ETV Bharat / bharat

ನೀವು ಯಾವಾಗ ಭಾರತದ ರಾಷ್ಟ್ರಪತಿಯಾಗುವಿರಿ?: ಮೋದಿಯನ್ನು ಪ್ರಶ್ನಿಸಿದ 10 ವರ್ಷದ ಬಾಲಕಿ

ಮಹಾರಾಷ್ಟ್ರದ ಅಹ್ಮದ್​ನಗರದ ಬಿಜೆಪಿ ಸಂಸದ ಡಾ.ಸುಜಯ್​ ವಿಖೆ ಪಾಟೀಲ್​ ಅವರ ಮಗಳು ಅನಿಶಾ ಪಾಟೀಲ್, ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಸಂವಾದ ನಡೆಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

author img

By

Published : Aug 13, 2021, 11:05 AM IST

PM Modi
ಪ್ರಧಾನಿ ಮೋದಿ

ಮಹಾರಾಷ್ಟ್ರ: 'ನಾನು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಬೇಕು. ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು' ಎಂದು ಅಪ್ಪನನ್ನು ಸದಾ ಪೀಡಿಸುತ್ತಿದ್ದ 10 ವರ್ಷದ ಬಾಲಕಿ ಅನಿಶಾ ಪಾಟೀಲ್​ ಕನಸು ಕೊನೆಗೂ ಈಡೇರಿದೆ.

PM Modi
ಪ್ರಧಾನಿ ಮೋದಿ ಭೇಟಿ ಮಾಡಿದ ಅನಿಶಾ ಪಾಟೀಲ್

ಮಹಾರಾಷ್ಟ್ರದ ಅಹ್ಮದ್​ನಗರದ ಬಿಜೆಪಿ ಸಂಸದ ಡಾ.ಸುಜಯ್​ ವಿಖೆ ಪಾಟೀಲ್​ ಅವರ ಮಗಳು ಹಾಗೂ ಮಹಾರಾಷ್ಟ್ರದ ಹಿರಿಯ ನಾಯಕ ರಾಧಾಕೃಷ್ಣ ಅವರ ಮೊಮ್ಮಗಳು ಅನಿಶಾ ಪಾಟೀಲ್​ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮತುಕತೆ ನಡೆಸಿದಳು. ಅಪ್ಪನೊಟ್ಟಿಗೆ ಸಂಸತ್ತಿಗೆ ತೆರಳಿದ ಆಕೆ, ಮೋದಿ ಜೊತೆ ಸಂವಾದ ನಡೆಸಿ, ನೀವು ಗುಜರಾತಿನವರು, ಯಾವಾಗ ಭಾರತದ ರಾಷ್ಟ್ರಪತಿಯಾಗುತ್ತೀರಿ? ಎಂದು ಪ್ರಶ್ನಿಸಿದಳು. ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲರೂ ಕೆಲ ಕಾಲ ನಗೆಗಡಲಲ್ಲಿ ತೇಲಿದರು.

PM Modi
ಪ್ರಧಾನಿ ಮೋದಿ ಭೇಟಿ ಮಾಡಿದ ಅನಿಶಾ ಪಾಟೀಲ್

ಇನ್ನು ವಿಖೆ ಕುಟುಂಬವು ಪಿಎಂ ಮೋದಿಗೆ ಹೂಗುಚ್ಛವನ್ನು ನೀಡಿ, ಅನಿಶಾಳನ್ನು ಭೇಟಿಯಾಗಲು ತಮ್ಮ ಅಮೂಲ್ಯವಾದ ಸಮಯ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದರು. ಅಷ್ಟೇ ಅಲ್ಲದೆ, ಅನಿಶಾ ಪಾಟೀಲ್ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.