ETV Bharat / bharat

ಯೂಟ್ಯೂಬರ್‌ ಮನೀಶ್ ಕಶ್ಯಪ್ ಪ್ರಕರಣ: ರಾಷ್ಟ್ರೀಯ ಭದ್ರತಾ ಕಾಯ್ದೆಯ ಮಹತ್ವವೇನು? - ರಾಷ್ಟ್ರೀಯ ಭದ್ರತಾ ಕಾಯ್ದೆ

ಯೂಟ್ಯೂಬರ್ ಮನೀಷ್ ಕಶ್ಯಪ್ ಅವರು ಮತ್ತೆ ತೊಂದರೆಗೆ ಒಳಗಾಗಿದ್ದಾರೆ. ಎನ್ಎಸ್ಎ ಹೇರಿದ ನಂತರ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

Manish Kashyap
ಮನೀಶ್ ಕಶ್ಯಪ್
author img

By

Published : Apr 6, 2023, 7:49 PM IST

ಪಾಟ್ನಾ (ಬಿಹಾರ): ಯೂಟ್ಯೂಬರ್, ಬಿಹಾರದ ಮನೀಶ್ ಕಶ್ಯಪ್ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಹೇರಲಾಗಿದೆ. ಇದರ ಪರಿಣಾಮ ಅವರಿಗೆ ಮತ್ತಷ್ಟು ಸಂಕಷ್ಟಗಳು ಎದುರಾಗಲಿವೆ. ಹಾಗಾದರೆ, ಎನ್ಎಸ್ಎ ಅಂದ್ರೇನು? ಇದನ್ನು ಅನ್ವಯಿಸುವುದರ ಪರಿಣಾಮವೇನು? ಎಂಬುದರ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆ: ರಾಷ್ಟ್ರೀಯ ಭದ್ರತಾ ಕಾಯಿದೆಯು (ಎನ್ಎಸ್ಎ) 1980ರ ಸೆಪ್ಟೆಂಬರ್ 23ರಂದು ಜಾರಿಗೆ ಬಂದಿದೆ. ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಕಾಯ್ದೆ ಅಸ್ತಿತ್ವಕ್ಕೆ ಬಂದಿದೆ. ಇದರನ್ವಯ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಯಾವುದೇ ಆರೋಪಗಳಿಲ್ಲದೇ ಸಂಶಯಾಸ್ಪದ ವ್ಯಕ್ತಿಯನ್ನು 12 ತಿಂಗಳ ಕಾಲ ಜೈಲಿನಲ್ಲಿಡುವ ಹಕ್ಕು ಇದೆ. ಆ ವ್ಯಕ್ತಿಯು ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಗಮವಾಗಿ ನಡೆಸಲು ಅಥವಾ ಅಡ್ಡಿಪಡಿಸಬಹುದು ಎಂದು ಸರ್ಕಾರ ಭಾವಿಸಿದರೆ, ಎನ್ಎಸ್ಎ ವಿಧಿಸಬಹುದು.

ಏನಾಗುತ್ತದೆ?: ಈಗ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರುವುದರಿಂದ ಏನಾಗುತ್ತದೆ ಎಂಬ ಪ್ರಶ್ನೆ ಕಾಡುತ್ತದೆ. ಭಾರತೀಯ ಕಾನೂನಿನ ಪ್ರಕಾರ, ಪೊಲೀಸ್ ಕಸ್ಟಡಿಯಲ್ಲಿರುವಾಗ 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಯಾವುದೇ ವ್ಯಕ್ತಿಯನ್ನು ಹಾಜರುಪಡಿಸುವುದು ಅವಶ್ಯಕ. ಆದರೆ ಈ ಕಾನೂನಿನ ಅಡಿಯಲ್ಲಿ, ಯಾವುದೇ ಆರೋಪವಿಲ್ಲದೇ 1 ವರ್ಷ ಅವರನ್ನು ಬಂಧನದಲ್ಲಿ ಇಡಬಹುದು.

ಅಷ್ಟೇ ಅಲ್ಲ, ವಿಶೇಷ ಸಂದರ್ಭಗಳಲ್ಲಿ, ವ್ಯಕ್ತಿಗೆ 10ರಿಂದ 12 ದಿನಗಳವರೆಗೆ ಆತನ ವಿರುದ್ಧದ ಆರೋಪಗಳೇನು ಎಂದು ಹೇಳುವುದಿಲ್ಲ. ಎನ್ಎಸ್ಎ ಅಡಿಯಲ್ಲಿ ಬಂಧನಕ್ಕೊಳಗಾದ ವ್ಯಕ್ತಿಯು ಜಾಮೀನು ಅರ್ಜಿ ಸಲ್ಲಿಸಲು ಸಹ ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿದ್ದರೂ ಆತನ ಮೇಲೆ ಎನ್ಎಸ್ಎ ವಿಧಿಸಲು ಡಿಎಂ ಆದೇಶಿಸಬಹುದು. ಒಬ್ಬ ವ್ಯಕ್ತಿಯು ಜಾಮೀನಿನ ಮೇಲೆ ಹೊರಗಿದ್ದರೆ, ಅವನ ವಿರುದ್ಧ ಎನ್ಎಸ್ಎ ಕೂಡ ವಿಧಿಸಬಹುದು. ಪ್ರಕರಣದಲ್ಲಿ ಯಾವುದೇ ವ್ಯಕ್ತಿಯನ್ನು ಖುಲಾಸೆಗೊಳಿಸಿದ್ದರೂ ಸಹ, ಆತನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ವಿಧಿಸಬಹುದು.

ಮನೀಶ್ ಕಶ್ಯಪ್ ಮೇಲೆ ಎನ್‌ಎಸ್‌ಎ ಜಾರಿ: ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಯೂಟ್ಯೂಬರ್ ಮನೀಶ್ ಕಶ್ಯಪ್ ಸದ್ಯ ತಮಿಳುನಾಡಿನ ಜೈಲಿನಲ್ಲಿದ್ದಾರೆ. ನಕಲಿ ವಿಡಿಯೋ ಪ್ರಕರಣದಲ್ಲಿ ಈತನ ವಿರುದ್ಧ ಬಿಹಾರ ಮತ್ತು ತಮಿಳುನಾಡಿನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಲಾಗಿದ್ದು, ಇದರಿಂದ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗಲಿವೆ. ಬುಧವಾರ, ಮನೀಶ್ ಕಶ್ಯಪ್​ರನ್ನು ಮಧುರೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿಂದ ಏಪ್ರಿಲ್ 19 ರವರೆಗೆ ಕಸ್ಟಡಿಗೆ ಕಳುಹಿಸಲಾಗಿದೆ.

ಮನೀಶ್ ಕಶ್ಯಪ್ ವಿರುದ್ಧ ದಾಖಲಾದ ಪ್ರಕರಣಗಳೆಷ್ಟು?: ಪ್ರಸ್ತುತ ಮನೀಶ್ ಕಶ್ಯಪ್ ವಿರುದ್ಧ ಬಿಹಾರದಲ್ಲಿ 14 ಕೇಸ್​ಗಳು ಮತ್ತು ತಮಿಳುನಾಡಿನಲ್ಲಿ 14 ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲ, ಬಿಹಾರದ ಆರ್ಥಿಕ ಅಪರಾಧಗಳ ಘಟಕ ಅಂದರೆ, ಇಒಯು ಆತನ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಿದೆ. ಅವರ ಬ್ಯಾಂಕ್ ಖಾತೆಯನ್ನೂ ಸ್ಥಗಿತಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎನ್ಎಸ್ಎ ಹೇರಿರುವುದು ಅವರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪೊಲೀಸರಿಗೆ ಶರಣಾಗಿದ್ದ ಮನೀಶ್: ತಮಿಳುನಾಡಿನ ಬಿಹಾರದಿಂದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಆರೋಪದ ನಕಲಿ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಮನೀಶ್ ಕಶ್ಯಪ್​ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಮಾರ್ಚ್ 18 ರಂದು ಮುಂಜಾನೆ ಪಶ್ಚಿಮ ಚಂಪಾರಣ್‌ನ ಜಗದೀಶ್‌ಪುರ ಪೊಲೀಸರು ಮನೀಶ್ ಕಶ್ಯಪ್​ ಮನೆಗೆ ಬಂದಿದ್ದರು. ಆಗ ಮನೀಶ್ ಕಶ್ಯಪ್​ ಪೊಲೀಸರಿಗೆ ಶರಣಾದರು. ಇದಾದ ನಂತರ ಅವರನ್ನು ಪಾಟ್ನಾಗೆ ಕರೆತರಲಾಯಿತು. ಅಲ್ಲಿ ಮನೀಶ್ ಕಶ್ಯಪ್​ ವಿಚಾರಣೆ ನಡೆಸಲಾಯಿತು. ನಂತರ ಅವರನ್ನು ತಮಿಳುನಾಡಿಗೆ ಜೈಲಿಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಖಲಿಸ್ತಾನ್ ಪ್ರತ್ಯೇಕವಾದಿ ಅಮೃತ್‌ಪಾಲ್‌ಗಾಗಿ ಯುಪಿ-ನೇಪಾಳ ಗಡಿಯಲ್ಲಿ ತೀವ್ರ ಶೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.