ಹರಿದ್ವಾರ : 2022ರ ಆಸ್ಕರ್ ಪ್ರಶಸ್ತಿ ವಿಜೇತರ ಹೆಸರನ್ನು ಇಂದು ಪ್ರಕಟಿಸಲಾಗಿದೆ. ಹಾಲಿವುಡ್ ನಟ ವಿಲ್ ಸ್ಮಿತ್ ಅವರು ವೇದಿಕೆ ಮೇಲೆಯೇ ಕಾರ್ಯಕ್ರಮದ ನಿರೂಪಕನ ಕಪಾಳಕ್ಕೆ ಬಾರಿಸಿದ್ದರು. ಈ ಘಟನೆ ಈಗ ಪ್ರಪಂಚದಾದ್ಯಂತ ಭಾರಿ ಸಂಚಲನ ಉಂಟು ಮಾಡಿದೆ. ತಮ್ಮ ಹೆಂಡತಿ ಬಗ್ಗೆ ಮಾತನಾಡಿದ್ದಕ್ಕೆ ಈ ರೀತಿಯಾಗಿ ಹೊಡೆದೆ ಎಂದು ನಟ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಈಟಿವಿ ಭಾರತ ವಿಲ್ ಸ್ಮಿತ್ ಅವರ ಭಾರತೀಯ ಧಾರ್ಮಿಕ ಗುರು ಪ್ರತೀಕ್ ಮಿಶ್ರಾಪುರಿ ಅವರೊಂದಿಗೆ ಘಟನೆಯ ಬಗ್ಗೆ ಮಾತುಕತೆ ನಡೆಸಿದೆ. ವಿಲ್ ಸ್ಮಿತ್ ಭಾರತದ ಹರಿದ್ವಾರದೊಂದಿಗೆ ಸಂಪರ್ಕ ಹೊಂದಿದ್ದಾರೆ. ಆ ಘಟನೆಗೆ ಸಂಬಂಧಿಸಿದಂತೆ ಧಾರ್ಮಿಕ ಗುರು ಅವರು ಪ್ರತಿಕ್ರಿಯೆ ನೀಡಿದ್ದು, ವಿಲ್ ಸ್ಮಿತ್ ಕೋಪಗೊಳ್ಳುವ ವ್ಯಕ್ತಿ ಅಲ್ಲ. ಖಂಡಿತವಾಗಿಯೂ ಅವರು ತಮ್ಮ ಕುಟುಂಬದ ಬಗ್ಗೆ ತುಂಬಾ ಕಾಳಜಿವಹಿಸುತ್ತಾರೆ. ಅವರು ಹರಿದ್ವಾರಕ್ಕೆ ಬಂದಾಗಲೂ ಸಹ ಅವರು ತಮ್ಮ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಆಸ್ಕರ್ ವೇದಿಕೆಯಲ್ಲಿ ಏನೇ ನಡೆದಿದ್ದರು ಅದು ಆ್ಯಂಕರ್‌ನಿಂದ ಮಾತ್ರ ಸಂಭವಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: SSLC ಪರೀಕ್ಷೆ: 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು.. ಹಿಜಾಬ್ ತೆಗೆಯದ ಮೇಲ್ವಿಚಾರಕಿ ಅಮಾನತು
2018ರಲ್ಲಿ ವಿಲ್ ಸ್ಮಿತ್ ಹರಿದ್ವಾರದಲ್ಲಿ ವಿಶೇಷ ಆಚರಣೆಗಾಗಿ ಭಾರತಕ್ಕೆ ಆಗಮಿಸಿದ್ದರು. ಹಿಂದೂ ಗ್ರಹಗಳ ನಕ್ಷತ್ರಪುಂಜಗಳ ಪ್ರಕಾರ ಆಚರಣೆಯನ್ನು ಮಾಡಲು ಮತ್ತು ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷಿ ಪ್ರತೀಕ್ ಮಿಶ್ರಪುರಿಯನ್ನು ಭೇಟಿಯಾಗಿದ್ದರು. ಆ ವೇಳೆ ಪ್ರತೀಕ್ ಮಿಶ್ರಪುರಿ ಅವರು ಅವರ ಗ್ರಹಗಳ ನಕ್ಷತ್ರಪುಂಜಗಳನ್ನು ಅಧ್ಯಯನ ಮಾಡಿದ್ದರು. ಮತ್ತು ಹರಿದ್ವಾರದ ಶಿವ ದೇವಾಲಯದಲ್ಲಿ ಪೂಜಾ ವಿಧಿವಿಧಾನಗಳನ್ನೂ ಪೂರೈಸಿದ್ದರು.
ಹಾಲಿವುಡ್ ಕಲಾವಿದರೊಬ್ಬರು ಮಿಶ್ರಪುರಿ ಬಗ್ಗೆ ವಿಲ್ ಸ್ಮಿತ್‌ಗೆ ಹೇಳಿದ್ದರಂತೆ. ಹಲವಾರು ಸುತ್ತಿನ ಫೋನ್ ಸಂಭಾಷಣೆಗಳ ನಂತರ ಸ್ಮಿತ್ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿದ್ದ ಅವರು ಭಗವಾನ್ ಶಿವ ಮತ್ತು ಗಂಗಾ ಆರತಿ ಕಣ್ತುಂಬಿಕೊಂಡಿದ್ದರು. ನಾನು ವಿಲ್ ಸ್ಮಿತ್ ಅವರ ಜನ್ಮ ಕುಂಡಲಿಯನ್ನು ನೋಡಿದಾಗ, ಅವರ ಗ್ರಹಗಳ ನಕ್ಷತ್ರಪುಂಜಗಳು ತುಂಬಾ ಚೆನ್ನಾಗಿವೆ ಎಂದು ಕಂಡುಕೊಂಡಿದ್ದೇನೆ. ತುಲಾ ಒಳಗೆ ಶುಕ್ರನ ಸಂಯೋಗವಿತ್ತು ಮತ್ತು ಆ ಸಮಯದಲ್ಲಿ ಮಂಗಳವು ತುಂಬಾ ಪ್ರಬಲವಾಗಿತ್ತು ಎಂದಿದ್ದಾರೆ. ಹಿಂದೂ ದೇವತೆಗಳ ಆಶೀರ್ವಾದ ಅವರ ಮೇಲಿದ್ದು, ಇಂದು ಆಸ್ಕರ್ ಪ್ರಶಸ್ತಿ ಪಡೆದಿರುವುದು ನನಗೆ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.