ನವದೆಹಲಿ: ಭಾರತೀಯ-ಸ್ವೀಡಿಷ್ ನೇತೃತ್ವದ ಹವಾಮಾನ ನಾಯಕತ್ವದ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಷನ್ಗೆ (ಲೀಡ್ಐಟಿ) ಸೇರ್ಪಡೆಗೊಳ್ಳುವ ಅಮೆರಿಕದ ನಿರ್ಧಾರವನ್ನು ಪ್ರಧಾನಿ ಮಂತ್ರಿಗಳ ಕಚೇರಿ (ಪಿಎಂಒ) ಸ್ವಾಗತಿಸಿದ್ದಾರೆ. ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸಲು ಇದು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ನಾವು ಸೇರುತ್ತೇವೆ ಮತ್ತು ಪಾಲುದಾರರಾಗುತ್ತೇವೆ. ಕೈಗಾರಿಕಾ ವಲಯ ಸೇರಿದಂತೆ ಮಂಡಳಿಯ ನಿರ್ಣಾಯಕ ಕ್ಷೇತ್ರಗಳನ್ನು ಡಿಕಾರ್ಬೊನೈಸ್ ಮಾಡುವ ರಾಷ್ಟ್ರಗಳು ಮತ್ತು ಪ್ರಯತ್ನಗಳಿಗೆ ಕೈಜೋಡಿಸುತ್ತೇವೆ. ಅಲ್ಲಿ ನಾವು ಸ್ವೀಡನ್ ಮತ್ತು ಭಾರತದೊಂದಿಗೆ ಸೇರ್ಪಡೆ ಆಗುತ್ತೇವೆ. ಕೈಗಾರಿಕಾ ಪರಿವರ್ತನೆಗೆ ನಾಯಕತ್ವ ಗುಂಪಿನಲ್ಲಿ ನಾವು ಭಾಗಿದಾರರು ಎಂದು ಹೇಳಿದೆ.
ಕೈಗಾರಿಕೆಗಳ ಶೂನ್ಯ ಹೊಗೆ ಹೊರಸೂಸುವಿಕೆಯ ಹಾದಿಯಲ್ಲಿ ಕಡಿಮೆ ಇಂಗಾಲದ ಮಾರ್ಗಗಳನ್ನು ಉತ್ತೇಜಿಸುವ ಪ್ರಯತ್ನವಾದ ಅಮೆರಿಕ ಲೀಡ್ಐಟಿಯಲ್ಲಿ ಸ್ವೀಡನ್ ಮತ್ತು ಭಾರತವನ್ನು ಸೇರುತ್ತಿದೆ ಎಂದು ಟ್ವೀಟ್ನಲ್ಲಿ ಶ್ವೇತಭವನ ಹೇಳಿದೆ.
ನಾವು ಒಟ್ಟಾಗಿ ಕೆಲಸ ಮಾಡುವುದರಿಂದ ಹವಾಮಾನ ಬಿಕ್ಕಟ್ಟನ್ನು ಪರಿಹರಿಸಲು ಉದ್ಯಮ ಪರಿವರ್ತನೆಗೆ ಇನ್ನಷ್ಟು ವೇಗ ಹೆಚ್ಚಿಸಬಹುದು ಎಂದಿದೆ.
ಲೀಡರ್ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಷನ್, ಲೀಡ್ಐಟಿ ಸೇರ್ಪಡೆ ಆಗುತ್ತಿರುವ ಪೊಟಸ್ಗೆ ಸ್ವಾಗತ. ಭಾರತೀಯ-ಸ್ವೀಡಿಷ್ ಹವಾಮಾನ ಉಪಕ್ರಮವು ಭಾರೀ ಉದ್ಯಮ ಪರಿವರ್ತನೆಗೆ ನಾಂದಿ ಆಗಲಿದೆ ಎಂದು ಪಿಎಂಒ ಟ್ವೀಟ್ ಮಾಡಿದೆ.
ಇದು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸಲು, ಸ್ಪರ್ಧಾತ್ಮಕತೆ ಬಲಪಡಿಸಲು ಹಾಗೂ ಹೊಸ ಸುಸ್ಥಿರ ಉದ್ಯೋಗಗಳನ್ನು ರಚಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದೆ.
ಜಾಗತಿಕ ಹೊರಸೂಸುವಿಕೆಯ ಶೇ 30ರಷ್ಟು ಭಾರಿ ಉದ್ಯಮ ಮತ್ತು ಸಾರಿಗೆ ವಲಯದ ಪಾಲಿದೆ. ಈ ವಲಯಗಳ ಪುನರ್ ರಚನೆಯು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದ ಅವಶ್ಯಕ ಭಾಗವಾಗಿದೆ ಎಂದು ಲೋಫ್ವೆನ್ ಹೇಳಿದರು.
ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸಲು ಅಮೆರಿಕ ಮತ್ತು ಇತರರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ, 2050ರ ವೇಳೆಗೆ ದೊಡ್ಡ ಉದ್ಯಮವು ಪಳೆಯುಳಿಕೆ ಮುಕ್ತ ಹಾಗೂ ನಿವ್ವಳ-ಶೂನ್ಯ ಹೊರಸೂಸುವಿಕೆ ಸಾಧಿಸಲಿದೆ ಎಂದರು.