ಲಖನೌ/ಉತ್ತರ ಪ್ರದೇಶ: ಕಾಶ್ಮೀರದ ಕುರಿತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮಾಡಬಹುದಾದ್ರೆ ಅಕ್ಟೋಬರ್ 2021ರಂದು ನಡೆದ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆಯೂ 'ಲಖಿಂಪುರ್ ಫೈಲ್ಸ್' ಎಂಬ ಸಿನಿಮಾ ಏಕೆ ಮಾಡಬಾರದು ಅಂತಾ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.
ನಿನ್ನೆ ಸಂಜೆ ಸೀತಾಪುರದಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆದ ಹಿಂಸಾಚಾರದ ಕುರಿತು ಸಿನಿಮಾ ಮಾಡಲಾಗಿದೆ. ಲಖೀಂಪುರ ಖೇರಿಯು ಸೀತಾಪುರದ ಪಕ್ಕದ ಜಿಲ್ಲೆಯಾಗಿದೆ. ಅಲ್ಲಿ ಪ್ರತಿಭಟನಾನಿರತ ರೈತರ ಗುಂಪಿನ ಮೇಲೆ ಜೀಪ್ ಹರಿಸಲಾಗಿತ್ತು. ಈ ಘಟನೆ ಕುರಿತು 'ಲಖಿಂಪುರ್ ಫೈಲ್ಸ್' ಎಂಬ ಚಿತ್ರವನ್ನ ಏಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಏನಿದು ಲಖಿಂಪುರ ಖೇರಿ ಘಟನೆ?: ಅಕ್ಟೋಬರ್ 3, 2021 ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿಗೆ ಯುಪಿ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ನೀಡಬೇಕಿತ್ತು. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಯೋಜಿಸಿದ್ದರು.
ಈ ವೇಳೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಪ್ರತಿಭಟನಾನಿರತ ರೈತರ ಮೇಲೆ ತಮ್ಮ ಕಾರು ಚಲಾಯಿಸಿದ್ದರು. ಪರಿಣಾಮ ಹೋರಾಟಗಾರರು, ಬಿಜೆಪಿ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಉರುಳಿಸಿದ್ದರು. ಈ ವೇಳೆ ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಸಾವನ್ನಪ್ಪಿದ್ದರು.
-
सफ़र में साँड़ तो मिलेंगे… जो चल सको तो चलो…
— Akhilesh Yadav (@yadavakhilesh) March 16, 2022 " class="align-text-top noRightClick twitterSection" data="
बड़ा कठिन है यूपी में सफ़र जो चल सको तो चलो! pic.twitter.com/ZunRV6qlPa
">सफ़र में साँड़ तो मिलेंगे… जो चल सको तो चलो…
— Akhilesh Yadav (@yadavakhilesh) March 16, 2022
बड़ा कठिन है यूपी में सफ़र जो चल सको तो चलो! pic.twitter.com/ZunRV6qlPaसफ़र में साँड़ तो मिलेंगे… जो चल सको तो चलो…
— Akhilesh Yadav (@yadavakhilesh) March 16, 2022
बड़ा कठिन है यूपी में सफ़र जो चल सको तो चलो! pic.twitter.com/ZunRV6qlPa
ಅಖಿಲೇಶ್ ಯಾದವ್ ಕಾರಿನ ಮುಂದೆ ಅಡ್ಡ ಬಂದ ಎತ್ತು: ಕಾರ್ಯಕ್ರಮದ ನಿಮಿತ್ತ ಸೀತಾಪುರಕ್ಕೆ ಪ್ರಯಾಣ ಬೆಳೆಸಿದ ವೇಳೆ ಅಖಿಲೇಶ್ ಯಾದವ್ ಅವರ ಕಾರಿನ ಮುಂದೆ ಎತ್ತು ಅಡ್ಡ ಬಂದಿತು. ಈ ದೃಶ್ಯವನ್ನು ವಿಡಿಯೋ ಮಾಡಿರುವ ಅಖಿಲೇಶ್, ಅದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. "ಸಫರ್ ಮೇ ಸಾಂಡ್ ತೋ ಮಿಲೇಂಗೆ" (ಪ್ರಯಾಣದ ವೇಳೆ ಇಲ್ಲಿ ಎತ್ತುಗಳು ಸಿಗುತ್ತವೆ). ನೀವು ನಡೆಯಬಲ್ಲಿರಿ ಎಂದಾದರೆ ಮಾತ್ರ ಬರಬಹುದು. ಉತ್ತರ ಪ್ರದೇಶದ ರಸ್ತೆಗಳಲ್ಲಿ ಪ್ರಯಾಣ ಮಾಡುವುದೇ ಕಷ್ಟ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ನ ಮನೆಗಳಲ್ಲಿ ರಷ್ಯಾ ಸೈನಿಕರಿಂದ ಆಹಾರ ಕಳ್ಳತನ: ಸುಮಿ ಗವರ್ನರ್