ETV Bharat / bharat

ಯೋಧರು ದಾಳಿಗೊಳಗಾದಾಗ, ಅಮಿತ್​ ಶಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ರು: ಸುರ್ಜೇವಾಲಾ

author img

By

Published : Apr 5, 2021, 9:28 PM IST

ಬಿಜಾಪುರದಲ್ಲಿ ನಕ್ಸಲರು ದಾಳಿ ನಡೆಸಿದ್ದ ವೇಳೆ ಕೇಂದ್ರ ಗೃಹ ಸಚಿವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೆಂದು ಕಾಂಗ್ರೆಸ್​ ವಕ್ತಾರ ರಣದೀಪ್​ ಸಿಂಗ್​ ಸುರ್ಜೇವಾಲಾ​ ವಾಗ್ದಾಳಿ ನಡೆಸಿದ್ದಾರೆ.

Surjewala slammed Home Minister
Surjewala slammed Home Minister

ನವದೆಹಲಿ: ಚುನಾವಣಾ ಪ್ರಚಾರದ ಕಾರಣ ಛತ್ತೀಸ್​ಗಢದ ಬಿಜಾಪುರದಲ್ಲಿ ನಡೆದ ನಕ್ಸಲ್​ ದಾಳಿಯನ್ನ ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಕಾಂಗ್ರೆಸ್​ ಮುಖ್ಯ ವಕ್ತಾರ ರಣದೀಪ್​ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.

ದಾಳಿ ನಡೆದು 24 ಗಂಟೆ ಕಳೆದ್ರೂ ಗೃಹ ಸಚಿವರು ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಅದಕ್ಕೆ ಮುಖ್ಯ ಕಾರಣ ತಮಿಳುನಾಡು ಮತ್ತು ಕೇರಳದಲ್ಲಿ ಅವರು ಪ್ರಚಾರ ನಿರತರಾವಾಗಿದ್ದು ಎಂದಿದ್ದಾರೆ. ದಾಳಿ ನಡೆಯುತ್ತಿದ್ದ ವೇಳೆ ಅಸ್ಸೋಂನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಗೃಹ ಸಚಿವರು ಇಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.

ಗೃಹ ಸಚಿವರ ವಿರುದ್ಧ ಸುರ್ಜೇವಾಲಾ​ ವಾಗ್ದಾಳಿ

ನಕ್ಸಲ್​ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಯ ಸಮಯದಲ್ಲಿ ಗೃಹ ಸಚಿವರು ಚುನಾವಣಾ ಪ್ರಚಾರದಲ್ಲಿ ನಿರತವಾಗಿದ್ದರು. ಬೇರೆ ಯಾವುದೇ ಗೃಹ ಸಚಿವರು ಅಧಿಕಾರದಲ್ಲಿದ್ದಿದ್ದರೆ ರಾಜೀನಾಮೆ ನೀಡುತ್ತಿದ್ದರು. ಮುಂಬೈನಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದ ಸಂದರ್ಭದಲ್ಲಿ ಅಂದಿನ ಗೃಹ ಸಚಿವ ಶಿವರಾಜ್​​ ಪಾಟೀಲ್​​ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆದರೆ ಈಗಿನ ಗೃಹ ಸಚಿವರು ಸುಮಾರು 24 ಗಂಟೆಗಳ ಕಾಲ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದರು ಎಂದು ಸುರ್ಜೇವಾಲಾ ಖಂಡಿಸಿದ್ದಾರೆ​.

ಇದನ್ನೂ ಓದಿ: ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ ಪ್ರಕರಣ: 90 ಮತದಾರರಿಂದ 181 ವೋಟ್​​ ಚಲಾವಣೆ!

ಘಟನೆ ಏಪ್ರಿಲ್​ 3ರಂದು ಬೆಳಗ್ಗೆ 11:30ರ ಸುಮಾರಿಗೆ ನಡೆದಿದ್ದು, 24 ಗಂಟೆಗಳ ಕಾಲ ಗೃಹ ಸಚಿವರು ಪ್ರತಿಕ್ರಿಯೆ ನೀಡಿಲ್ಲ. ಅಮಿತ್​ ಶಾ ಭಾರತದ ಗೃಹ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಅಂದರೆ 2015ರಿಂದ ಇಲ್ಲಿಯವರೆಗೆ 5,213 ನಕ್ಸಲ್​ ದಾಳಿ ನಡೆದಿದ್ದು, ಇದರಲ್ಲಿ 1,416 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸುರ್ಜೆವಾಲಾ​ ತಿಳಿಸಿದರು. ಇದೇ ಘಟನೆ ಬಗ್ಗೆ ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ, ನಕ್ಸಲ್​ ನಿಗ್ರಹಕ್ಕೆ ಕೇಂದ್ರ ಸರ್ಕಾರ ಸಮರ್ಪಕ, ರೂಪುರೇಷ ಇಲ್ಲದ ಕಾರ್ಯಾಚರಣೆ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.