ETV Bharat / bharat

ಲಡಾಖ್ ಉಳಿಸಲು ಮುಂದುವರಿದ ಸೋನಮ್ ವಾಂಗ್‌ಚುಕ್​ ಉಪವಾಸ ಸತ್ಯಾಗ್ರಹ - ಸೋನಮ್ ವಾಂಗ್‌ಚುಕ್​

ಲಡಾಖ್‌ ಉಳಿಸಲು ಉಪವಾಸ ಸತ್ಯಾಗ್ರಹ - ಭಾರತದ ಸಂವಿಧಾನದ ಆರನೇ ಅನುಸೂಚಿ ಅಡಿ ಸೇರಿಸಲು ಒತ್ತಾಯ - ತಮ್ಮೊಂದಿಗೆ ಜನರು ಬೆಂಬಲ ನೀಡಬೇಕು ಎಂದು ಸೋನಮ್ ವಾಂಗ್‌ಚುಕ್ ಮನವಿ.

sonam wangchuk
ಸೋನಮ್ ವಾಂಗ್‌ಚುಕ್
author img

By

Published : Jan 30, 2023, 2:31 PM IST

ಲಡಾಖ್(ಜಮ್ಮು ಮತ್ತು ಕಾಶ್ಮೀರ): ಹವಾಮಾನ ವೈಪರೀತ್ಯದ ಹಿನ್ನೆಲೆ ಪರಿಸರ ಸಂರಕ್ಷಣೆ ಹಾಗೂ 'ಲಡಾಖ್ ಉಳಿಸಲು' ಆಗ್ರಹಿಸಿ ಎಂಜಿನಿಯರ್​, ಸಂಶೋಧಕ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸದ್ಯ ನಾಲ್ಕನೇ ದಿನ ಪೂರೈಸಿರುವ ಉಪವಾಸ ಸತ್ಯಾಗ್ರಹಕ್ಕೆ ಜನರು ಕೈಜೋಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತಮ್ಮೊಂದಿಗೆ ಜನರು ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ಸೋನಮ್ ವಾಂಗ್‌ಚುಕ್, ಲಡಾಖ್‌ ಜೊತೆಗೆ ಒಗ್ಗಟ್ಟಿನಿಂದ ತಮ್ಮ ತಮ್ಮ ಪ್ರದೇಶಗಳಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವಂತೆ ಒತ್ತಾಯಿಸಿದರು.

ಇಂದು ಉಪವಾಸದ ಕೊನೆಯ ದಿನವಾಗಿದ್ದು, ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಜನರು ತಮಗೆ ಬೆಂಬಲಿಸಲಿದ್ದಾರೆ. ಜನರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸಬೇಕು. ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಕಾರ್ಯಗಳ ಪ್ರಯತ್ನಗಳನ್ನು ಹಂಚಿಕೊಳ್ಳಬೇಕು ಎಂದು ವಾಂಗ್​ಚುಕ್​ ಮನವಿ ಮಾಡಿದರು.

ಕೇಂದ್ರಾಡಳಿತ ಪ್ರದೇಶದ ಆಡಳಿತ: ಪರಿಸರ ಸೂಕ್ಷ್ಮ ಲಡಾಖ್ ಪ್ರದೇಶದಲ್ಲಿ ಪರಿಸರ ಸಂರಕ್ಷಿಸಲು ನಡೆಯುತ್ತಿರುವ ಹವಾಮಾನ ವೇಗದ ಕುರಿತು ಕೇಂದ್ರಾಡಳಿತ ಪ್ರದೇಶದ ಆಡಳಿತದಿಂದ ಬಾಂಡ್‌ಗೆ ಸಹಿ ಹಾಕುವಂತೆ ಕೇಳಿಕೊಳ್ಳಲಾಗುತ್ತಿದೆ ಎಂದು ಶನಿವಾರ ಅವರು ಹೇಳಿದ್ದಾರೆ. "ವಿಶ್ವದ ವಕೀಲರನ್ನು ಆಹ್ವಾನಿಸುವುದು, ಉಪವಾಸ ಹಾಗೂ ಪ್ರಾರ್ಥನೆಗಳು ನಡೆಸಬೇಕು ಹಾಗೂ ವೇಳೆ ನಾನು ಈ ಬಾಂಡ್‌ಗೆ ಸಹಿ ಹಾಕಬೇಕು ಎಂದು ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತವು ಬಯಸುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. "ದಯವಿಟ್ಟು ಇದು ಎಷ್ಟು ಸರಿ ಎನ್ನುವ ಬಗ್ಗೆ ಸಲಹೆ ನೀಡಿ, ನಾನು ಮೌನವಾಗಿರಬೇಕೇ, ಬಂಧಿಸುವುದು ನನಗೆ ಇಷ್ಟವಿಲ್ಲ" ಎಂದು ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.

ಪರಿಸರ, ಸಾಮಾಜಿಕ ಪರಿಣಾಮ: 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಸ್ಥಳೀಯರಿಗೆ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳನ್ನು ತಿಳಿಸಿದ್ದಾರೆ. ಇಲ್ಲಿನ ಜನಸಂಖ್ಯೆ, ಅವರ ಜೀವನೋಪಾಯ ಮತ್ತು ಸಂಸ್ಕೃತಿ ಹಿನ್ನೆಲೆ ಸ್ಥಳೀಯರಿಗೆ ಮೀಸಲಾತಿ ದೊರೆಯಬೇಕಿದೆ. ಕೇಂದ್ರಾಡಳಿತ ಪ್ರದೇಶದ ಆಡಳಿತವು ತನ್ನ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಂರಕ್ಷಿಸಲು ಆರನೇ ಪರಿಶಿಷ್ಟದಲ್ಲಿ ಸೇರ್ಪಡೆ ಮಾಡುವುದು ಏಕೈಕ ಮಾರ್ಗವಾಗಿದೆ ಎಂದು ಗಟ್ಟಿಯಾಗಿ ಹೇಳಿದ ವಾಂಗ್‌ಚುಕ್, ಈ ವಿಷಯದ ಬಗ್ಗೆ ಗಮನ ಹರಿಸಲು ಕೇಂದ್ರ ಸರ್ಕಾರಕ್ಕೆ ಉಪವಾಸ ಸತ್ಯಾಗ್ರಹದ ಮೂಲಕ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

  • YOU CAN JOIN ME IN @ClimateFast
    Many have asked how to join!
    30th Jan is the last day of my 5 day fast... Join me for a 1 day fast from your own places and share on social media for solidarity.
    Those with leadership qualities could organise at safe public places from 9 am to 6pm pic.twitter.com/UwrlMjv0GL

    — Sonam Wangchuk (@Wangchuk66) January 28, 2023 " class="align-text-top noRightClick twitterSection" data=" ">

ಲಡಾಖ್​ನಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಲಡಾಖ್​​ ಪ್ರದೇಶ ಪ್ರವಾಸೋದ್ಯಮ ವಿಭಾಗದ ದೊಡ್ಡ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇದು ಇಲ್ಲಿನ ಶುದ್ಧ ಪರಿಸರದ ಮೇಲೆ ಭಾರಿ ಪರಿಣಾಮ ಬೀರಲು ಆರಂಭಿಸಿದೆ. ಈ ಬಗ್ಗೆ ವಾಂಗ್​​ ಚುಕ್​​ ಚಿಂತಿತರಾಗಿದ್ದಾರೆ. ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಯೋಜನೆಗಳಿಂದ ಇಲ್ಲಿನ ಹವಾಮಾನ ಮತ್ತು ಪರಿಸರಕ್ಕೆ ಹಾನಿಯನ್ನುಂಟು ಮಾಡಬಹುದು ಎಂಬುದೇ ವಾಂಗ್​​​​​​​​​ ಚುಕ್​ ಅವರ ಕಳವಳವಾಗಿದೆ. ಇದರಿಂದ ಈ ಭಾಗದ ಮೇಲೆ ಹಾನಿ ಸಂಭವಿಸುವ ಸಾಧ್ಯತೆಗಳಿವೆ. ಈ ಸಾಧ್ಯತೆಗಳನ್ನು ತಡೆಗಟ್ಟಲು ಸರ್ಕಾರವು ಹೆಜ್ಜೆ ಹಾಕಬೇಕು ಎಂಬುದು ವಾಂಗ್​ಚುಕ್​ ಅವರ ಒತ್ತಾಯವಾಗಿದೆ.

ವಾಂಗ್‌ಚುಕ್ ಅವರು ಪ್ರಸ್ತುತ ಬಿಜೆಪಿ ಆಡಳಿತದ ಉತ್ಕಟ ಬೆಂಬಲಿಗರಾಗಿದ್ದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ಮತ್ತು 35 (ಎ) ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಲಡಾಖ್‌ಗೆ ವಿಶೇಷ ಸ್ಥಾನಮಾನವನ್ನು ಕೇಂದ್ರವು ಭರವಸೆ ನೀಡಿತ್ತು. ಆದರೆ ಆ ರೀತಿಯಲ್ಲಿ ಏನೂ ಆಗಿಲ್ಲ ಎಂಬುದೇ ಅವರ ಕಳವಳಕ್ಕೆ ಕಾರಣವಾಗಿದೆ.

ಸಂವಿಧಾನದ 370 ನೇ ವಿಧಿ ನಿರ್ಮೂಲನೆಯಾಗಿ ಮೂರು ವರ್ಷಗಳೇ ಕಳೆದಿವೆ. ನಮಗೆ ಯಾವುದೇ ರಕ್ಷಣೆ ಸಿಕ್ಕಿಲ್ಲ. ದೊಡ್ಡ ಉದ್ಯಮಿಗಳು ಪ್ರವಾಸೋದ್ಯಮ ಉದ್ಯಮ ಮತ್ತು ಮೂಲಸೌಕರ್ಯ ಯೋಜನೆಗಳಿಗಾಗಿ ಭೂಮಿಯನ್ನು ತೆಗೆದುಕೊಳ್ಳಲು ಬಯಸುತ್ತಿದ್ದಾರೆ ಎಂಬ ವರದಿಗಳಿವೆ. ಇದನ್ನು ಎಲ್ಲರಿಗೂ ಮುಕ್ತವಾಗಿ ಬಿಟ್ಟರೆ, ಭಾರಿ ಗಣಿಗಾರಿಕೆ ಆರಂಭವಾಗಿ ಶುದ್ಧ ಪರಿಸರಕ್ಕೆ ಹಾನಿಯಾಗಬಹುದು ಎಂಬುದು ವಾಂಗ್​ ಚುಕ್​ ಅವರ ಕಳವಳವಾಗಿದೆ ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.