ETV Bharat / bharat

ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ: ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯ ಬಂಧಿಸಿದ ED

Jyotipriya Mallick arrested: ಪಶ್ಚಿಮ ಬಂಗಾಳದ ಹಾಲಿ ಅರಣ್ಯ ಸಚಿವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

West Bengal minister Jyotipriya Mallick has been arrested by ED
ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ: ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯ ಬಂಧಿಸಿದ ಇಡಿ
author img

By ETV Bharat Karnataka Team

Published : Oct 27, 2023, 8:25 AM IST

ಕೋಲ್ಕತ್ತಾ( ಪಶ್ಚಿಮ ಬಂಗಾಳ): ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಸಚಿವೆ ಜ್ಯೋತಿಪ್ರಿಯ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ, ಇಡಿ ಬಂಧನದ ಕುರಿತು ಮಾತನಾಡಿರುವ ಸಚಿವ ಜ್ಯೋತಿಪ್ರಿಯ ಮಲಿಕ್ "ನಾನು ಪಿತೂರಿಯ ಬಲಿಪಶು." ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಆರೋಪ ಮೇಲೆ ಸಚಿವ ಜ್ಯೋತಿಪ್ರಿಯಾ ಮಲಿಕ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. ಗುರುವಾರ ಬೆಳಗ್ಗೆ ಏಕಾಏಕಿ ಕೇಂದ್ರ ಭದ್ರತಾ ಪಡೆಗಳೊಂದಿಗೆ ಸಚಿವರ ಲೇಕ್​ ಸಾಲ್ಟ್​ನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಶೋಧ ಕಾರ್ಯ ನಡೆಸಿದ್ದಾರೆ. ಬೆಳಗ್ಗೆಯಿಂದ ಸತತ ವಿಚಾರಣೆ ತಪಾಸಣೆ ನಡೆಸಿದ್ದ ಇಡಿ ಅಧಿಕಾರಿಗಳು, ಅಂತಿಮವಾಗಿ ಈ ಪ್ರಕರಣದಲ್ಲಿ ಮಾಜಿ ಆಹಾರ ಖಾತೆ ಸಚಿವ ಹಾಲಿ ಅರಣ್ಯ ಸಚಿವ ಮಲಿಕ್​ ಅವರನ್ನು ಬಂಧಿಸಿದೆ. ನಿನ್ನೆ ಇಡಿ ದಾಳಿ ವೇಳೆ ಸಚಿವ ಜ್ಯೋತಿಪ್ರಿಯ ಮಲಿಕ್​ ಅವರು ಮನೆಯಲ್ಲೇ ಇದ್ದರು.

ನಿನ್ನೆ (ಗುರುವಾರ) ಬೆಳಗ್ಗೆಯಿಂದಲೇ ಇಡಿ ಅಧಿಕಾರಿಗಳು ಸಚಿವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಇಡಿ ಮಾಹಿತಿ ಪ್ರಕಾರ, ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಎಸಗಿರುವ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಪ್ರಕರಣ ಸಂಬಂಧ ಈ ಹಿಂದೆ ಬಾಕಿಬುರ್​ ರೆಹಮಾನ್​ ಅವರನ್ನು ಇಡಿ ಬಂಧಿಸಿತ್ತು. ರೆಹಮಾನ್​ ವಿಚಾರಣೆ ವೇಳೆ ಸಚಿವ ಜ್ಯೋತಿಪ್ರಿಯ ಮಲಿಕ್ ಹೆಸರು ಕೇಳಿಬಂದಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಇಡಿ ಅಧಿಕಾರಿಗೆ ಸಚಿವರ ಮನೆ ಮೇಲೆ ದಾಳಿ ನಡೆಸಿದ್ದರು. ಸಾಲ್ಟ್​ ಲೇಕ್​ನ ಬಿ ಬ್ಲಾಕ್​ನಲ್ಲಿರುವ ಸಚಿವರ ಎರಡು ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಲಾಗಿತ್ತು.

ಇಡಿ ಅಧಿಕಾರಿಗಳು ಪಡಿತರ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಚಿವ ಜ್ಯೋತಿ ಪ್ರಿಯ ಮಲಿಕ್​ ಅವರನ್ನು ನಿನ್ನೆಯಿಂದಲೇ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಅಧಿಕಾರಿಗಳು ನಗರಪಾಲಿಕೆ ನೇಮಕಾತಿ ಹಗರಣದ ವಿಚಾರಣೆ ನಡೆಸುವ ವೇಳೆ ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಸಚಿವರ ಆಪ್ತ ಅಮಿತ್ ದೆ ಅವರ ಫ್ಲಾಟ್​ ಮೇಲೂ ಅಧಿಕಾರಿಗಳು ದಾಳಿ ಮಾಡಲಾಗಿತ್ತು. ಅಮಿತ್​ ಅವರು ಡಂಡಂ ನಗೇರ್​ಬಜಾರ್​ನಲ್ಲಿರುವ ಫ್ಲಾಟ್​ವೊಂದರಲ್ಲಿ ವಾಸಿಸುತ್ತಿದ್ದು, ಅಧಿಕಾರಿಗಳು ದಾಳಿ ನಡೆಸಿದ ವೇಳೆ ಫ್ಲಾಟ್​ಗೆ ಬೀಗ ಹಾಕಿತ್ತು ಎಂದು ತಿಳಿದು ಬಂದಿದೆ. ಇದರ ಜೊತೆಗೆ ಇಡಿ ಅಧಿಕಾರಿಗಳು ಪಡಿತರ ವಿತರಣೆಯಲ್ಲಿ ಅಕ್ರಮ ಎಸಗಿರುವ ಸಂಬಂಧ ರಾಜ್ಯದ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದರು.

ಇನ್ನೊಂದೆಡೆ, ನಗರಪಾಲಿಕೆ ನೇಮಕಾತಿ ಪ್ರಕರಣದಲ್ಲಿ ಅಕ್ರಮ ಎಸಗಿರುವ ಆರೋಪ ಸಂಬಂಧ ಸಿಬಿಐ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿದ್ದಾರೆ. ಈ ವೇಳೆ ಸಚಿವ ಫಿರ್ಹಾದ್ ಹಕೀಮ್​ ಹಾಗೂ ಕಮರ್ಹತಿ ಶಾಸಕ ಮದನ್ ಮಿತ್ರಾ ಅವರ ಮನೆ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನು ಓದಿ:ಸಹೋದರನಿಗೆ 100 ಕೋಟಿ ರೂ. ವಂಚನೆ ಆರೋಪ.. ಮೈಸೂರಿನಲ್ಲಿ ಮುಂಬೈ ಮೂಲದ ಮಹಿಳೆ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.