ETV Bharat / bharat

ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಸಂಕಷ್ಟ.. ಸಿಬಿಐಯಿಂದ ಸಮನ್ಸ್​​ ಜಾರಿ - ಕೋಲ್ಕತ್ತಾ ಹೈಕೋರ್ಟ್​

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ವಿಚಾರಣೆಗೆ ಒಳಪಡಿಸಬಹುದು ಎಂಬ ಹೈಕೋರ್ಟ್​ನ ಏಕಸದಸ್ಯ ಪೀಠದ ಆದೇಶದ ಬೆನ್ನಲ್ಲೇ ಸಿಬಿಐ ಸಮನ್ಸ್​ ಜಾರಿ ಮಾಡಿದೆ.

west-bengal-school-recruitment-scam-cbi-summons-tmc-mp-abhishek-banerjee
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಸಂಕಷ್ಟ.. ಸಿಬಿಐಯಿಂದ ಸಮನ್ಸ್​​ ಜಾರಿ
author img

By

Published : May 19, 2023, 5:54 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸಾಕಷ್ಟು ಸದ್ದು ಮಾಡುತ್ತಿರುವ ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಪಕ್ಷದ ಪ್ರಧಾನ ಕಾರ್ಯದರ್ಶಿ, ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಂಕಷ್ಟ ಶುರುವಾಗಿದೆ. ಅಭಿಷೇಕ್ ಬ್ಯಾನರ್ಜಿ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಿಚಾರಣೆಗೆ ಒಳಪಡಿಸಬಹುದು ಎಂಬ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಕೋಲ್ಕತ್ತಾ ಹೈಕೋರ್ಟ್​ ನಿರಾಕರಿಸಿದೆ. ಮತ್ತೊಂದೆಡೆ, ಮೇ 20ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್​​ ಜಾರಿ ಮಾಡಿದೆ.

  • I have received a summon from the CBI to appear before them tomorrow, on 20th May'23 for examination.

    Despite not being given even a day’s prior notice, I will still abide by the summon.

    I will give my full cooperation during the course of the investigation. (1/2) pic.twitter.com/lh7DJY6MQW

    — Abhishek Banerjee (@abhishekaitc) May 19, 2023 " class="align-text-top noRightClick twitterSection" data=" ">

ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಕೇಂದ್ರ ಸಂಸ್ಥೆ ಅಭಿಷೇಕ್ ಬ್ಯಾನರ್ಜಿ ಅವರನ್ನು ವಿಚಾರಣೆಗೆ ಒಳಪಡಿಸಲು ಕೋಲ್ಕತ್ತಾ ಹೈಕೋರ್ಟ್​ನ ನ್ಯಾಯಮೂರ್ತಿ ಅಮೃತಾ ಸಿನ್ಹಾ ನೇತೃತ್ವದ ಏಕಸದಸ್ಯ ಪೀಠ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬ್ಯಾನರ್ಜಿ ಮೇಲ್ಮನವಿ ಸಲ್ಲಿಸಿದ್ದರು. ಶುಕ್ರವಾರ ಬೆಳಗ್ಗೆ ಬ್ಯಾನರ್ಜಿ ಪರ ವಕೀಲರು ನ್ಯಾಯಮೂರ್ತಿ ಸುಬ್ರತಾ ತಾಲೂಕ್‌ದಾರ್ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ನೇತೃತ್ವದ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು.

ಆದರೆ, ವಿಭಾಗೀಯ ಪೀಠವು ಅರ್ಜಿಯ ತ್ವರಿತ ವಿಚಾರಣೆಗೆ ನಿರಾಕರಿಸಿತ್ತು. ಈಗಾಗಲೇ ನಿಗದಿಯಾದ ಪ್ರಕರಣಗಳ ಕೆಲ ವಿಚಾರಣೆಗಳು ಮತ್ತು ತೀರ್ಪುಗಳು ಬಾಕಿ ಇವೆ. ಅಲ್ಲದೇ, ಸೋಮವಾರದಿಂದ ಬೇಸಿಗೆ ರಜೆ ಇದೆ. ಆದ್ದರಿಂದ ರಜಾಕಾಲದ ಪೀಠವನ್ನು ಸಂಪರ್ಕಿಸುವಂತೆ ನ್ಯಾಯಪೀಠ ಬ್ಯಾನರ್ಜಿ ಪರ ವಕೀಲರಿಗೆ ಮೌಖಿಕವಾಗಿ ಸಲಹೆ ನೀಡಿತ್ತು. ನಂತರ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರ್ನಮಯ್ ಭಟ್ಟಾಚಾರ್ಯ ನೇತೃತ್ವದ ಮುಂದೆ ಅರ್ಜಿ ಸಲ್ಲಿಸಿದ್ದರು. ಆದರೆ, ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ಕೂಡ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿ ರಜಾಕಾಲದ ಪೀಠವನ್ನು ಸಂಪರ್ಕಿಸುವ ಸಲಹೆಯನ್ನು ನೀಡಿದೆ. ಈ ಮೂಲಕ ತಕ್ಷಣಕ್ಕೆ ಅಭಿಷೇಕ್ ಬ್ಯಾನರ್ಜಿ ಹೈಕೋರ್ಟ್​ನಲ್ಲಿ ಯಾವುದೇ ಪರಿಹಾರ ಸಿಕ್ಕಿಲ್ಲ.

ಕಳೆದ ಗುರುವಾರ ಅರ್ಜಿ ವಿಚಾರಣೆ ನಡೆಸಿದ್ದ ಅಮೃತಾ ನ್ಯಾಯಮೂರ್ತಿ ಸಿನ್ಹಾ ನೇತೃತ್ವದ ಪೀಠವು ಅಭಿಷೇಕ್ ಬ್ಯಾನರ್ಜಿ ಅವರನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಿ ಆದೇಶಿತ್ತು. ಇದೇ ವೇಳೆ ಅಭಿಷೇಕ್ ಬ್ಯಾನರ್ಜಿ ಮತ್ತು ಉಚ್ಚಾಟಿತ ಟಿಎಂಸಿ ಯುವ ನಾಯಕ ಕುಂತಲ್ ಘೋಷ್ ಅವರಿಗೆ ತಲಾ 25 ಲಕ್ಷ ರೂಪಾಯಿ ದಂಡವನ್ನೂ ನ್ಯಾಯಪೀಠ ವಿಧಿಸಿತು.

ಈ ಹಗರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಹೆಸರನ್ನು ಹೇಳುವಂತೆ ಕೇಂದ್ರದ ಏಜೆನ್ಸಿ ನನ್ನ ಮೇಲೆ ಒತ್ತಡ ಹೇರುತ್ತಿವೆ ಎಂದು ಕುಂತಲ್ ಘೋಷ್ ಆರೋಪಿಸಿದ್ದರು. ಅಲ್ಲದೇ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಕೆಳ ನ್ಯಾಯಾಲಯದ ನ್ಯಾಯಾಧೀಶರಿಗೆ ಪತ್ರ ಬರೆದ್ದಿದ್ದರು. ಇದರಿಂದ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿಯ ಹೆಸರು ಮುನ್ನಲೆಗೆ ಬಂದಿತ್ತು.

ಸಿಬಿಐಯಿಂದ ಸಮನ್ಸ್​​ ಜಾರಿ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಬಹುದು ಎಂಬ ಹೈಕೋರ್ಟ್​ನ ಏಕಸದಸ್ಯ ಪೀಠದ ಆದೇಶದ ಬೆನ್ನಲ್ಲೇ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಿಬಿಐ ಸಮನ್ಸ್​ ಜಾರಿ ಮಾಡಿದೆ. ಈ ಬಗ್ಗೆ ಸ್ವತಃ ಅಭಿಷೇಕ್ ಟ್ವೀಟ್​ ಮಾಡಿದ್ದು, ನಾಳೆ ಮೇ 20ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐನಿಂದ ನನಗೆ ಸಮನ್ಸ್ ಬಂದಿದೆ. ಒಂದು ದಿನದ ಅವಕಾಶ ನೀಡದಿದ್ದರೂ ನಾನು ಸಮನ್ಸ್​ ಬದ್ಧನಾಗಿರುತ್ತೇನೆ. ನಾನು ಈ ತನಿಖೆ ಅವಧಿಯಲ್ಲಿ ನನ್ನ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

ನನ್ನ ಜೋನೋ ಸಂಜೋಗ್ ಯಾತ್ರೆಯನ್ನು ಇಂದು ಬಂಕುರಾದಲ್ಲಿ ಸ್ಥಗಿತಗೊಳಿಸುತ್ತೇನೆ. ಅದೇ ಸ್ಥಳದಿಂದ ಮೇ 22, 23ರಂದು ಮತ್ತೆ ಯಾತ್ರೆ ಪುನರಾರಂಭಗೊಳ್ಳಲಿದೆ. ಇಂತಹ ಘಟನೆಗಳಿಂದ ವಿಚಲಿತರಾಗದೆ ನಾನು ಪಶ್ಚಿಮ ಬಂಗಾಳದ ಜನರಿಗೆ ಇನ್ನೂ ಹೆಚ್ಚಿನ ಸಮರ್ಪಣೆ, ಬದ್ಧತೆ ಮತ್ತು ಉತ್ಸಾಹದಿಂದ ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇನೆ ಎಂದು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆ ಕೇಸ್: ತಾಯಿಯ ಅನಾರೋಗ್ಯದ ಕಾರಣ ನೀಡಿ ಸಿಬಿಐ ವಿಚಾರಣೆಗೆ ಕಡಪ ಸಂಸದ ಗೈರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.