ಪಣಜಿ(ಗೋವಾ) : ಫೆಬ್ರವರಿ 14ರಂದು ಗೋವಾ ವಿಧಾನಸಭಾ ಚುನಾವಣೆ ನಡೆಯಲಿದೆ. ಆಮ್ ಆದ್ಮಿ ಪಕ್ಷ (ಎಎಪಿ)ದಿಂದಲೂ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ದೆಹಲಿ ಸಿಎಂ ಹಾಗೂ ಆಪ್ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯದ ಜನತೆಗೆ ಬಂಪರ್ ಆಫರ್ ನೀಡಿದ್ದಾರೆ.
ಇಂದು 13 ಅಂಶಗಳ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿರುವ ಕೇಜ್ರಿವಾಲ್ ಅವರು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗೋವಾದ ಶಿಕ್ಷಣ, ಆರೋಗ್ಯ, ವ್ಯಾಪಾರ, ಕೈಗಾರಿಕೆ, ಜೀವನೋಪಾಯ, ಗಣಿಗಾರಿಕೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತರುವ ಭರವಸೆ ನೀಡಿದ್ದಾರೆ.
"ರಾಜ್ಯದ ಜನರಿಗೆ ಈವರೆಗೆ ಬಿಜೆಪಿ ಅಥವಾ ಕಾಂಗ್ರೆಸ್ ಹೊರತುಪಡಿಸಿ ಯಾವುದೇ ಆಯ್ಕೆ ಇರಲಿಲ್ಲ. ಅವರೀಗ ಬದಲಾವಣೆಯನ್ನು ಬಯಸುತ್ತಿದ್ದಾರೆ. ಮುಂಬರುವ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ. ಅವರಿಗೆ ಎಎಪಿ ತಾಜಾ ಭರವಸೆಯಾಗಿದೆ" ಎಂದು ಹೇಳಿದ್ದಾರೆ.
13 ಅಂಶಗಳ ಕಾರ್ಯಸೂಚಿ ಇಲ್ಲಿವೆ
- ದಿನದ 24 ಗಂಟೆಗಳ ಕಾಲ ಉಚಿತ ವಿದ್ಯುತ್
- ಉಚಿತ ನೀರಿನ ಸೌಲಭ್ಯ
- ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ
- ಯುವಕರಿಗೆ ಉದ್ಯೋಗ.. ಸಿಗದವರಿಗೆ ತಿಂಗಳಿಗೆ 3000 ರೂ. 'ನಿರುದ್ಯೋಗ ಭತ್ಯೆ'
- ವಂಚಿತ ಕುಟುಂಬಗಳಿಗೆ ಭೂಮಿ ಪಡೆಯುವ ಹಕ್ಕು
- ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ ಗಣಿಗಾರಿಕೆ ಆರಂಭ
- ಗೋವಾದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ
- ಉತ್ತಮ ಮತ್ತು ಉಚಿತ ಆರೋಗ್ಯ ಸೇವೆಗಾಗಿ ಪ್ರತಿ ಗ್ರಾಮ - ಜಿಲ್ಲೆಗಳಲ್ಲಿ ಮೊಹಲ್ಲಾ ಕ್ಲಿನಿಕ್, ಆಸ್ಪತ್ರೆಗಳ ಸ್ಥಾಪನೆ
- ರೈತರೊಂದಿಗೆ ಸಂವಾದ ನಡೆಸುವ ಮೂಲಕ ಕೃಷಿ ಸಮಸ್ಯೆಗಳಿಗೆ ಪರಿಹಾರ
- ರಸ್ತೆಗಳ ಸುಧಾರಣೆ
- ಪ್ರತಿ ಕುಟುಂಬಕ್ಕೆ 5 ವರ್ಷಗಳ ನಂತರ 10 ಲಕ್ಷ ರೂ. ಮೌಲ್ಯದ ಸೌಲಭ್ಯಗಳು
- 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 1000 ರೂಪಾಯಿ. ಕುಟುಂಬದಲ್ಲಿ ಇಬ್ಬರು ಮಹಿಳೆಯರಿದ್ದರೆ ಅವರಿಗೆ ವರ್ಷಕ್ಕೆ 24,000 ರೂ. ಭತ್ಯೆ
- ಪ್ರವಾಸೋದ್ಯಮ ಅಭಿವೃದ್ಧಿ
ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಗೋವಾ ಕನ್ನಡಿಗರ ಮತ ಬೇಟೆಗೆ ಸಿ.ಟಿ.ರವಿ ಕಸರತ್ತು