ETV Bharat / bharat

Tokyo Olympics- ಭಾರತಕ್ಕೆ ಮೊದಲ ಪದಕ : ಬೆಳ್ಳಿ Medal​​ ಗೆದ್ದ ವೇಟ್​ ಲಿಫ್ಟರ್​ ಮೀರಾಬಾಯಿ ಚಾನು - Mira bai chanu latest news

ಜಪಾನ್ ಭಾರತ ಟೋಕಿಯೋ ಒಲಿಂಪಿಕ್​ನ ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ವೇಟ್‌ಲಿಫ್ಟಿಂಗ್ ಮಹಿಳಾ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗಳಿಸಿದ್ದಾರೆ.

weight lifting in tokyo olympic
Tokyo Olympics: ಬೆಳ್ಳಿ ಪದಕ ಗೆದ್ದ ವೇಟ್​ ಲಿಫ್ಟರ್​ ಮೀರಾಬಾಯಿ ಚಾನು
author img

By

Published : Jul 24, 2021, 12:11 PM IST

Updated : Jul 24, 2021, 8:06 PM IST

ಟೋಕಿಯೋ: ಭಾರತ ಟೋಕಿಯೋ ಒಲಿಂಪಿಕ್​ನ ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ವೇಟ್‌ಲಿಫ್ಟಿಂಗ್ ಮಹಿಳಾ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗಳಿಸಿದ್ದಾರೆ. ಭಾರತಕ್ಕೆ ಇದೇ ಮೊದಲ ಬಾರಿಗೆ ಒಲಿಂಪಿಕ್​​ ವೇಟ್​ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ದೊರೆತಿದೆ.

ವೇಟ್​ ಲಿಫ್ಟಿಂಗ್​ನಲ್ಲಿ ಎರಡನೇ ಶ್ರೇಣಿ ಪಡೆದ ಮೀರಾಬಾಯಿ ಚಾನು 110 ಕೆಜಿ ಭಾರವನ್ನು ಎತ್ತುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಣಿಪುರ ಮೂಲದವರಾದ ಇವರು ಒಟ್ಟು 202 ಕೆಜಿ ಭಾರವನ್ನು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಎತ್ತಿದ್ದಾರೆ (ಸ್ನ್ಯಾಚ್​​ನಲ್ಲಿ 87 ಕೆಜಿ ಮತ್ತು ಕ್ಲೀನ್ ಅಂಡ್​ ಜರ್ಕ್​ನಲ್ಲಿ 115).

Tokyo Olympics- ಭಾರತಕ್ಕೆ ಮೊದಲ ಪದಕ : ಬೆಳ್ಳಿ Medal​​ ಗೆದ್ದ ವೇಟ್​ ಲಿಫ್ಟರ್​ ಮೀರಾಬಾಯಿ ಚಾನು
ವೇಟ್​ ಲಿಫ್ಟರ್​ ಮೀರಾಬಾಯಿ ಚಾನು

ಮೊದಲ ಸ್ಥಾನ ಪಡೆದು ಝಿಹೈ ಹೌ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 210 ಕೆಜಿ ಭಾರವನ್ನು ಎತ್ತಿ ಹೊಸ ದಾಖಲೆ ಸೃಷ್ಟಿಸಿದ್ದು, ಇಂಡೋನೇಷ್ಯಾದ ಕ್ಯಾಂಟಿಕಾ ಐಸಾಹ್ 194 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಏನಿದು ಸ್ನ್ಯಾಚ್ ಮತ್ತು ಕ್ಲೀನ್ ಆ್ಯಂಡ್ ಜರ್ಕ್..?

ಸ್ನ್ಯಾಚ್ ಎಂದರೆ ಯಾವುದೇ ತೊಂದರೆಗೆ ಒಳಗಾಗದೇ ನಿರಾಯಾಸವಾಗಿ ವೇಟ್​ ಲಿಫ್ಟರ್​ ಬಾರ್​ಬೆಲ್​ ಅನ್ನು ಎತ್ತುವುದು ಎಂದರ್ಥ. ಕ್ಲೀನ್ ಅಂಡ್​​ ಜರ್ಕ್ ಎಂದರೆ ಬಾರ್​ಬೆಲ್ ಅನ್ನು ಸಾವಕಾಶವಾಗಿ ಎತ್ತಿ ಕೆಲ ಸಮಯ ಭುಜದ ಮೇಲಿಟ್ಟು ನಂತರ ಅದನ್ನು ಮೇಲಕ್ಕೆ ಎತ್ತುವುದು ಎಂದರ್ಥ.

ಪ್ರಧಾನಿ ಮೋದಿ ಶುಭಾಶಯ

ಮೀರಾಬಾಯಿ ಚಾನು ಸಾಧನೆಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಮೀರಾಬಾಯಿ ಚಾನು ಅವರ ಸಾಧನೆಯಿಂದ ದೇಶಕ್ಕೆ ಹೆಮ್ಮೆಯಾಗಿದೆ. ಟೋಕಿಯೋ ಒಲಿಂಪಿಕ್​​ನ ಆರಂಭದಲ್ಲೇ ಈ ಸಂತೋಷದ ಸುದ್ದಿಯಿಂದ ಖುಷಿಯಾಗಿದೆ. ಆಕೆಯ ಯಶಸ್ಸು ಪ್ರತಿಯೊಬ್ಬ ಭಾರತೀಯರಿಗೂ ಪ್ರೇರಣೆ ಎಂದಿದ್ದಾರೆ.

Last Updated : Jul 24, 2021, 8:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.