ETV Bharat / bharat

ಹಲ್ಲು ನೋವು, ಹಲ್ಲಿನ ಸೂಕ್ಷ್ಮ ಸಂವೇದನೆಗೆ ಶೀತ ಏಕೆ ಕಾರಣವಾಗುತ್ತದೆ?: ವಿಜ್ಞಾನಿಗಳ ಸಂಶೋಧನೆ - ಹಲ್ಲಿನಲ್ಲಿ ರಂಧ್ರ

ಈ ಸಂಶೋಧನೆ ವೇಳೆ, ಇಲಿಗಳನ್ನು ಪ್ರಯೋಗಕ್ಕೊಳಪಡಿಸಿ ಹಲ್ಲಿನ ನೋವು ಮತ್ತು ಸೂಕ್ಷ್ಮ ಸಂವೇದನೆಗೆ ಕಾರಣವನ್ನು ಕಂಡುಕೊಳ್ಳಲಾಗಿದೆ. ಸಂಶೋಧನೆ ವೇಳೆ ಹುಳುಕು ಹಲ್ಲುಗಳಿರುವ ಇಲಿಗಳು ಸಕ್ಕರೆ ನೀರು ಕುಡಿದಾಗ ಹಲ್ಲುಗಳಲ್ಲಿ ನೋವನ್ನು ಪ್ರದರ್ಶಿಸಿವೆ. ಆದರೆ ಹುಳುಕು ಹಲ್ಲಿನ ಬದಲು ಆರೋಗ್ಯವಂತ ಹಲ್ಲುಗಳನ್ನು ಹೊಂದಿರುವ ಇಲಿಗಳು ಈ ಇಲಿಗಳಿಗಿಂತ ಶೇಕಡಾ 300 ರಷ್ಟು ಹೆಚ್ಚು ಸಕ್ಕರೆ ನೀರನ್ನು ಕುಡಿದರೂ ಅವುಗಳು ಯಾವುದೇ ನೋವನ್ನು ತೋರಿಸಿಲ್ಲ.

anesthesia
ಹಲ್ಲಿನ ನೋವು
author img

By

Published : Mar 28, 2021, 12:54 PM IST

ಹಲ್ಲಿನ ಮೇಲೆ ತಣ್ಣನೆಯ ಪದಾರ್ಥ ಅಥವಾ ವಸ್ತು ಇದ್ದಾಗ ನೋವು ಏಕೆ ಸಂಭವಿಸುತ್ತದೆ?, ಹಲ್ಲಿನಲ್ಲಿ ಸೂಕ್ಷ್ಮ ಸಂವೇದನೆಗೆ ಅದು ಹೇಗೆ ಕಾರಣವಾಗುತ್ತದೆ ಎಂಬುದನ್ನು ಕುರಿತಂತೆ ಹೊಸ ಸಂಶೋಧನೆಯೊಂದನ್ನು ವಿಜ್ಞಾನಿಗಳು ನಡೆಸಿದ್ದಾರೆ.

ಮೆಸ್ಸ್ಯಾಚುಸೆಟ್ಸ್ ಜನರಲ್ ಆಸ್ಪತ್ರೆಯ ಜೋಚೆನ್ ಲೆನ್ನೆರ್ಜ್ ಸೇರಿದಂತೆ ಇತರೆ ಸಂಶೋಧಕರು ಶೀತವು ಸೂಕ್ಷ್ಮ ಹಲ್ಲುಗಳಿಗೆ ಹೋಗುವ ಮಾರ್ಗವನ್ನು ತಡೆಯುವ ಮಾರ್ಗವನ್ನು ಸಹ ಕಂಡುಕೊಂಡಿದ್ದಾರೆ.

ಹಲ್ಲಿನ ಆಕಾರಗಳಿಗೆ ಕಾರಣವಾಗುವ ಓಡೊಂಟೊಬ್ಲಾಸ್ಟ್‌ಗಳು ಶೀತವನ್ನು ಗ್ರಹಿಸಲು ಏನು ಕಾರಣ ಎಂದು ಸಹ ನಾವು ಕಂಡುಕೊಂಡಿದ್ದೇವೆ "ಎಂದು ಲೆನ್ನೆರ್ಜ್ ತಿಳಿಸಿದ್ದಾರೆ.

ಅನೇಕ ಕಾರಣಗಳಿಗಾಗಿ ಶೀತಕ್ಕೆ ಒಡ್ಡಿಕೊಳ್ಳುವುದರಿಂದ ಹಲ್ಲುಗಳಲ್ಲಿ ನೋವು ಸಂಭವಿಸಬಹುದು. ಹಲ್ಲಿನಲ್ಲಿ ರಂಧ್ರವಿದ್ದಾಗ ಅನೇಕ ಜನರು ಶೀತದಿಂದ ಅಥವಾ ತಣ್ಣನೆಯ ಪದಾರ್ಥ ಹಲ್ಲಿನ ಮೇಲೆ ಬಿದ್ದಾಗ ತೀವ್ರವಾದ ನೋವನ್ನು ಅನುಭವಿಸಿದ್ದಾರೆ.

TRCP5 ಅನ್ನುವ ಜೀನ್​ನಿಂದ ಉತ್ಪಾದನೆಯಾಗುವ TRCP5 ಪ್ರೋಟಿನ್​ ಅನ್ನು ಕಂಡುಹಿಡಿದಿದ್ರು. ಅದು ದೇಹದ ಇತರೆ ಭಾಗಗಳಿಗೆ ರಕ್ತನಾಳಗಳ ಮೂಲಕ ರವಾನೆಯಾಗ್ತಿತ್ತು ಎಂದು ಈ ಹಿಂದೆ ಸಂಶೋಧಕರ ತಂಡವೊಂದು ಸಂಶೋಧಿಸಿತ್ತು.

ಈ ಸಂಶೋಧನೆ ವೇಳೆ, ಇಲಿಗಳನ್ನು ಪ್ರಯೋಗಕ್ಕೊಳಪಡಿಸಿ ಹಲ್ಲಿನ ನೋವು ಮತ್ತು ಸೂಕ್ಷ್ಮ ಸಂವೇದನೆಗೆ ಕಾರಣವನ್ನು ಕಂಡುಕೊಳ್ಳಲಾಗಿದೆ. ಸಂಶೋಧನೆ ವೇಳೆ ಹುಳುಕು ಹಲ್ಲುಗಳಿರುವ ಇಲಿಗಳು ಸಕ್ಕರೆ ನೀರು ಕುಡಿದಾಗ ಹಲ್ಲುಗಳಲ್ಲಿ ನೋವನ್ನು ಪ್ರದರ್ಶಿಸಿವೆ. ಆದರೆ ಹುಳುಕು ಹಲ್ಲಿನ ಬದಲು ಆರೋಗ್ಯವಂತ ಹಲ್ಲುಗಳನ್ನು ಹೊಂದಿರುವ ಇಲಿಗಳು ಈ ಇಲಿಗಳಿಗಿಂತ ಶೇಕಡಾ 300 ರಷ್ಟು ಹೆಚ್ಚು ಸಕ್ಕರೆ ನೀರನ್ನು ಕುಡಿದರೂ ಅವುಗಳು ಯಾವುದೇ ನೋವನ್ನು ತೋರಿಸಿಲ್ಲ.

ಶೀತಕ್ಕೆ ಹಲ್ಲಿನ ಸೂಕ್ಷ್ಮತೆಯನ್ನು ಕಡಿಮೆ ಮಾಡಲು ಔಷಧೀಯ ಗುರಿಯನ್ನು ಸಂಶೋಧನಾ ತಂಡವು ಗುರುತಿಸಿದೆ. ಶತಮಾನಗಳಿಂದ, ಲವಂಗದ ಎಣ್ಣೆಯನ್ನು ಹಲ್ಲಿನ ನೋವಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಲವಂಗದ ಎಣ್ಣೆಯಲ್ಲಿ ಸಕ್ರಿಯ ಏಜೆಂಟ್ ಯುಜೆನಾಲ್, ಇದು ಟಿಆರ್ಸಿಪಿ 5 ಅನ್ನು ನಿರ್ಬಂಧಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.