ETV Bharat / bharat

ಪ್ರಜಾಪ್ರಭುತ್ವದ ಬಗ್ಗೆ ಟ್ಟಿಟರ್ ನಮಗೆ ​ಬೋಧಿಸುವ ಅಗತ್ಯತೆ ಇಲ್ಲ: ರವಿಶಂಕರ್​ ಪ್ರಸಾದ್​ - ಕೇಂದ್ರದ ಐಟಿ ನಿಯಮ

ಟ್ವಿಟರ್​ನಿಂದ ಪ್ರಜಾಪ್ರಭುತ್ವದ ಬಗ್ಗೆ ನಾವು ಕಲಿತುಕೊಳ್ಳಬೇಕಾಗಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಹೇಳಿಕೊಂಡಿದ್ದಾರೆ.

Union Min RS Prasad
Union Min RS Prasad
author img

By

Published : Jun 17, 2021, 4:17 PM IST

ನವದೆಹಲಿ: ಕೇಂದ್ರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮ ಅನುಸರಿಸುವಲ್ಲಿ ಟ್ವಿಟರ್​ ವಿಫಲಗೊಂಡಿರುವ ಕಾರಣ ಟ್ವಿಟರ್​ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದೇ ವಿಚಾರವಾಗಿ ಇಂದು ಸಹ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್​ ಪ್ರಸಾದ್​, ಪ್ರಜಾಪ್ರಭುತ್ವದ ಬಗ್ಗೆ ಟ್ಟಿಟರ್​ ನಮಗೆ ಬೋಧಿಸುವ ಅಗತ್ಯತೆ ಇಲ್ಲ ಎಂದಿದ್ದಾರೆ.

ವಿಶ್ವದ ಅತಿದೊಡ್ಡ ಮತ್ತು ವಿಶೇಷವಾದ ಪ್ರಜಾಪ್ರಭುತ್ವ ನಮ್ಮದು ಎಂಬ ಹೆಗ್ಗಳಿಕೆ ಇದೆ. ಇದರ ಬಗ್ಗೆ ನಮಗೆ ಟ್ಟಿಟರ್​ ಬೋಧಿಸುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಟ್ವಿಟರ್​ ಬ್ಯಾನ್​ ಮಾಡುವ ಯಾವುದೇ ಉದ್ದೇಶ ಹೊಂದಿಲ್ಲ. ಕೆಲವರು ಇಷ್ಟು ದಿನ ಟ್ವಿಟರ್​ ಮೂಲಕ ರಾಜಕಾರಣ ಮಾಡ್ತಿದ್ದರು. ಆದರೆ, ಇದೀಗ ಅದಕ್ಕೋಸ್ಕರ ರಾಜಕಾರಣ ಮಾಡ್ತಿದ್ದಾರೆ. ಅದರಿಂದ ನಮಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

  • When some people do their politics via Twitter, I've no problem.. now they're doing politics of Twitter, again I've no problem. It isn't an issue b/w Twitter & GoI or BJP. It is an issue b/w Twitter & its users who must be given forum in case of misuse/abuse: Union Min RS Prasad pic.twitter.com/YdlPE5bvjy

    — ANI (@ANI) June 17, 2021 " class="align-text-top noRightClick twitterSection" data=" ">

ಭಾರತೀಯ ಕಂಪನಿಗಳು ವ್ಯಾಪಾರ ಮಾಡಲು ಯುಎಸ್​ಗೆ ಹೋದಾಗ ಅಲ್ಲಿನ ಕಾನೂನು ಅನುಸರಿಸುತ್ತಾರೋ ಇಲ್ಲವೋ? ನೀವು ಕೂಡ ಇಲ್ಲಿ ವ್ಯಾಪಾರ ಮಾಡಬೇಕಾದರೆ ಇಲ್ಲಿನ ನಿಯಮ ಮತ್ತು ಸಂವಿಧಾನ ಪಾಲಿಸಬೇಕು ಎಂದು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಹೇಳಿದ್ದಾರೆ. ಜತೆಗೆ ಪ್ರಧಾನಮಂತ್ರಿ ಹಾಗೂ ನಮ್ಮನ್ನು ಟೀಕಿಸಲು ನಿಮಗೆ ಅವಕಾಶವಿದೆ ಎಂದಿರುವ ಅವರು, ಇಲ್ಲಿನ ನಿಯಮ ಪಾಲನೆ ಕಡ್ಡಾಯ ಎಂದಿದ್ದಾರೆ.

ಭಾರತದಲ್ಲಿ 100ಕೋಟಿಗೂ ಅಧಿಕ ಜನರು ಸೋಷಿಯಲ್​ ಮೀಡಿಯಾ ಬಳಕೆ ಮಾಡ್ತಿದ್ದಾರೆ. ಇದರಿಂದ ನನಗೆ ಸಂತೋಷವಿದೆ. ಅವರು ಹಣ ಗಳಿಕೆ ಮಾಡಲಿ. ಬಳಕೆದಾರರು ನಮ್ಮನ್ನು ಟೀಕಿಸಲು ಅವಕಾಶ ಮಾಡಿಕೊಡಿ. ಆದರೆ, ಕಂಪನಿಗಳು ಪ್ರಜಾಪ್ರಭುತ್ವದ ಬಗ್ಗೆ ನಮಗೆ ಉಪಸ್ಯಾನ ನೀಡಲು ಬಯಸಿದಾಗ ನಾವು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು. ಭಾರತ ಪ್ರಜಾಪ್ರಭುತ್ವದಿಂದ ಇರುವ ಕಾರಣ ಚುನಾವಣೆಗಳು ನ್ಯಾಯಯುತವಾಗಿ ನಡೆಯುತ್ತಿವೆ. ನಾವು ಅಸ್ಸೋಂನಲ್ಲಿ ಗೆದ್ದು, ಬಂಗಾಳ ಸೋತಿದ್ದೇವೆ ಎಂದರು.

ನಿನ್ನೆ ಕೂಡ ಇದೇ ವಿಚಾರವಾಗಿ ಟ್ವಿಟ್​ ಮಾಡಿದ್ದ ರವಿಶಂಕರ್​ ಪ್ರಸಾದ್​, ಟ್ಟಿಟರ್​​ ಕೇಂದ್ರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮ ಅನುಸರಿಸುವಲ್ಲಿ ವಿಫಲಗೊಂಡಿದೆ ಎಂದು ಹೇಳಿದ್ದರು. ಅನೇಕ ಅವಕಾಶ ನೀಡಿದ್ದರ ಹೊರತಾಗಿ ಕೂಡ ಉದ್ದೇಶಪೂರ್ವಕವಾಗಿ ಅದು ನಿಯಮ ಪಾಲನೆ ಮಾಡದಿರಲು ನಿರ್ಧರಿಸಿದೆ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.