ಮೇಷ: ಈ ವಾರ ನಿಮ್ಮ ಪಾಲಿಗೆ ಸಾಮಾನ್ಯ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಹೊಸ ಭರವಸೆಯನ್ನು ಸ್ವಾಗತಿಸಲಿದ್ದು, ಏನಾದರೂ ಹೊಸ ಕೆಲಸವನ್ನು ಮಾಡಲಿದ್ದಾರೆ. ಇದರಿಂದ ಅವರಿಗೆ ಯಶಸ್ಸು ದೊರೆಯಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಸಂತಸ ಕಂಡುಕೊಳ್ಳಲಿದ್ದಾರೆ. ಆದರೆ ಆಗಾಗ ಉಂಟಾಗುವ ಸಂಘರ್ಷಗಳು, ಕೆಲವೊಂದು ವಿಚಾರಗಳ ಕುರಿತು ನೀವು ಯೋಚಿಸುವಂತೆ ಮಾಡಬಹುದು. ಏಕೆಂದರೆ ಎಲ್ಲಿ ಸಮಸ್ಯೆ ಉಂಟಾಗಿದೆ ಎನ್ನುವ ಕುರಿತು ಕಂಡುಹಿಡಿಯಲು ನಿಮಗೆ ಕಷ್ಟಕರವಾದೀತು. ಉದ್ಯೋಗದಲ್ಲಿರುವ ಸ್ಥಿತಿಯು ಸಾಕಷ್ಟು ಮಟ್ಟಿಗೆ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಸಹೋದ್ಯೋಗಿಗಳ ನೆರವನ್ನು ನೀವು ಪಡೆಯಲಿದ್ದೀರಿ. ಇದರಿಂದ ನಿಮ್ಮ ಸ್ಥಾನವು ಗಟ್ಟಿಗೊಳ್ಳಲಿದೆ. ನಿಮ್ಮ ಕಚೇರಿಯಿಂದ ಯಾವುದೇ ವಾಹನ ಅಥವಾ ವಸತಿಯ ಪ್ರಯೋಜನವನ್ನು ನೀವು ಪಡೆಯಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಹೊಸ ಜನರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ. ಇದರಿಂದಾಗಿ ನಿಮ್ಮ ವ್ಯವಹಾರದಲ್ಲಿ ಸರಿಯಾದ ಲಾಭ ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಕಠಿಣ ಶ್ರಮವು ನಿಮಗೆ ಯಶಸ್ಸನ್ನು ತಂದು ಕೊಡಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.
ವೃಷಭ: ಈ ವಾರ ನಿಮಗೆ ಸಾಕಷ್ಟು ಯಶಸ್ವಿ ವಾರ ಎನಿಸಲಿದೆ. ನಿಮ್ಮಲ್ಲಿ ಮನೆ ಕಟ್ಟುವ ಇಚ್ಛೆ ಇದ್ದರೆ ಈ ಬಾರಿ ನಿಮ್ಮ ಬಯಕೆಯು ಈಡೇರಲಿದೆ. ರಿಯಲ್ ಎಸ್ಟೇಟ್ಗೆ ಸಂಬಂಧಿಸಿದಂತೆ ಸಮಯವು ನಿಮಗೆ ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವ ಜನರು ಒಂದಷ್ಟು ಒತ್ತಡವನ್ನು ಎದುರಿಸಬಹುದು. ಆದರೆ ತಮ್ಮ ದಕ್ಷತೆಯನ್ನು ಹೆಚ್ಚಿಸಲು ಅವರಿಗೆ ಸಾಧ್ಯವಾಗಲಿದೆ. ಆದಾಯವು ಚೆನ್ನಾಗಿರಲಿದೆ. ಅಲ್ಲದೆ ಆಸ್ತಿಯಿಂದ ನೀವು ಲಾಭ ಪಡೆಯಲಿದ್ದೀರಿ. ಉತ್ತಮ ಲಾಭವನ್ನು ನೀವು ನಿರೀಕ್ಷಿಸಬಹುದು. ಸಣ್ಣಪುಟ್ಟ ವೆಚ್ಚಗಳು ಉಂಟಾಗಬಹುದು. ಮನೆಯಲ್ಲಿ ಮುಖ್ಯವಾಗಿ ಹಿರಿಯರು ಕಾಯಿಲೆಗೆ ತುತ್ತಾಗಬಹುದು. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಸಂತಸದಿಂದ ಮುಂದುವರಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿ ಮತ್ತು ಕುಟುಂಬದ ಸದಸ್ಯರ ಜೊತೆಗಿನ ಉತ್ತಮ ಬಾಂಧವ್ಯದ ಕಾರಣ ನೀವು ಸಂತಸ ಅನುಭವಿಸಲಿದ್ದೀರಿ. ಈ ಸಮಯವು ನಿಮ್ಮ ಪ್ರೇಮ ಜೀವನಕ್ಕೆ ಅನುಕೂಲಕರವಾಗಿದೆ. ನಿಮ್ಮ ಸಂಬಂಧದಲ್ಲಿ ನೀವು ಮುಂದೆ ಸಾಗಲಿದ್ದೀರಿ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು.
ಮಿಥುನ: ಈ ವಾರ ನಿಮಗೆ ಉತ್ತಮ ಫಲಿತಾಂಶ ತಂದು ಕೊಡಲಿದೆ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿನಲ್ಲಿ ತೃಪ್ತಿ ಅನುಭವಿಸಲಿದ್ದಾರೆ ಹಾಗೂ ತಮ್ಮ ತಮ್ಮ ಜೀವನ ಸಂಗಾತಿಯನ್ನು ಸಾಕಷ್ಟು ಹಚ್ಚಿಕೊಳ್ಳಲಿದ್ದಾರೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನಿಮ್ಮ ಸಂಬಂಧದಲ್ಲಿ ನೀವು ಸಾಕಷ್ಟು ಪ್ರಯತ್ನ ಮಾಡಬಹುದು. ನಿಮ್ಮ ಗೆಳೆಯರೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ನಿಮ್ಮ ಕೆಲಸದಲ್ಲಿ ನೀವು ಶ್ರದ್ಧೆಯಿಂದ ದುಡಿಯಲಿದ್ದೀರಿ. ನಿಮ್ಮ ಬಾಸ್ ನಿಮಗೆ ಏನಾದರೂ ಹೊಸ ಕೆಲಸವನ್ನು ನೀಡಬಹುದು ಹಾಗೂ ನಿಮ್ಮ ಮೇಲೆ ನಿಗಾ ಇರಿಸಬಹುದು. ಹೀಗಾಗಿ ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಈ ಕುರಿತು ಎಚ್ಚರಿಕೆಯಿಂದ ಇರಿ. ನಿಮ್ಮ ಕೆಲಸದಲ್ಲಿ ಯಾರಾದರೂ ಒಬ್ಬರು ಅಡ್ಡಿ ಅತಂಕಗಳನ್ನುಂಟು ಮಾಡುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನೀವು ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದು ಇದು ನಿಮಗೆ ಉತ್ತಮ ಫಲಿತಾಂಶ ತಂದು ಕೊಡಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಆಹಾರದ ಕಡೆಗೆ ವಿಶೇಷ ಗಮನ ನೀಡುವುದು ಒಳ್ಳೆಯದು. ವಾರದ ಮೊದಲ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.
ಕರ್ಕಾಟಕ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನೀವು ವಿವಾಹಿತರಾಗಿದ್ದರೆ ಈ ಸಮಯವನ್ನು ಚೆನ್ನಾಗಿ ಬೆಳೆಸಿಕೊಳ್ಳಿ ಹಾಗೂ ನಿಮ್ಮ ಸಂಬಂಧವನ್ನು ಸುಧಾರಿಸಲು ಯತ್ನಿಸಿ. ಏಕೆಂದರೆ ಸಮಯವು ನಿಮಗೆ ಅನುಕೂಲಕರವಾಗಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಸಮಯವು ಸ್ವಲ್ಪ ದುರ್ಬಲವಾಗಿದೆ. ಆದರೆ ನಿಮ್ಮ ಜಾಣ್ಮೆಯ ಮೂಲಕ ನಿಮ್ಮ ಪ್ರೇಮಿಯ ಮನಸ್ಸನ್ನು ನೀವು ಗೆಲ್ಲಲಿದ್ದೀರಿ. ವಾರದ ಆರಂಭಿಕ ದಿನಗಳಲ್ಲಿ ನೀವು ಎಲ್ಲಾದರೂ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಗೆಳೆಯರ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ. ಈ ವಾರದಲ್ಲಿ ನಿಮ್ಮ ಪ್ರೇಮಿಯ ಜೊತೆಗೂ ನೀವು ಸಾಕಷ್ಟು ಸಮಯವನ್ನು ಕಳೆಯಬಹುದು. ಈ ವಾರದಲ್ಲಿ ಮಾನಸಿಕವಾಗಿ ನೀವು ನಿರಾಳತೆಯನ್ನು ಅನುಭವಿಸಲಿದ್ದೀರಿ. ಕೌಟುಂಬಿಕ ಬದುಕಿನಲ್ಲಿ ತೃಪ್ತಿಯ ಭಾವನೆ ನೆಲೆಸಲಿದೆ. ಮನೆಯಲ್ಲಿ ಹೊಸ ಕಾರ್ಯಕ್ರಮಗಳು ನಡೆಯುವ ಕಾರಣ ಸಾಕಷ್ಟು ಜನರು ಬಂದು ಹೋಗಬಹುದು. ಹೀಗಾಗಿ ಮನೆಯಲ್ಲಿ ಸಂಭ್ರಮದ ವಾತಾವರಣ ನೆಲೆಸಲಿದೆ. ಒಳ್ಳೆಯ ಊಟವನ್ನು ನೀವು ಆನಂದಿಸಲಿದ್ದೀರಿ. ನಿಮ್ಮ ಆತ್ಮವಿಶ್ವಾಸವು ಚೆನ್ನಾಗಿರಲಿದೆ. ಇದರೊಂದಿಗೆ ವ್ಯವಹಾರದಲ್ಲಿ ಹೊಸ ಅಪಾಯಕ್ಕೆ ಮೈಯೊಡ್ಡಲು ನೀವು ಯೋಚಿಸಬಹುದು.
ಸಿಂಹ: ಈ ವಾರ ನಿಮಗೆ ಸಾಕಷ್ಟು ಅನುಕೂಲಕರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿನ ಜಂಜಾಟಗಳಿಂದ ಹೊರಬರಲಿದ್ದಾರೆ. ಇದರೊಂದಿಗೆ ನೀವು ಪ್ರೇಮವನ್ನು ಆನಂದಿಸಲಿದ್ದೀರಿ. ಈ ವಾರದಲ್ಲಿ ಪ್ರೇಮದ ವಿಚಾರದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಲಿದೆ. ನೀವು ಈಗಾಗಲೇ ನಿಮ್ಮ ಪ್ರೇಮಿಗೆ ನಿಮ್ಮ ಪ್ರೇಮವನ್ನು ನಿವೇದಿಸಿಕೊಂಡಿದ್ದರೆ ಈ ಸಮಯವು ಸಕಾಲ. ಇಲ್ಲದಿದ್ದರೆ ಇದು ಸಾಕಷ್ಟು ವಿಳಂಬವಾದೀತು. ಮನೆಗೆ ಅತಿಥಿಗಳು ಬರಬಹುದು. ಹೀಗಾಗಿ ಏನಾದರೂ ಚಟುವಟಿಕೆಗಳಲ್ಲಿ ನೀವು ವ್ಯಸ್ತರಾಗಲಿದ್ದೀರಿ. ಸಂಭ್ರಮ ನಡೆಯುವ ಸಾಧ್ಯತೆಗಳಿವೆ. ಏನಾದರೂ ಮಂಗಳದಾಯಕ ಕೆಲಸ ನಡೆಯಬಹುದು. ನಿಮ್ಮ ಖರ್ಚುವೆಚ್ಚಗಳಲ್ಲಿ ವಿಪರೀತ ಹೆಚ್ಚಳ ಉಂಟಾಗಲಿದೆ. ಆದಾಯವು ಎಂದಿನಂತೆ ಇರುವ ಕಾರಣ ಈ ವಿಚಾರದಲ್ಲಿ ನೀವು ವಿಶೇಷ ಗಮನ ನೀಡಬೇಕು. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ನಿಮ್ಮ ಜೊತೆಗೆ ಕೆಲಸ ಮಾಡುವ ಜನರ ಬೆಂಬಲವನ್ನು ನೀವು ಗಳಿಸಲಿದ್ದೀರಿ. ಅವರ ಕಾರಣ ನೀವು ಕೆಲಸದಲ್ಲಿ ಉತ್ತಮ ಸ್ಥಾನದಲ್ಲಿರಲಿದ್ದೀರಿ.
ಕನ್ಯಾ: ಈ ವಾರದಲ್ಲಿ ನೀವು ಸಾಕಷ್ಟು ಆತ್ಮವಿಶ್ವಾಸವನ್ನು ತೋರಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಿದ್ದಾರೆ. ನೀವು ಮತ್ತು ನಿಮ್ಮ ಕುಟುಂಬದ ನಡುವಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದಕ್ಕಾಗಿ ನಿಮ್ಮ ಭಾವನೆಗಳನ್ನು ನಿಮ್ಮ ಜೀವನ ಸಂಗಾತಿಯ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಿ. ಪ್ರೇಮ ಜೀವನಕ್ಕೆ ಇದು ಉತ್ತಮ ಕಾಲವೆನಿಸಲಿದೆ. ನಿಮ್ಮ ಪ್ರೇಮಿಯು ಕೆಲವೊಂದು ಪ್ರಮುಖ ಸಲಹೆಗಳನ್ನು ಹೊತ್ತುಕೊಂಡು ನಿಮ್ಮೆದುರು ಹಾಜರಾಗಬಹುದು. ಈ ಸಲಹೆಗಳನ್ನು ನೀವು ಸಾಕಷ್ಟು ಇಷ್ಟಪಡುವಿರಿ. ನೀವು ಏಕಕಾಲದಲ್ಲಿ ಏನಾದರೂ ಹೊಸ ಕೆಲಸವನ್ನು ಕೈಗೆತ್ತಿಕೊಳ್ಳಲಿದ್ದೀರಿ. ಇದರಿಂದಾಗಿ ನಿಮಗೆ ಬೇಸರ ಉಂಟಾಗಬಹುದು. ಆದರೆ ಈ ಕುರಿತು ಚಿಂತಿಸಬೇಡಿ. ಕೆಲಸವನ್ನು ಪೂರ್ಣಗೊಳಿಸುವ ಶಕ್ತಿಯು ನಿಮ್ಮ ಬಳಿ ಇದೆ. ಹೀಗಾಗಿ ನಿಮ್ಮ ಕೆಲಸದ ಕುರಿತು ಯಾವುದೇ ಸಮಸ್ಯೆ ಎದುರಿಸದಂತೆ ಸರಿಯಾದ ಯೋಜನೆ ರೂಪಿಸಿ. ಆದಾಯದ ವಿಚಾರದಲ್ಲಿ ಈ ವಾರವು ನಿಮಗೆ ಚೆನ್ನಾಗಿರಲಿದೆ. ಕಾಮಗಾರಿಗಳಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ಇದರಿಂದಾಗಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ಉತ್ತಮ ಸ್ಥಾನಕ್ಕೆ ತಲುಪಲಿದ್ದೀರಿ.
ತುಲಾ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಪ್ರೇಮ ಜೀವನಕ್ಕೆ ಸಮಯವು ಅನುಕೂಲಕರವಾಗಿದೆ. ಸಂಬಂಧದಲ್ಲಿ ನಿಮ್ಮ ಪ್ರೇಮವು ಹೆಚ್ಚಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕನ್ನು ಮುಂದಕ್ಕೆ ಕೊಂಡೊಯ್ಯಲು ಹೊಸ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ. ವಾರದ ಆರಂಭದಲ್ಲಿ ಅನಗತ್ಯ ವೆಚ್ಚಗಳು ಉಂಟಾಗಬಹುದು. ಆದರೆ ಒಳ್ಳೆಯ ಆದಾಯದ ಕಾರಣ ನಿಮಗೆ ಯಾವುದೇ ಸಮಸ್ಯೆ ಉಂಟಾಗದು. ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ಸರ್ಕಾರಿ ವಲಯದಿಂದ ಪ್ರಯೋಜನಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಯಾವುದೇ ಸರ್ಕಾರಿ ಕೆಲಸಕ್ಕಾಗಿ ನೀವು ಸಿದ್ಧತೆ ನಡೆಸುತ್ತಿದ್ದರೆ ಯಶಸ್ಸನ್ನು ಪಡೆಯಬಹುದು. ಬಾಕಿ ಇರುವ ನಿಮ್ಮ ಕೆಲಸ ಪೂರ್ಣಗೊಳ್ಳಬಹುದು. ನಿಮ್ಮ ಸಾಮಾಜಿಕ ಸ್ಥಾನಮಾನವು ಗಟ್ಟಿಗೊಳ್ಳಲಿದೆ. ನಿಮ್ಮ ಅದೃಷ್ಟದ ಬಲದಿಂದಾಗಿ ಬಾಕಿ ಉಳಿದಿರುವ ಕೆಲಸವು ಪೂರ್ಣಗೊಳ್ಳಲಿದೆ. ನಿಮ್ಮ ವೈಯಕ್ತಿಕ ಬದುಕು ಆಗಿರಲಿ ಅಥವಾ ವೃತ್ತಿಪರ ಬದುಕು ಆಗಿರಲಿ, ನೀವು ಯಶಸ್ಸನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಕಠಿಣ ಶ್ರಮ ತೋರಬೇಕು. ನಿಮ್ಮ ಕೆಲಸದ ಮೇಲೆ ಗಮನ ನೀಡಿ.
ವೃಶ್ಚಿಕ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಸಾಕಷ್ಟು ಏರುಪೇರು ಎದುರಿಸಲಿದೆ. ಹೊರಗಿನ ಯಾರಾದರೂ ವ್ಯಕ್ತಿಯ ಕುರಿತು ನೀವು ಆಸಕ್ತಿ ತೋರಬಹುದು. ಹೀಗೆ ಆಗದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ವೈವಾಹಿಕ ಬದುಕಿನಲ್ಲಿ ಚಿಂತೆ ಹೆಚ್ಚಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಪ್ರೇಮಿಯ ಮಾತುಗಳನ್ನು ಕೇಳಿ ನೀವು ನಿರಾಳತೆ ಅನುಭವಿಸಬಹುದು. ಅಲ್ಲದೆ ನಿಮ್ಮ ಸಂಬಂಧದಲ್ಲಿ ಪ್ರಣಯ ಕಾಣಿಸಿಕೊಳ್ಳಲಿದೆ. ವಾರದ ಆರಂಭದಲ್ಲಿ ಹಣದ ಒಳಹರಿವು ಕಾಣಿಸಿಕೊಳ್ಳಲಿದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ನಿಮ್ಮ ಮನಸ್ಸು ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಲಿದೆ. ಧ್ಯಾನದಲ್ಲಿ ನೀವು ಹೆಚ್ಚು ಆಸಕ್ತಿ ತೋರಬಹುದು. ನೀವು ಸಮಾಜದಲ್ಲಿ ಉತ್ತಮ ಪ್ರಗತಿ ಸಾಧಿಸಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಈ ಕಾಲ ಒಳ್ಳೆಯದು. ಅನಗತ್ಯ ವಿಷಯಗಳಲ್ಲಿ ನೀವು ಮೂಗು ತೂರಿಸದೆ ಇದ್ದರೆ ಈ ಸಮಯವು ನಿಮ್ಮ ಪಾಲಿಗೆ ಅನುಕೂಲಕರ ಎನಿಸಲಿದೆ.
ಧನು: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಏನಾದರೂ ಅತೃಪ್ತಿ ಎದುರಿಸಲಿದ್ದಾರೆ. ಅತ್ತೆ ಮಾವಂದಿರ ವಿಪರೀತ ಹಸ್ತಕ್ಷೇಪವನ್ನು ನೀವು ಇಷ್ಟಪಡದೆ ಇರಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ಎಲ್ಲಾದರೂ ಹೊರಗೆ ಹೋಗಲು ನಿಮಗೆ ಅವಕಾಶ ದೊರೆಯಬಹುದು. ನೀವು ದೇವಸ್ಥಾನಕ್ಕೆ ಭೇಟಿ ನೀಡಬಹುದು. ಕೌಟುಂಬಿಕ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಮತ್ತು ಮನೆಯ ವೆಚ್ಚಗಳನ್ನು ಭರಿಸಲು ಇದು ಸಕಾಲ. ಅದೃಷ್ಟವು ನಿಮ್ಮ ಪರವಾಗಿದೆ. ಅದರೆ ನೀವು ಮಾಡಿದ ಕೆಲಸವು ವ್ಯರ್ಥಗೊಳ್ಳಬಹುದು. ಹೀಗಾಗಿ ಸಾಕಷ್ಟು ಎಚ್ಚರಿಕೆಯಿಂದ ಮುಂದೆ ಸಾಗಿರಿ. ವ್ಯವಹಾರದಲ್ಲಿ ಸಾಕಷ್ಟು ಏರುಪೇರು ಉಂಟಾಗಲಿದೆ. ನೀವು ಸರ್ಕಾರದ ವಿರುದ್ಧವಾಗಿ ವರ್ತಿಸಲಿದ್ದು ಇದು ನಿಮಗೆ ಹಾನಿಯನ್ನುಂಟು ಮಾಡಲಿದೆ. ಅಧಿಕಾರಿಗಳು ನಿಮಗೆ ದಂಡ ವಿಧಿಸಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಉದ್ಯೋಗದ ಸ್ಥಿತಿಯಲ್ಲಿ ಏರುಪೇರು ಉಂಟಾಗಬಹುದು. ಹೀಗಾಗಿ ನಿಮ್ಮ ಸ್ಥಾನವನ್ನು ನಿಭಾಯಿಸಲು ಯತ್ನಿಸಿ. ಏಕೆಂದರೆ ಈಗ ಹೊಸ ಕೆಲಸವನ್ನು ಪಡೆಯುವುದು ಕಷ್ಟದ ವಿಚಾರ.
ಮಕರ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯ ಮಾತಿನಲ್ಲಿ ಉಂಟಾಗುವ ಬದಲಾವಣೆಯ ಕಾರಣ ನಿಮಗೆ ಸಮಸ್ಯೆಯುಂಟಾಗಬಹುದು. ಅವರು ಏನಾದರೂ ಕಹಿ ಮಾತುಗಳನ್ನು ಆಡಬಹುದು. ಹೀಗಾಗಿ ವಾಗ್ವಾದದಲ್ಲಿ ಸಮಯ ಕಳೆಯುವ ಬದಲಿಗೆ ಶಾಂತಿಯಿಂದ ಕೆಲಸ ಮಾಡುವುದು ಒಳ್ಳೆಯದು. ಈ ವಾರವು ಪ್ರೇಮ ಸಂಬಂಧದಲ್ಲಿ ಉತ್ತಮ ಫಲ ನೀಡಲಿದೆ. ನಿಮ್ಮ ಸಂಗಾತಿಗೆ ನೀವು ಇನ್ನಷ್ಟು ಹತ್ತಿರವಾಗಲಿದ್ದೀರಿ. ಅದೃಷ್ಟದ ಬಲದಿಂದ ನೀವು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದೀರಿ. ಕೆಲಸದಲ್ಲಿ ನಿಮ್ಮ ದಕ್ಷತೆಯನ್ನು ತೋರಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮನ್ನು ದೀರ್ಘ ಕಾಲದಿಂದ ಕಾಡುತ್ತಿದ್ದ ಏಕತಾನತೆಯು ದೂರಗೊಳ್ಳಲಿದೆ. ಕೆಲಸದಲ್ಲಿ ನಿಮ್ಮ ಬಾಸ್ ಬೆಂಬಲವನ್ನು ನೀವು ಪಡೆಯಲಿದ್ದೀರಿ. ವ್ಯವಹಾರದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಒಳ್ಳೆಯ ಪಾಲುದಾರರ ಕಾರಣ ವ್ಯವಹಾರದಲ್ಲಿ ಸಾಕಷ್ಟು ಲಾಭ ಉಂಟಾಗಲಿದೆ.
ಕುಂಭ: ಈ ವಾರ ನಿಮಗೆ ಅನುಕೂಲಕರವಾಗಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯು ಅವರ ಪ್ರೀತಿಯ ಮಾತುಗಳು ಮತ್ತು ಶೈಲಿಯ ಮೂಲಕ ನಿಮ್ಮ ಮನಸ್ಸನ್ನು ಗೆಲ್ಲಲಿದ್ದಾರೆ. ಅವರ ಸಾಂಗತ್ಯವನ್ನು ನೀವು ಇನ್ನಷ್ಟು ಆನಂದಿಸಲಿದ್ದೀರಿ. ನಿಮ್ಮ ಸಂಬಂಧದಲ್ಲಿ ಸಾಕಷ್ಟು ಹೊಸತನವನ್ನು ಅನುಭವಿಸಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರ ಅನುಕೂಲಕರ. ನಿಮ್ಮ ಹೃದಯದಲ್ಲಿ ಬಚ್ಚಿಕೊಂಡಿರುವ ಎಲ್ಲಾ ವಿಷಯಗಳನ್ನು ನಿಮ್ಮ ಪ್ರೇಮಿಗಳಿಗೆ ಹೇಳುವುದು ಒಳ್ಳೆಯದು. ಏಕೆಂದರೆ ಅವರ ಮನಸ್ಸಿನಲ್ಲಿಯೂ ಇದೇ ರೀತಿಯ ಭಾವನೆಗಳಿವೆ. ವಾರದ ಆರಂಭದಲ್ಲಿ ನೀವು ದೀರ್ಘ ವ್ಯವಹಾರ ಪ್ರಯಾಣಕ್ಕೆ ಹೋಗಬಹುದು. ಇದು ಯಾರಾದರೂ ವ್ಯಕ್ತಿಯ ಜೊತೆಗೆ ಅನ್ಯೋನ್ಯತೆಯನ್ನು ಹೆಚ್ಚಿಸಬಹುದು. ಆದರೂ ನೀವು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ನಿಮ್ಮ ಎದುರಾಳಿಗಳನ್ನು ನೀವು ಹಿಂದಿಕ್ಕಿ ನಿಮ್ಮ ಕೆಲಸದಲ್ಲಿ ದೃಢತೆಯನ್ನು ಮೆರೆಯಲಿದ್ದೀರಿ. ನಿಮ್ಮ ಬಾಸ್ ಕೂಡಾ ನಿಮ್ಮಿಂದ ಪ್ರಭಾವಿತರಾಗಲಿದ್ದಾರೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು.
ಮೀನ: ಈ ವಾರ ನಿಮಗೆ ಉತ್ತಮ ಫಲಿತಾಂಶ ತಂದು ಕೊಡಲಿದೆ. ವಾರದ ಆರಂಭದಲ್ಲಿ ನಿಮ್ಮ ಸಂಬಂಧದಲ್ಲಿ ನೀವು ದೃಢವಾಗಿ ಮುಂದುವರಿಯಲಿದ್ದೀರಿ ಹಾಗೂ ನಿಮ್ಮ ಪ್ರೇಮಿಯನ್ನು ಸಂತೋಷಪಡಿಸಲು ಯತ್ನಿಸಲಿದ್ದೀರಿ. ಅವರಿಗೆ ನೀವು ಅದ್ಭುತ ಕೊಡುಗೆ ನೀಡಬಹುದು. ನೀವು ದೀರ್ಘ ಡ್ರೈವ್ಗೆ ಹೋಗಬಹುದು. ಇದು ನಿಮ್ಮ ಪ್ರೇಮ ಸಂಬಂಧದಲ್ಲಿ ಸುಧಾರಣೆ ತರಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನದಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯು ಕುಟುಂಬದ ಕಡೆಗಿನ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ಅರಿತುಕೊಳ್ಳಲಿದ್ದಾರೆ ಹಾಗೂ ಅವುಗಳನ್ನು ಈಡೇರಿಸಲು ಯತ್ನಿಸಲಿದ್ದಾರೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ಸರ್ಕಾರದಿಂದ ಲಾಭವನ್ನು ಪಡೆಯಲಿದ್ದೀರಿ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಈ ವಾರದಲ್ಲಿ ನೀವು ವ್ಯವಹಾರದಲ್ಲಿ ಮುಂದೆ ಸಾಗಲಿದ್ದೀರಿ. ಇದೇ ವೇಳೆ ನೀವು ಕೆಲವೊಂದು ಹೊಸ ಗೆಳೆಯರನ್ನು ಭೇಟಿಯಾಗಲಿದ್ದೀರಿ ಹಾಗೂ ಅವರೊಂದಿಗೆ ಸಂಪರ್ಕವನ್ನು ಸಾಧಿಸಲಿದ್ದೀರಿ. ಇದರಿಂದ ವ್ಯವಹಾರಕ್ಕೆ ಲಾಭ ಉಂಟಾಗಲಿದೆ ಹಾಗೂ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ನಿಮ್ಮ ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಧಾರ್ಮಿಕ ಕೆಲಸಗಳಿಗಾಗಿ ನೀವು ಒಂದಷ್ಟು ಹಣ ಖರ್ಚು ಮಾಡಬಹುದು.