ETV Bharat / bharat

ಎಚ್ಚೆತ್ತ ಬಂಗಾಳ ಪೊಲೀಸ್.. ರಾಜ್ಯದಲ್ಲಿ ನೆಲೆಸಿರುವ ಆಫ್ಘನ್​ ಪ್ರಜೆಗಳ ಮೇಲೆ ತೀವ್ರ ನಿಗಾ - ಪಶ್ಚಿಮ ಬಂಗಾಳ ಪೊಲೀಸರು

ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಕೋಲ್ಕತ್ತಾ ಪೊಲೀಸರು ತಮ್ಮ ರಾಜ್ಯದಲ್ಲಿರುವ ಆಫ್ಘನ್​ ಪ್ರಜೆಗಳ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

Bengal
ಪಶ್ಚಿಮ ಬಂಗಾಳ
author img

By

Published : Aug 23, 2021, 3:25 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳ ಪೊಲೀಸರು, ಕೋಲ್ಕತ್ತಾದಲ್ಲಿ ವಾಸಿಸುತ್ತಿರುವ ಆಫ್ಘನ್​ ನಾಗರಿಕರ ಪಾಸ್​, ವೀಸಾ (ಅವುಗಳ ಅವಧಿ)ಗಳನ್ನು ಪರಿಶೀಲಿಸುತ್ತಿದ್ದಾರೆ.

ಕೋಲ್ಕತ್ತಾ ಪೊಲೀಸ್ ಮೂಲಗಳ ಪ್ರಕಾರ, ರಾಜ್ಯದಲ್ಲಿ ಭಯೋತ್ಪಾದನೆ ಜಾಲ, ಬೇಹುಗಾರಿಕೆಗಳಂತಹ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರ ಚಲನವಲನಗಳನ್ನು ಪತ್ತೆ ಹಚ್ಚಲಾಗುತ್ತದೆ.

ಆಫ್ಘನ್​ ನಾಗರಿಕರು, ರಾಜ್ಯದಲ್ಲಿ ಪಾರ್ಕ್ ಸರ್ಕಸ್ ಮತ್ತು ಟಾಪ್ಸಿಯಾ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇವರು ಡ್ರೈ ಫ್ರೂಟ್ಸ್​ ವ್ಯಾಪಾರ ಹಾಗೂ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ವಿಚಾರವಾಗಿ ರಾಜ್ಯದಲ್ಲಿ ನೆಲೆಸಿದ್ದಾರೆ. ಬಂಗಾಳದಲ್ಲಿ ಆಫ್ಘನ್​ ರೆಸಿಪಿಯ ಆಹಾರ ತಯಾರಿಕೆಯ ಹಲವಾರು ಹೋಟೆಲ್​ಗಳನ್ನು ನಿರ್ಮಿಸಿದ್ದಾರೆ.

ಸದ್ಯ ಪೊಲೀಸರು, ಹೋಟೆಲ್​ಗಳ ಪರಿಶೀಲನೆ, ಅವರ ಹಿನ್ನೆಲೆ, ಪಾಸ್​​ಪೋರ್ಟ್​ಗಳ ಸತ್ಯಾಸತ್ಯತೆ ಮತ್ತು ವೀಸಾ ನಿಯಮಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತಿದ್ದಾರೆ.

ಆಫ್ಘನ್ನರು ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶಿಯರು ಕೂಡ ಚಿಕಿತ್ಸೆ ಉದ್ದೇಶಗಳಿಗಾಗಿ ರಾಜ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ. ಇದಲ್ಲದೆ, ಆಫ್ರಿಕಾದ ಹಲವಾರು ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಾಲೇಜುಗಳಲ್ಲಿ ಓದುತ್ತಿದ್ದಾರೆ ಮತ್ತು ವಿವಿಧ ಫುಟ್‌ಬಾಲ್ ಕ್ಲಬ್‌ಗಳಿಗಾಗಿ ಆಡುತ್ತಿದ್ದಾರೆ.

ಈಗಾಗಲೇ ಭಾರತದಲ್ಲಿ ಸಕ್ರಿಯವಾಗಿರುವ ಹಲವು ಉಗ್ರ ಪಡೆಗಳು ತಾಲಿಬಾನ್​ನತ್ತ ಕೈ ಚಾಚುತ್ತಿವೆ. ಅಂಥ ಕೆಲ ಗುಂಪುಗಳು ಬಂಗಾಳದಲ್ಲಿ ಸಾಕಷ್ಟಿವೆ. ಅಂತಹ ಗುಂಪುಗಳಲ್ಲಿ ಒಂದು ಅನ್ಸರ್-ಉಲ್-ಬಾಂಗ್ಲಾ ತಂಡ (ಎಬಿಟಿ). ಈ ಉಗ್ರಪಡೆಯ ಹೆಸರನ್ನು ಇತ್ತೀಚೆಗೆ ಅನ್ಸರ್-ಉಲ್-ಇಸ್ಲಾಂ ಎಂದು ನಾಮಕರಣ ಮಾಡಿಕೊಂಡಿದ್ದಾರೆ. ಈ ಸಂಘಟನೆಯ ಉನ್ನತ ಅಧಿಕಾರಿಗಳು ಇದನ್ನು ಅಲ್-ಖೈದಾ ಬಾಂಗ್ಲಾದೇಶ-ವಿಂಗ್ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಆಘ್ಘನ್​ ಬೆಳವಣಿಗೆಗಳ ಕುರಿತು ಮಾಹಿತಿ ನೀಡುವಂತೆ ಪ್ರಧಾನಿ MEA ಯನ್ನು ಕೇಳಿದ್ದಾರೆ: ಎಸ್ ಜೈಶಂಕರ್

ಈ ಗುಂಪು 2007 ರಿಂದ ಬಾಂಗ್ಲಾದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, 2013 ರಲ್ಲಿ ಬಾಂಗ್ಲಾ ಸರ್ಕಾರವು ಇದನ್ನು ನಿಷೇಧಿತ ಸಂಸ್ಥೆಯಾಗಿ ಘೋಷಿಸಿತು. ಆದರೂ, ಹೊಸ ಹೆಸರನ್ನು ಹೊಂದಿರುವ ಸಂಸ್ಥೆಯು ರಾಜ್ಯ ಗುಪ್ತಚರ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.