ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಗುಂಡಿನ ಚಕಮಕಿಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ನಾಗರಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ದೇಶದ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಅಸ್ಸೋಂನ ಗುವಾಹಟಿಯಲ್ಲಿ ಮಾತನಾಡಿದ ಅವರು, ಆಫ್ಘಾನಿಸ್ತಾನದಲ್ಲಿ ಈಗ ಏನು ನಡೆಯುತ್ತಿದೆಯೋ ಅದು ಜಮ್ಮು ಮತ್ತು ಕಾಶ್ಮೀರದಲ್ಲೂ ನಡೆಯಬಹುದು. ಇದನ್ನು ಎದುರಿಸಲು ನಾವು ಈಗಲೇ ಸಿದ್ಧವಾಗಬೇಕಿದೆ. ನಮ್ಮ ಬಾರ್ಡರ್ಗಳನ್ನು ಸೀಲ್ ಮಾಡಿ, ಉಸ್ತುವಾರಿಕೆ ಈಗ ಬಹುಮುಖ್ಯವಾಗಿದೆ. ಹೊರಗಿನಿಂದ ಯಾರು ಬರುತ್ತಿದ್ದಾರೆ ಅನ್ನೋದರ ಮೇಲೆ ನಾವೀಗ ಎಚ್ಚರಿಕೆಯ ಕಣ್ಣಿಡಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೊದಲು ಕ್ಷೇತ್ರ ವಿಂಗಡಣೆ.. ಬಳಿಕ ಚುನಾವಣೆ: ಜೆ - ಕೆ ಪ್ರವಾಸದಲ್ಲಿರುವ ಅಮಿತ್ ಶಾ ಘೋಷಣೆ
ಮ್ಯಾನ್ಮಾರ್ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ಆದರೂ, ಮ್ಯಾನ್ಮಾರ್ ಜತೆ ನಮ್ಮ ವ್ಯಾಪಾರ ಸಂಬಂಧಗಳು ಉತ್ತಮವಾಗಿವೆ. ಅವರು ಯಾವುದೇ ಕಾರಣಕ್ಕೂ ಚೀನಾ ಜತೆ ಕೈ ಜೋಡಿಸಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.