ETV Bharat / bharat

ಪಶ್ಚಿಮ ಬಂಗಾಳ: ಸಚಿವ ಸುಬ್ರತಾ ಸಹಾ ಮೇಲೆ ದಾಳಿ, 12 ಮಂದಿ ಪೊಲೀಸರ​ ವಶಕ್ಕೆ - ತೃಣಮೂಲ ಕಾಂಗ್ರೆಸ್

ಪಶ್ಚಿಮ ಬಂಗಾಳದ ಆಹಾರ ಸಂಸ್ಕರಣೆ ಮತ್ತು ತೋಟಗಾರಿಕೆ ರಾಜ್ಯ ಸಚಿವ ಸುಬ್ರತಾ ಸಹಾ (Subrata Saha ) ಮತ್ತು ಸ್ಥಳೀಯ ಶಾಸಕ ಜಿಬನ್ ಕೃಷ್ಣ ಸಹಾ (Jiban Krishna Saha) ಮೇಲೆ ನಿನ್ನೆ ಶಂಕಿತರ ಗುಂಪೊಂದು ದಾಳಿ ನಡೆಸಿದೆ.

West Bengal minister Subrata Saha
West Bengal minister Subrata Saha
author img

By

Published : Nov 11, 2021, 9:48 AM IST

ಮುರ್ಷಿದಾಬಾದ್: ಪಶ್ಚಿಮ ಬಂಗಾಳದ ಆಹಾರ ಸಂಸ್ಕರಣೆ ಮತ್ತು ತೋಟಗಾರಿಕೆ ರಾಜ್ಯ ಸಚಿವ ಸುಬ್ರತಾ ಸಹಾ (Subrata Saha ) ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (Trinamool Congress ) ಶಾಸಕರ ಮೇಲೆ ಗುಂಪೊಂದು ದಾಳಿ ನಡೆಸಿದೆ.

ಪೊಲೀಸ್ ಮಾಹಿತಿ ಪ್ರಕಾರ, ಬುರ್ದ್ವಾನ್ ಕ್ಷೇತ್ರದಲ್ಲಿ ನಡೆದ ದಾಳಿಯಲ್ಲಿ ಸಚಿವ ಸುಬ್ರತಾ ಸಹಾ (Subrata Saha ) ಮತ್ತು ಸ್ಥಳೀಯ ಶಾಸಕ ಜಿಬನ್ ಕೃಷ್ಣ ಸಹಾ (Jiban Krishna Saha) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜನರ ಗುಂಪೊಂದು ಸಚಿವರ ವಾಹನವನ್ನು ಅಡ್ಡಗಟ್ಟಿ ಇಟ್ಟಿಗೆಗಳನ್ನು ಎಸೆದು ಕಾರಿನ ಕಿಟಕಿ ಗಾಜುಗಳನ್ನು ಒಡೆದು ಹಾನಿಗೊಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 12 ಜನರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ ರಸ್ತೆ ಅಪಘಾತವೊಂದರಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಮೃತಪಟ್ಟಿದ್ದರು. ಈ ಹಿನ್ನೆಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ( Mamata Banerjee) ಅವರ ಸೂಚನೆ ಮೇರೆಗೆ ಮೃತರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲು ಸಂತ್ರಸ್ತರ ಮನೆಗೆ ಶಾಸಕರು, ಸಚಿವರು ಭೇಟಿ ನೀಡಿದ್ದರು. ಕುಟುಂಬಸ್ಥರಿಗೆ ಧನ ಪರಿಹಾರ ನೀಡಿ ವಾಪಸ್​ ಬರುವ ವೇಳೆ ಈ ಘಟನೆ ನಡೆದಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮುರ್ಷಿದಾಬಾದ್ ಜಿಲ್ಲಾ ಉಸ್ತುವಾರಿ ಸಚಿವ ಸುಬ್ರತಾ ಸಹಾ (Subrata Saha), "ಸಮಾಜ ವಿರೋಧಿ ಗುಂಪು ನಮ್ಮ ಮೇಲೆ ದಾಳಿ ಮಾಡಿದೆ. ಅವರು ಯಾರೆಂದು ನನಗೆ ತಿಳಿದಿಲ್ಲ" ಎಂದು ಅವರು ತಿಳಿಸಿದ್ದಾರೆ.

ಘಟನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, "ಇದು ಟಿಎಂಸಿಯೊಳಗೆ ನಡೆಯುತ್ತಿರುವ ಆಂತರಿಕ ಕಲಹದ ಸ್ಪಷ್ಟ ನಿದರ್ಶನವಾಗಿದೆ. ರಾಜ್ಯದಲ್ಲಿ ಟಿಎಂಸಿ ಬಣಗಳ ನಡುವೆ ಜಗಳ ನಡೆಯುತ್ತಿದೆ. ಟಿಎಂಸಿ ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪೊಲೀಸರು ಗಮನಹರಿಸಬೇಕು" ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.