ETV Bharat / bharat

ಮಂಡಿ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯ ಅಂತ್ಯ ಎಂದು ಎಲ್ಲಿ ಬರೆದಿದೆ ತೋರಿಸಿ: ಪ್ರತಿಪಕ್ಷಗಳಿಗೆ ಅನುರಾಗ್​ ಸವಾಲು - Budget

ಕೃಷಿ ಕಾನೂನುಗಳಲ್ಲಿ ಎಂಎಸ್​ಪಿ ಹಾಗೂ ಮಂಡಿ ವ್ಯವಸ್ಥೆ ಕೊನೆಗೊಳ್ಳಲಿದೆ ಎಂದು ಎಲ್ಲಿ ಬರೆಯಲಾಗಿದೆ ಎಂದು ರಾಜ್ಯಸಭೆಯಲ್ಲಿ ಅನುರಾಗ್​ ಠಾಕೂರ್ ಪ್ರಶ್ನಿಸಿದ್ದಾರೆ.

Anurag Thakur
ಅನುರಾಗ್​ ಠಾಕೂರ್
author img

By

Published : Feb 12, 2021, 11:42 AM IST

ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಹಾಗೂ ಮಂಡಿ ವ್ಯವಸ್ಥೆ ಅಂತ್ಯವಾಗಲಿದೆ ಎಂದು ಎಲ್ಲಿ ಬರೆಯಲಾಗಿದೆ ಎನ್ನುವುದನ್ನು ಕಾಂಗ್ರೆಸ್​ ಹಾಗೂ ವಿರೋಧ ಪಕ್ಷಗಳ ನಾಯಕರು ತೋರಿಸಲಿ ಎಂದು ರಾಜ್ಯ ಹಣಕಾಸು ಖಾತೆ ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಸವಾಲೆಸೆದಿದ್ದಾರೆ.

ಕಳೆದೆರಡು ತಿಂಗಳಿನಿಂದ ನೂತನ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದು, ತಪ್ಪು ಮಾಹಿತಿ ನೀಡಿ ಅನ್ನದಾತರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಸಚಿವರು ಆರೋಪಿಸುತ್ತಾ ಬಂದಿದ್ದಾರೆ. ಇಂದಿನ ರಾಜ್ಯಸಭೆ ಕಲಾಪದಲ್ಲಿ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವ ಅನುರಾಗ್​ ಠಾಕೂರ್​, ನಾವು ಭಾರತವನ್ನು ಎತ್ತರಕ್ಕೆ ಕರೆದೊಯ್ಯಲು, ದೇಶದ ಅಭಿವೃದ್ಧಿಗಾಗಿ ಬದ್ಧರಾಗಿದ್ದೇವೆ ಎಂದರು. ಕೃಷಿ ಕಾನೂನುಗಳಲ್ಲಿ ಎಂಎಸ್​ಪಿ ಹಾಗೂ ಮಂಡಿ ವ್ಯವಸ್ಥೆ ಕೊನೆಗೊಳ್ಳಲಿದೆ ಎಂದು ಎಲ್ಲಿ ಬರೆಯಲಾಗಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ರಾಜ್ಯಸಭೆ ಪ್ರತಿಪಕ್ಷ ನಾಯಕರಾಗ್ತಾರೆ ಮಲ್ಲಿಕಾರ್ಜುನ್‌ ಖರ್ಗೆ.. ಪಕ್ಷ ನಿಷ್ಠೆಗೆ ಮತ್ತೊಂದು ಪದವಿ ಪಕ್ಕಾ..

ಇದೇ ವೇಳೆ, 2021-22ನೇ ಸಾಲಿನ ಕೇಂದ್ರ ಬಜೆಟ್​ ಬಗ್ಗೆ ಮಾತನಾಡಿದ ಠಾಕೂರ್, ಈ ಬಜೆಟ್ ನವ ಭಾರತ, ಸದೃಢ ಭಾರತ ಹಾಗೂ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಭರವಸೆಯನ್ನು ತೋರಿಸುತ್ತದೆ. ಇದು ಭಾರತವನ್ನು ಆರ್ಥಿಕ ಮತ್ತು ಶಕ್ತಿ ಉತ್ಪಾದನಾ ಕೇಂದ್ರವಾಗಿಸುವ ಹಾದಿಯಲ್ಲಿ ಸಾಗಿಸುತ್ತದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.