ETV Bharat / bharat

ಊಟದಲ್ಲಿ ಉಪ್ಪಿಲ್ಲ ಎಂದು ಪತಿ ತಗಾದೆ.. ಕೈಗೆ ಸಿಕ್ಕ ರಾಡ್​ನಿಂದ ತಲೆ ಒಡೆದಳು ಪತ್ನಿ - ಪತಿ ಮೇಲೆ ಹಲ್ಲೆ

ಊಟ ರುಚಿಕರವಾಗಿಲ್ಲ ಎಂಬ ಕಾರಣಕ್ಕೆ ಪತಿ - ಪತ್ನಿ ನಡುವೆ ಜಗಳ ಸಾಮಾನ್ಯ ಎಂಬಂತಾಗಿದೆ. ಆದರೆ, ಅದೇ ಜಗಳದಲ್ಲಿ ಪತಿ ಆಸ್ಪತ್ರೆ ಪಾಲಾಗಿದ್ದಾನೆ, ಆತನ ತಲೆಗೆ ರಾಡ್​​ನಿಂದ ಹಲ್ಲೆ ಮಾಡಲಾಗಿದ್ದು, ಪತ್ನಿ ವಿರುದ್ಧ ದೂರು ದಾಖಲಾಗಿದೆ.

wife-attack-on-her-husband-when-he-told-her-food-is-tasteless-in-hisar
ಕೈಗೆ ಸಿಕ್ಕ ರಾಡ್​ನಿಂದ ತಲೆ ಒಡೆದಳು ಪತ್ನಿ
author img

By

Published : Sep 7, 2021, 9:53 AM IST

ಹಿಸಾರ್​ (ಹರಿಯಾಣ): ಊಟ ರುಚಿಕರವಾಗಿಲ್ಲ ಎಂದು ಆರಂಭವಾದ ಪತಿ - ಪತ್ನಿ ನಡುವಿನ ಗಲಾಟೆಯಲ್ಲಿ ಪತಿ ಆಸ್ಪತ್ರೆ ಪಾಲಾಗಿದ್ದಾನೆ. ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ ಪತ್ನಿ ರಾಡ್​​​ನಿಂದ ಹಲ್ಲೆ ನಡೆಸಿದ್ದು, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಿಸಾರ್​​ನ ಬರ್ವಾಲಾದಲ್ಲಿ ನಡೆದಿದೆ.

ಊಟ ಮಾಡುವಾಗ ಊಟದಲ್ಲಿ ಉಪ್ಪಿಲ್ಲ ಎಂದು ಪತಿ ದಿನೇಶ್ ಗಲಾಟೆ ತೆಗೆದಿದ್ದಾನೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವೆ ಗಲಾಟೆ ಜೋರಾದಾಗ ಪಕ್ಕದಲ್ಲೇ ಇದ್ದ ರಾಡ್​ನಿಂದ ಪತ್ನಿ ಬಿಂದಿಯಾ ಪತಿ ದಿನೇಶ್​​ ತಲೆಗೆ ಹೊಡೆದಿದ್ದಾಳೆ.

ರಾಡ್​ನಿಂದ ಬಲವಾಗಿ ಪೆಟ್ಟು ಬಿದ್ದ ಹಿನ್ನೆಲೆ ಗಾಯಗೊಂಡ ದಿನೇಶ್​​ಗೆ ರಕ್ತಸ್ರಾವವಾಗಿದೆ. ತಕ್ಷಣ ಆತನನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪತ್ನಿ ಬಿಂದಿಯಾ ವಿರುದ್ಧ ಪೊಲೀಸ್​​​ ಠಾಣೆಯಲ್ಲಿ ದೂರು ದಾಖಲಾಗಿದೆ.

2011ರಲ್ಲಿ ಇಬ್ಬರಿಗೂ ವಿವಾಹವಾಗಿದ್ದು, ಇಬ್ಬರ ನಡುವೆ ಹಲವು ಬಾರಿ ಗಲಾಟೆ ನಡೆದಿದೆ ಎಂದು ಅಕ್ಕಪಕ್ಕದವರು ಮಾಹಿತಿ ನೀಡಿದ್ದಾರೆ. ಆದರೆ, ನಿನ್ನೆ ರಾತ್ರಿ ಗಲಾಟೆ ವಿಕೋಪಕ್ಕೆ ತಿರುಗಿ ಪತಿ ಮೇಲೆ ಹಲ್ಲೆ ನಡೆಸಿದ್ದಾಳೆ.

ಓದಿ: ಮಹಿಳೆಯರೊಂದಿಗೆ ಅಸಭ್ಯ ವರ್ತನೆ: ‘ಪೋಲಿ’ ಪೊಲೀಸಪ್ಪನಿಗೆ ಹಿಗ್ಗಾಮುಗ್ಗ ಜಾಡಿಸಿದ ಜನತೆ: Video

ETV Bharat Logo

Copyright © 2024 Ushodaya Enterprises Pvt. Ltd., All Rights Reserved.