ETV Bharat / bharat

ಪಶ್ಚಿಮ ಬಂಗಾಳ ಪಂಚಾಯ್ತಿ ಚುನಾವಣೆ ಅಶಾಂತಿ: ವಿಜೇತ ಅಭ್ಯರ್ಥಿಗಳು ಸೇರಿ 65 ಬಿಜೆಪಿ ಕಾರ್ಯಕರ್ತರಿಗೆ ಅಸ್ಸೋಂನಲ್ಲಿ ಆಶ್ರಯ.. - West Bengal

West Bengal Panchayat Election Unrest: ಪಶ್ಚಿಮ ಬಂಗಾಳ ಗ್ರಾಮ ಪಂಚಾಯ್ತಿ ಚುನಾವಣೆ ಹಿಂಸಾಚಾರ ಹಿನ್ನೆಲೆ ವಿಜೇತ ಅಭ್ಯರ್ಥಿಗಳು ಸೇರಿದಂತೆ 65 ಬಿಜೆಪಿ ಕಾರ್ಯಕರ್ತರು ಅಸ್ಸೋಂನಲ್ಲಿ ಆಶ್ರಯ ಪಡೆದಿದ್ದಾರೆ.

Panchayat Election Unrest
ಪಶ್ಚಿಮ ಬಂಗಾಳ ಪಂಚಾಯ್ತಿ ಚುನಾವಣೆ ಅಶಾಂತಿ: ವಿಜೇತ ಅಭ್ಯರ್ಥಿಗಳು ಸೇರಿ 65 ಬಿಜೆಪಿ ಕಾರ್ಯಕರ್ತರಿಗೆ ಅಸ್ಸೋಂನಲ್ಲಿ ಆಶ್ರಯ..
author img

By

Published : Jul 27, 2023, 9:38 PM IST

ಗುವಾಹಟಿ (ಅಸ್ಸೋಂ): ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಪಂಚಾಯ್ತಿ ಚುನಾವಣೆ ನಂತರ, ರಾಜ್ಯವು ಬೆದರಿಕೆ ಮತ್ತು ಅಶಾಂತಿ ಎದುರಿಸುತ್ತಲೇ ಇದೆ. ಇದು ವ್ಯಾಪಕ ಹಿಂಸಾಚಾರ ಮತ್ತು ಬೆದರಿಕೆಗೆ ಕಾರಣವಾಗಿದೆ. ಅಸ್ಥಿರ ಪರಿಸ್ಥಿತಿಯು ನೆರೆಯ ರಾಜ್ಯ ಅಸ್ಸಾಂನ ಮೇಲೂ ಪರಿಣಾಮ ಬೀರಿದೆ. ಬಿಜೆಪಿ ಪಕ್ಷದ ವಿಜೇತ ಸದಸ್ಯರು ಸೇರಿದಂತೆ ಹಲವು ಕಾರ್ಯಕರ್ತರು ಅಸ್ಸೋಂ ರಾಜ್ಯದಲ್ಲಿ ಆಶ್ರಯ ಪಡೆದಿದ್ದಾರೆ.

ಪಶ್ಚಿಮ ಬಂಗಾಳದ ಮಾಲ್ಡಾ ಮತ್ತು ಹಬೀಬ್‌ಪುರ ಜಿಲ್ಲೆಗಳ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಿಂದ ಬಂದಿರುವ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 65 ವ್ಯಕ್ತಿಗಳ ಗುಂಪು, ಗುವಾಹಟಿಯ ಧೀರೆನ್‌ಪಾರಾ ಪ್ರದೇಶದಲ್ಲಿ ಆಶ್ರಯ ಪಡೆದಿದೆ. ಅವರಲ್ಲಿ 27 ಮಂದಿ ಪ್ರತಿನಿಧಿಗಳು ಪಂಚಾಯ್ತಿ ಚುನಾವಣೆಯಲ್ಲಿ ವಿಜಯಶಾಲಿಯಾಗಿದ್ದಾರೆ. ಬೆದರಿಕೆಗೆ ಹೆದರಿರುವ ಈ ಪ್ರತಿನಿಧಿಗಳು ತಮ್ಮ ಕುಟುಂಬಗಳೊಂದಿಗೆ ಗುವಾಹಟಿಗೆ ಓಡಿ ಬಂದಿದ್ದಾರೆ. ಕೆಲವರು ತಮ್ಮ ಮಡಿಲಲ್ಲಿ ಮಕ್ಕಳನ್ನು ಹಿಡಿದುಕೊಂಡಿರುವ ದೃಶ್ಯ ಕಂಡು ಬಂದಿದೆ.

ತೃಣಮೂಲ ಕಾಂಗ್ರೆಸ್​ನಿಂದ ಕಾರ್ಯಕರ್ತರಿಗೆ ದೈಹಿಕ, ಮಾನಸಿಕ ಹಿಂಸೆ: ಈಟಿವಿ ಭಾರತ ಜೊತೆಗೆ ಮಾತನಾಡಿದ ಬಿಜೆಪಿ ಕಾರ್ಯಕರ್ತರು, ''ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಆಡಳಿತದಿಂದ ಕಾರ್ಯಕರ್ತರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಕೊಲೆ ಮತ್ತು ಅಪಹರಣ ಮಾಡುವ ಬೆದರಿಕೆ ಹಾಕಲಾಗಿದೆ. ಬಿಜೆಪಿ ಕಾರ್ಯಕರ್ತರನ್ನು ತೃಣಮೂಲ ಕಾಂಗ್ರೆಸ್‌ಗೆ ಸೇರುವಂತೆ ಆಮಿಷವೊಡ್ಡುವ ಪ್ರಯತ್ನಗಳು ನಡೆದಿವೆ. ಧೈರ್ಯದಿಂದ ನಿರಾಕರಿಸಿದರೂ ಜೀವಕ್ಕೆ ಮತ್ತಷ್ಟು ಬೆದರಿಕೆಯನ್ನು ಉಂಟು ಮಾಡುವ ಘಟನೆಗಳು ಜರುಗಿವೆ ಎಂದು ಅವರು ಆರೋಪಿಸಿದರು.

ಕಾರ್ಯಕರ್ತರಿಗೆ ಸುರಕ್ಷತೆಯ ಕೊರತೆ: ತಮಗೆ ಎದುರಾಗಿರುವ ಅಗ್ನಿಪರೀಕ್ಷೆಯ ಕುರಿತು ಮಾತನಾಡಿ, ತಮಗೆ ಸುರಕ್ಷತೆಯ ಕೊರತೆ ಇರುವುದರಿಂದ ಗುವಾಹಟಿಯಲ್ಲಿ ಆಶ್ರಯ ಪಡೆದಿದ್ದೇವೆ. ಪರಿಸ್ಥಿತಿ ಸ್ಥಿರವಾದ ನಂತರ ಮತ್ತು ಪರಿಷತ್ತಿನ ರಚನೆಯ ದಿನಾಂಕವನ್ನು ಖಚಿತಪಡಿಸಿದ ನಂತರ ಅವರು ಮನೆಗೆ ಮರಳುವ ಭರವಸೆಯನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದ ಖುಷಿಯನ್ನು ಅನುಭವಿಸಿದ್ದರೂ ಅವರ ಮುಖದಲ್ಲಿ ಈಗ ಗಾಢವಾದ ಭಯ ಆವರಿಸಿದೆ.

ಬಿಜೆಪಿ ಕಾರ್ಯಕರ್ತರಿಗೆ ಅಗತ್ಯ ಸೌಲಭ್ಯ: ಬೆಂಬಲದ ಸೂಚಕವಾಗಿ, ಗುವಾಹಟಿಯ ಬಿಜೆಪಿ ಕಾರ್ಯಕರ್ತರಿಗೆ ವಸತಿ, ಆಹಾರ ಮತ್ತು ಜೀವನಾಂಶ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. ವಾರ್ಡ್ 20ರ ಕೌನ್ಸಿಲರ್ ಗೌರ್ ಗೋಪಾಲ್ ಮಂಡಲ್ ಮತ್ತು ವಾರ್ಡ್ ನಂ.21ರ ಗುವಾಹಟಿ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಒದಗಿಸಿದ್ದಾರೆ. ಈ ಕಾರ್ಯಕರ್ತರ ಗುಂಪು ಜುಲೈ 18 ರಂದು ಗುವಾಹಟಿಗೆ ಆಗಮಿಸಿತು. ಆರಂಭದಲ್ಲಿ ಭಾರತ್ ಸೇವಾ ಆಶ್ರಮದಲ್ಲಿ ಆಶ್ರಯ ಪಡೆಯಿತು. ಜೊತೆಗೆ ಧೀರೆನ್‌ಪಾರಾದಲ್ಲಿನ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ವಾಸ್ತವ್ಯ ಹೂಡಿತು. ಈ ಪರಿಸ್ಥಿತಿಯು ಪಶ್ಚಿಮ ಬಂಗಾಳದಲ್ಲಿ ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದ ಅಶಾಂತಿಯ ಗಂಭೀರ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ. ಭಯಗೊಂಡಿರುವ ವ್ಯಕ್ತಿಗಳ ಸುರಕ್ಷತೆ ಮತ್ತು ಭದ್ರತೆ ನೀಡಲು ಗಮನಹರಿಸುವ ಅಗತ್ಯವಿದೆ.

ಇದನ್ನೂ ಓದಿ: ಮಣಿಪುರ ಮಹಿಳೆಯರ ವಿಡಿಯೋ ತನಿಖೆ ಸಿಬಿಐ ಹೆಗಲಿಗೆ: ಕೇಂದ್ರದಿಂದಲೂ ಸುಪ್ರೀಂಕೋರ್ಟ್​ಗೆ ಅಫಿಡವಿಟ್​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.