾಗಿದೆ. ಅನಾರೋಗ್ಯದಿಂದ ಸಾವನ್ನಪ್ಪಿದರೂ ಕೋವಿಡ್​ ಎಂದು ಅಂತ್ಯಕ್ರಿಯೆಯಲ್ಲೂ ಭಾಗಿಯಾಗದಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಸದ್ಯ ಅಂತಹ ಘಟನೆವೊಂದು ಬಿಹಾರದ ದರ್ಭಾಂಗ್​​ದಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಮುಕ್ತಿಧಾಮ ಚಿತಾಗಾರದಲ್ಲಿ ಹೆಂಡತಿ ಏಕಾಂಗಿಯಾಗಿ ಗಂಡನ ಅಂತ್ಯಕ್ರಿಯೆ ನಡೆಸಿದ್ದಾಳೆ. ಸ್ನೇಹಿತರು ಅಥವಾ ಸಂಬಂಧಿಗಳು ಈ ವೇಳೆ ಆಕೆಯ ಸಹಾಯಕ್ಕೆ ನಿಂತಿಲ್ಲ.

ಕಳೆದ ನಾಲ್ಕು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯನ್ನ ಇಲ್ಲಿನ ರೋಸ್ಡಾದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾನೆ. ಈ ವೇಳೆ ಸಂಬಂಧಿಕರಿಗೆ ಕರೆ ಮಾಡಿದಾಗ ಯಾರು ಸಹ ಮುಂದೆ ಬಂದಿಲ್ಲ. ಹೀಗಾಗಿ ಪತ್ನಿ ಏಕಾಂಗಿಯಾಗಿ ಗಂಡನ ಅಂತ್ಯಕ್ರಿಯೆ ನಡೆಸಿದ್ದಾಳೆ.

ಕೋವಿಡ್​ನಿಂದ ಮೃತನಾದ ಗಂಡನ ಅಂತ್ಯಕ್ರಿಯೆ ನಡೆಸಿದ ಪತ್ನಿ

ಇದನ್ನೂ ಓದಿ: ಹೊಸದಲ್ಲ ಈ 'ಲಾಕ್​ಡೌನ್​​'.. 121 ವರ್ಷಗಳ ಹಿಂದೆಯೂ ಹೇರಲಾಗಿತ್ತು ಇಂತಹ ನಿರ್ಬಂಧ

ಕಬೀರ್​ ಸೇವಾ ಸಂಸ್ಥೆ ಸಹಾಯದೊಂದಿಗೆ ಅಂತಿಮ ವಿಧಿ-ವಿಧಾನ ನಡೆಸಿರುವ ಪತ್ನಿ, ಮುಕ್ತಿಧಾಮಕ್ಕೆ ಆ್ಯಂಬುಲೆನ್ಸ್​​ನಲ್ಲಿ ಮೃತದೇಹ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದಾಳೆ. ವಿಶೇಷವೆಂದರೆ ಕಬೀರ್ ಸೇವಾ ಸಂಸ್ಥೆಯ ಸಮಾಜ ಸೇವಕ ನವೀನ್ ಸಿನ್ಹಾ ಆಕೆಗೆ ಸಹಾಯ ಮಾಡಿದ್ದಾನೆ. ಗಂಡನ ಚಿತೆಗೆ ಬೆಂಕಿಯಿಟ್ಟು ಅಲ್ಲಿಂದ ಮನೆಗೆ ಬರುವುದಕ್ಕೂ ಕೂಡ ತನಗೆ ತೊಂದರೆಯಾಯಿತು ಎಂದು ಅಳಲು ಹೊರಹಾಕಿದ್ದಾಳೆ. ಜತೆಗೆ ಎಲ್ಲವೂ ಮುಗಿದ ಬಳಿಕ ಸಾವನ್ನಪ್ಪಿರುವ ಗಂಡನ ತಂದೆ ಹಾಗೂ ಕೆಲವರು ಚಿತಾಗಾರಕ್ಕೆ ಆಗಮಿಸಿದ್ದಾರೆಂದು ಮಾಹಿತಿ ನೀಡಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.