ETV Bharat / bharat

ಡಿಸೆಂಬರ್ 3ರಿಂದ 9ರವರೆಗಿನ ನಿಮ್ಮ ವಾರದ ರಾಶಿ ಭವಿಷ್ಯ - Panchangam

Weekly Horoscope: ಡಿಸೆಂಬರ್ 3ರಿಂದ 9ರವರೆಗಿನ ವಾರದ ರಾಶಿ ಭವಿಷ್ಯ ಹೀಗಿದೆ.

Weekly Horoscope
ವಾರದ ರಾಶಿ ಭವಿಷ್ಯ
author img

By ETV Bharat Karnataka Team

Published : Dec 3, 2023, 6:55 AM IST

ಮೇಷ: ವಿವಾಹಿತರು ಪ್ರಣಯದ ಮೂಲಕ ತಮ್ಮ ಕೌಟುಂಬಿಕ ಬದುಕಿಗೆ ಮೆರುಗು ನೀಡಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡುವುದರಿಂದ ಸಂಬಂಧ ಹದಗೆಡಬಹುದು. ಮನೆಯ ಕೆಲಸಕ್ಕೆ ಹೆಚ್ಚು ಗಮನ ನೀಡಲಿದ್ದೀರಿ. ಆದರೆ ಇದರ ಹೊರತಾಗಿಯೂ ನಿಮ್ಮ ಕೆಲಸಕ್ಕೆ ಒತ್ತು ನೀಡಲಿದ್ದೀರಿ. ಉದ್ಯೋಗದಲ್ಲಿರುವವರ ಕೆಲಸದಲ್ಲಿ ಬಲ ಹೆಚ್ಚಲಿದೆ. ಯಾವುದೇ ತಪ್ಪು ಮಾಡಿ ಸಮಸ್ಯೆಯಲ್ಲಿ ಸಿಲುಕಿ ಬೀಳದಂತೆ ಎಚ್ಚರ ವಹಿಸಿ. ಗೆಳತಿಯಿಂದ ನಿಮಗೆ ಸಹಾಯ ದೊರೆಯಲಿದ್ದು ವ್ಯವಹಾರದಲ್ಲಿ ಲಾಭ ಸಿಗಲಿದೆ. ನಿಮ್ಮ ಮನಸ್ಸಿನಲ್ಲಿ ಧಾರ್ಮಿಕ ಯೋಚನೆಗಳು ಬರಲಿವೆ. ಜನರಿಗೆ ಕೆಲವೊಂದು ಉಪಯುಕ್ತ ಸಲಹೆಗಳನ್ನು ನೀಡಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಅಡಚಣೆ ಅನುಭವಿಸಲಿದ್ದಾರೆ. ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಯತ್ನಿಸಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಕೊನೆಯ ಭಾಗವು ಪ್ರಯಾಣಕ್ಕೆ ಅನುಕೂಲಕರ.

ವೃಷಭ: ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ನಿಮ್ಮ ಮನಸ್ಸಿನಲ್ಲಿ ಕೋಪ ಮತ್ತು ಕಿರಿಕಿರಿಯು ಹೆಚ್ಚಲಿದ್ದು ವೈವಾಹಿತ ಬದುಕಿನಲ್ಲಿ ಒತ್ತಡ ಕಾಣಿಸಿಕೊಳ್ಳಲಿದೆ. ಪ್ರೇಮ ಜೀವನವನ್ನು ಸಾಗಿಸುತ್ತಿರುವ ಜನರು ಸಣ್ಣಪುಟ್ಟ ಸಮಸ್ಯೆಗಳ ನಡುವೆಯೂ ಸಾಕಷ್ಟು ಧನಾತ್ಮಕವಾಗಿ ಮುಂದುವರಿಯಲಿದ್ದಾರೆ. ವ್ಯವಹಾರದಲ್ಲಿನ ಏರಿಳಿತವು ಕೊನೆಗೊಳ್ಳಲಿದ್ದು ಸರ್ಕಾರದಿಂದ ದೊಡ್ಡ ಮಟ್ಟದ ಪ್ರಯೋಜನವನ್ನು ಪಡೆಯಲಿದ್ದೀರಿ. ಸರ್ಕಾರಿ ಆಡಳಿತದ ನೆರವಿನಿಂದ ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಲಿದ್ದೀರಿ. ನೀವು ಸರ್ಕಾರದ ಟೆಂಡರ್‌ ಗಳಿಸುವ ಸಾಧ್ಯತೆ ಇದೆ. ಇದು ನಿಮ್ಮ ಆದಾಯ ಮತ್ತು ವರ್ಚಸ್ಸನ್ನು ವೃದ್ಧಿಸಲಿದೆ. ನಿಮ್ಮ ಮನಸ್ಸಿನಲ್ಲಿ ಸದಾಚಾರದ ಭಾವನೆ ಇರಲಿದೆ. ಜನರಿಗೆ ಒಳಿತನ್ನು ಮಾಡಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ದುರ್ಬಲ ಎನಿಸಲಿದೆ. ನೀವು ಸಾಕಷ್ಟು ಎಚ್ಚರಿಕೆಯಿಂದ ಕೆಲಸ ಮಾಡಿ ಮುಂದಕ್ಕೆ ಹೆಜ್ಜೆ ಇಡಬೇಕು. ಸದ್ಯಕ್ಕೆ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಮಿಥುನ: ಕೌಟುಂಬಿಕ ಸಮಸ್ಯೆಗಳು ಕಡಿಮೆಯಾಗಲಿವೆ. ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಅನುಕೂಲಕರ. ನಿಮ್ಮ ಪ್ರೇಮಿಯನ್ನು ನೀವು ಯಾವುದಾದರೂ ಒಳ್ಳೆಯ ಮತ್ತು ಸುಂದರ ಸ್ಥಳಕ್ಕೆ ಕರೆದುಕೊಂಡು ಹೋಗಬಹುದು. ಉದ್ಯೋಗದಲ್ಲಿರುವವರು ಅತ್ಯಂತ ಕಠಿಣಕರ ಸಮಸ್ಯೆಯನ್ನು ಸಹ ಸುಲಭವಾಗಿ ಬಗೆಹರಿಸಲಿದ್ದಾರೆ. ಆದರೆ, ಈ ಸಾಮರ್ಥ್ಯವನ್ನು ನೀವು ಅನುಭವ ಮತ್ತು ದಕ್ಷತೆಯ ಕಾರಣ ಗಳಿಸಿಕೊಳ್ಳಲಿದ್ದೀರಿ. ಈ ಕುರಿತು ನಿಮ್ಮ ಹಿರಿಯರು ಸಂತಸ ವ್ಯಕ್ತಪಡಿಸಲಿದ್ದಾರೆ. ಸಮಯವು ನಿಮಗೆ ಸಂಪೂರ್ಣವಾಗಿ ಅನುಕೂಲಕರವಾಗಿದೆ. ಖಂಡಿತವಾಗಿಯೂ ಒಂದಷ್ಟು ಖರ್ಚುವೆಚ್ಚ ಉಂಟಾಗಬಹುದು. ಆದರೆ ಈ ವೆಚ್ಚವು ನಿಮ್ಮ ಸ್ಥಾನವನ್ನು ಗಟ್ಟಿಗೊಳಿಸಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ಅವರು ಪಡೆಯಲಿದ್ದಾರೆ. ನೀವು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಅರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಆದರೆ ಲಘುವಾಗಿ ಜ್ವರ ಕಾಣಿಸಿಕೊಳ್ಳಬಹುದು. ವಾರದ ಕೊನೆಯ ಎರಡು ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರಯಾಣಿಸಲು ಉತ್ತಮ.

ಕರ್ಕಾಟಕ: ವಿವಾಹಿತ ವ್ಯಕ್ತಿಗಳೂ ತಮ್ಮ ಕೌಟುಂಬಿಕ ಬದುಕಿನ ಕುರಿತು ಆಶಾಭಾವನೆಯನ್ನು ಹೊಂದಿರಲಿದ್ದಾರೆ ಹಾಗೂ ತಮ್ಮ ಮನದಾಳದ ಎಲ್ಲಾ ಮಾತುಗಳನ್ನು ಜೀವನ ಸಂಗಾತಿಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂಬಂಧದಲ್ಲಿ ಘರ್ಷಣೆ ಹೆಚ್ಚುವ ಕಾರಣ ಪರಸ್ಪರ ವಾಗ್ವಾದ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ನೀವು ನಿಮ್ಮ ಕೆಲಸಕ್ಕೆ ಸಂಪೂರ್ಣ ಗಮನವನ್ನು ನೀಡಲಿದ್ದು, ಇದು ಉತ್ತಮ ಫಲಿತಾಂಶವನ್ನು ತರಲಿದೆ. ವಿದೇಶದಲ್ಲಿಯೂ ನಿಮಗೆ ಉತ್ತಮ ಸ್ಥಾನ ಲಭಿಸಲಿದೆ. ನಿರ್ದಿಷ್ಟ ಸಲಹೆಗಾಗಿ ಜನರು ನಿಮ್ಮ ಬಳಿ ಬರಲಿದ್ದು, ನಿಮ್ಮ ಸಲಹೆಗೆ ಗೌರವ ದೊರೆಯಲಿದೆ. ಆದಾಯದಲ್ಲಿ ಹೆಚ್ಚಳ ಉಂಟಾಗುವ ಕಾರಣ ಬಾಕಿ ಉಳಿದಿರುವ ಕೆಲಸವನ್ನು ನೀವು ಪೂರ್ಣಗೊಳಿಸಲಿದ್ದೀರಿ. ನಿಮ್ಮ ಮನೆಯಲ್ಲಿ ಸಂತಸ ಮತ್ತು ಶಾಂತಿ ನೆಲೆಸಲಿದ್ದು, ಹೊಸ ವಸ್ತುವನ್ನು ಮನೆಗೆ ತರುವುದರಿಂದ ಮನೆಯಲ್ಲಿ ಸಂಭ್ರಮ ಕಾಣಿಸಿಕೊಳ್ಳಲಿದೆ. ಆಡಳಿತ ನಿರ್ವಹಣೆ ಮತ್ತು ತಾಂತ್ರಿಕ ವಿಷಯಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ. ಉಳಿದ ವಿದ್ಯಾರ್ಥಿಗಳು ಕಠಿಣ ಶ್ರಮ ಪಡಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಉಂಟಾಗಲಿದೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಸಿಂಹ: ನಿಮ್ಮ ಸಂವಹನವನ್ನು ಸುಧಾರಿಸುವ ಮೂಲಕ ನಿಮ್ಮ ಪ್ರೇಮ ಸಂಗಾತಿಯ ಹೃದಯವನ್ನು ನೀವು ಗೆಲ್ಲಲಿದ್ದೀರಿ. ವಿವಾಹಿತರಿಗೆ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಪ್ರಯತ್ನದ ಮೂಲಕ ನಿಮ್ಮ ಜೀವನ ಸಂಗಾತಿಯ ಹೃದಯವನ್ನು ಗೆಲ್ಲಲಿದ್ದೀರಿ ಹಾಗೂ ನಿಮ್ಮ ವೈವಾಹಿಕ ಜೀವನವು ಸಂತಸದಿಂದ ಕೂಡಿರಲಿದೆ. ಒಡಹುಟ್ಟಿದವರ ಜೊತೆಗಿನ ಅನ್ಯೋನ್ಯತೆಯು ಚೆನ್ನಾಗಿರಲಿದೆ. ನೀವು ಎಲ್ಲಾದರೂ ಒಟ್ಟಿಗೆ ಹೋಗಬಹುದು ಅಥವಾ ಚಲನಚಿತ್ರವನ್ನು ವೀಕ್ಷಿಸಬಹುದು. ರಿಯಲ್‌ ಎಸ್ಟೇಟ್​​ಗೆ ಸಂಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಎಚ್ಚರಿಕೆಯಿಂದ ಇರಬೇಕು. ತೆರಿಗೆಗೆ ಸಂಬಂಧಿಸಿದ ಯಾವುದೇ ನೊಟೀಸ್‌ ಬಂದಲ್ಲಿ ತೆರಿಗೆಯನ್ನು ತಕ್ಷಣವೇ ಪಾವತಿಸಿ. ಉದ್ಯೋಗದಲ್ಲಿರುವವರಿಗೆ ಈ ವಾರವು ಅನುಕೂಲಕರ. ನಿಮ್ಮ ಜೊತೆ ಕೆಲಸ ಮಾಡುವವರ ಸಹಕಾರದಿಂದ ಏನಾದರೂ ಹೊಸತನ್ನು ಮಾಡಲು ನಿಮಗೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಸದ್ಯಕ್ಕೆ ನಿಮಗೆ ಯಾವುದೇ ತೊಂದರೆಯು ಕಾಡದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಕನ್ಯಾ: ನಿಮ್ಮ ಆದಾಯದಲ್ಲಿ ಶೀಘ್ರ ಹೆಚ್ಚಳ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದ್ದು ನಿಮ್ಮ ಅರ್ಧ ಚಿಂತೆಯನ್ನು ಇದು ತಗ್ಗಿಸಲಿದೆ. ಸದ್ಯಕ್ಕೆ ನಿಮ್ಮ ಮನಸ್ಸಿನಲ್ಲಿ ಕೆಲವು ಧಾರ್ಮಿಕ ಭಾವನೆಗಳು ಬರಬಹುದು. ಅಲ್ಲದೆ ಧಾರ್ಮಿಕ ವಿಚಾರದಲ್ಲಿ ನೀವು ಸಾಕಷ್ಟು ಸಕ್ರಿಯರಾಗಲಿದ್ದೀರಿ. ಕುಟುಂಬದ ಸ್ಥಿತಿಯು ಅನುಕೂಲಕರವಾಗಿದೆ. ಮನೆಯಲ್ಲಿ ಸಂತಸ ಇರಲಿದೆ. ನೀವು ವಿವಾಹಿತರಾಗಿದ್ದರೆ ಅಥವಾ ಯಾರನ್ನಾದರೂ ಪ್ರೀತಿಸುತ್ತಿದ್ದರೆ ಈ ವಾರವು ಅನುಕೂಲಕರವಾಗಿದೆ. ವ್ಯವಹಾರದಲ್ಲಿ ತೊಡಗಿಕೊಂಡಿರುವವರು ಸರ್ಕಾರಿ ವಲಯದಿಂದ ದೊಡ್ಡ ಮಟ್ಟದ ಲಾಭ ಗಳಿಸಬಹುದು. ನಿಮ್ಮ ಅತ್ಯುತ್ತಮ ಪ್ರಯತ್ನದ ಮೂಲಕ ನಿಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯಲಿದ್ದೀರಿ. ನೀವು ಮಾಡಿರುವ ಕಠಿಣ ಶ್ರಮಕ್ಕೆ ಸಂಪೂರ್ಣ ಲಾಭ ದೊರೆಯಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಸದ್ಯಕ್ಕೆ ತಮ್ಮ ಅಧ್ಯಯನಕ್ಕೆ ಗಮನ ನೀಡಲಿದ್ದಾರೆ. ಹೀಗಾಗಿ ಅವರು ಸರಿಯಾದ ದಿಕ್ಕಿನಲ್ಲಿ ಮುಂದೆ ಸಾಗಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ತುಲಾ: ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕನ್ನು ಕಾಡುತ್ತಿದ್ದ ಸಮಸ್ಯೆಗಳನ್ನು ಸಂಪೂರ್ಣವಾಗಿ ಮರೆತು ಬಿಡಲಿದ್ದಾರೆ. ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವಿನ ಒತ್ತಡವು ತಗ್ಗಲಿದೆ. ಪರಸ್ಪರ ಅನ್ಯೋನ್ಯತೆಯು ಹೆಚ್ಚಲಿದ್ದು ಇದು ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸ ತರಲಿದೆ. ನಿಮ್ಮ ನಡುವಿನ ಅಂತರವು ಕಡಿಮೆಯಾಗಲಿದೆ. ಈ ಹಂತದಲ್ಲಿ ನೀವು ಯಾರೊಂದಿಗೂ ನೇರವಾಗಿ ಮಾತನಾಡಬಾರದು. ಈ ವಾರದಲ್ಲಿ ನಿಮ್ಮ ಕೆಲಸದ ದಕ್ಷತೆಯಲ್ಲಿ ವೃದ್ಧಿ ಉಂಟಾಗಲಿದೆ. ನೀವು ಶೃದ್ಧೆಯಿಂದ ಕೆಲಸ ಮಾಡಲಿದ್ದು ನಿಮಗೆ ಹೊಸ ಕಾಮಗಾರಿಯ ಕೆಲಸ ಲಭಿಸಲಿದೆ. ಇದರಿಂದಾಗಿ ನಿಮಗೆ ಸಂತಸ ಲಭಿಸಲಿದೆ. ನಿಮ್ಮ ಅನುಭವದ ಆಧಾರ ಮತ್ತು ಪಾಲುದಾರರ ಸಹಾಯದಿಂದ ಉತ್ತಮ ಸಾಧನೆ ಮಾಡಲಿದ್ದೀರಿ. ಹೀಗಾಗಿ ನಿಮ್ಮ ವ್ಯವಹಾರವು ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನವನ್ನು ಗಳಿಸಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ವೃಶ್ಚಿಕ: ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಒತ್ತಡವನ್ನು ಅನುಭವಿಸಲಿದ್ದಾರೆ. ಆದರೆ ಸಂಬಂಧವನ್ನು ನಿಭಾಯಿಸಲು ಎರಡೂ ಕಡೆಗಳಿಂದ ಪ್ರಯತ್ನ ನಡೆಯಲಿದೆ. ನೀವು ಮುಂದಕ್ಕೆ ಹೆಜ್ಜೆ ಇಟ್ಟು ನಿಮ್ಮ ಸಂಗಾತಿಯ ಜೊತೆಗೆ ಮಾತನಾಡಬೇಕು. ಆಗ ಮಾತ್ರವೇ ವೈವಾಹಿಕ ಜೀವನವು ಮುಂದೆ ಸಾಗಲಿದೆ. ಮಾನಸಿಕ ಒತ್ತಡವು ದೂರವಾಗಲಿದೆ ಹಾಗೂ ನೀವು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದೀರಿ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ಈ ವೆಚ್ಚವು ಐಷಾರಾಮಿ ವಸ್ತುಗಳಿಗಾಗಿ ಉಂಟಾಗಲಿದೆ. ಇದು ಮನೆಯಲ್ಲಿ ಸಂತಸ ಉಂಟು ಮಾಡಲಿದೆ. ಸಾಕಷ್ಟು ಹೂಡಿಕೆಯನ್ನು ಮಾಡಬೇಕಾದೀತು. ಹೀಗಾಗಿ ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ಮುಂದಕ್ಕೆ ಹೆಜ್ಜೆಯಿಡಲು ಇದು ಸಕಾಲ. ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದ್ದು ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಇದು ನಿಮಗೆ ಸಹಾಯ ಮಾಡಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಏಕಾಗ್ರತೆಯ ವಿಷಯದಲ್ಲಿ ಅವರಿಗೆ ಯಾವುದೇ ಸಮಸ್ಯೆ ಉಂಟಾಗದು. ಬದಲಾಗಿ ಉತ್ತಮವಾಗಿ ಗಮನ ಕೇಂದ್ರೀಕರಿಸಲು ಅವರಿಗೆ ಸಾಧ್ಯವಾಗಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಪ್ರಯಾಣಿಸಲು ಉತ್ತಮ.

ಧನು: ವಿವಾಹಿತ ಜನರು ತಮ್ಮ ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ಸಾಕಷ್ಟು ಬೆಂಬಲಿಸಲಿದ್ದಾರೆ. ಬದುಕಿನಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದು ನಿಮ್ಮ ಸಂಗಾತಿಯ ಸಾಮಿಪ್ಯ ಸಾಧಿಸುವಲ್ಲಿಯೂ ಮುನ್ನಡೆ ಸಿಗಲಿದೆ. ಇದರಿಂದಾಗಿ ನಿಮ್ಮ ಸಂಬಂಧಕ್ಕೆ ಇನ್ನಷ್ಟು ಮೆರುಗು ದೊರೆಯಲಿದೆ. ಕೆಲಸದ ಸ್ಥಿತಿಯಲ್ಲಿ ಕಾಲ ಕ್ರಮೇಣವಾಗಿ ಪ್ರಗತಿ ಉಂಟಾಗಲಿದೆ. ಆದರೂ ನಿಮ್ಮ ಕೆಲಸ ಅಥವಾ ಕೆಲಸದ ಸ್ಥಳದಲ್ಲಿ ಬದಲಾವಣೆಯುಂಟಾಗಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಒಂದಷ್ಟು ನಿರಾಳತೆಯನ್ನು ಅನುಭವಿಸಬಹುದು. ನಿಮ್ಮ ಜಾಣ್ಮೆ ಮತ್ತು ಬುದ್ಧಿವಂತಿಕೆಯ ಮೂಲಕ ವ್ಯವಹಾರವನ್ನು ಮುನ್ನಡೆಸುವಲ್ಲಿ ಯಶಸ್ಚಿಯಾಗಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಲಿದ್ದಾರೆ. ಅವರು ಇದರಿಂದ ಲಾಭ ಪಡೆಯಲಿದ್ದಾರೆ. ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಮಾನಸಿಕ ಒತ್ತಡದ ಕಾರಣ ಸಮಸ್ಯೆಗಳು ಉಂಟಾಗಬಹುದು. ವಾರದ ಮಧ್ಯದ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಮಕರ: ನಿಮ್ಮ ಜೀವನ ಸಂಗಾತಿಯ ಜೊತೆಗೆ ಪರಸ್ಪರ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲು ನೀವು ಸಂಪೂರ್ಣ ಗಮನ ನೀಡಲಿದ್ದೀರಿ. ಇದರಿಂದಾಗಿ ಮನೆಯಲ್ಲಿ ಧನಾತ್ಮಕ ವಾತಾವರಣ ಮೂಡಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಅನುಕೂಲಕರ. ನೀವು ಪ್ರೀತಿಸುವ ವ್ಯಕ್ತಿಯು ನಿಮ್ಮ ಕಚೇರಿಯಲ್ಲಿಯೇ ಕೆಲಸವನ್ನು ಪಡೆಯುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮಿಬ್ಬರ ನಡುವಿನ ಬಂಧವು ಗಟ್ಟಿಗೊಳ್ಳಲಿದೆ. ನಿಮ್ಮ ಸ್ಥಿತಿಯು ಚೆನ್ನಾಗಿರಲಿದೆ. ಆದರೆ ಅನಗತ್ಯವಾಗಿ ಮಾತನಾಡಬೇಡಿ. ನಿಮ್ಮ ಸುತ್ತಲಿನ ಜನರ ಜೊತೆಗೆ ಚೆನ್ನಾಗಿ ವರ್ತಿಸಿ. ನಿಮಗೆ ಉತ್ತಮ ಆರ್ಥಿಕ ಲಾಭ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ ನೀವು ಸರ್ಕಾರಿ ವಲಯದಿಂದ ಲಾಭ ಗಳಿಸಲಿದ್ದೀರಿ. ವ್ಯವಹಾರಕ್ಕೆ ಇದು ಸಕಾಲ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಕುಂಭ: ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸ್ವಲ್ಪ ಒತ್ತಡ ಎದುರಿಸಲಿದ್ದಾರೆ. ಕೆಲಸದ ಕಾರಣ ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಂವಹನದಲ್ಲಿ ಕೊರತೆ ಉಂಟಾಗಲಿದೆ. ಪ್ರೇಮ ಜೀವನಕ್ಕೆ ಸಮಯವು ಚೆನ್ನಾಗಿದೆ. ನಿಮ್ಮ ಪ್ರೇಮಿಯೊಂದಿಗೆ ಮಾತನಾಡುತ್ತಲೇ ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ. ಹೀಗಾಗಿ ನಿಮ್ಮ ನಡುವಿನ ಅಂತರ ಕಡಿಮೆಯಾಗಲಿದೆ. ಆದಾಯದಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಲಿದ್ದು, ನಿಮ್ಮ ಚಿಂತೆ ದೂರಗೊಳ್ಳಲಿದೆ. ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ ಹಾಗೂ ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿ. ಈ ಸಮಯದಲ್ಲಿ ನಿಮ್ಮ ಅದೃಷ್ಟದ ಬಲದಿಂದ ಹೆಚ್ಚು ಪರಿಶ್ರಮವಿಲ್ಲದೆಯೇ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಸಮಯವು ಎಂದಿನಂತೆ ಮುಂದುವರಿಯಲಿದ್ದು, ವಾಸ್ತುಶಿಲ್ಪ ಮತ್ತು ಲಲಿತ ಕಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಕೊನೆಯ ದಿನವು ಪ್ರಯಾಣಕ್ಕೆ ಅತ್ಯುತ್ತಮ.

ಮೀನ: ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಎಲ್ಲಾದರೂ ಭೇಟಿ ನೀಡಬಹುದು. ಇದರಿಂದ ಅವರ ಬದುಕಿನಲ್ಲಿ ಸಂತಸ ಕಾಣಿಸಿಕೊಳ್ಳಲಿದ್ದು, ಅವರ ಹೃದಯವನ್ನು ಗೆಲ್ಲಲು ನಿಮಗೆ ಸಾಧ್ಯವಾಗಲಿದೆ. ವಾರದ ಆರಂಭದಲ್ಲಿ ನಿಮ್ಮಲ್ಲಿ ವಿಶೇಷ ಆತ್ಮವಿಶ್ವಾಸ ಕಾಣಿಸಿಕೊಳ್ಳಲಿದೆ. ಇದರಿಂದಾಗಿ ನಿಮ್ಮ ವ್ಯವಹಾರದಲ್ಲಿ ಏನಾದರೂ ಹೊಸತನ್ನು ಮಾಡುವುದನ್ನು ನೀವು ಆನಂದಿಸಲಿದ್ದೀರಿ. ವ್ಯವಹಾರಕ್ಕೆ ವೇಗ ದೊರೆಯಲಿದ್ದು ನಿಮ್ಮ ಆದಾಯದಲ್ಲಿಯೂ ಹೆಚ್ಚಳ ಉಂಟಾಗಲಿದೆ. ಯಾರಾದರೂ ಹೊಸ ವ್ಯಕ್ತಿಯೊಂದಿಗೆ ಸಹಯೋಗ ಸಾಧಿಸುವ ಮೂಲಕ ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಲು ನಿಮಗೆ ಸಾಧ್ಯವಾಗಲಿದೆ. ಉದ್ಯೋಗಿಗಳು ತಮ್ಮ ಕೆಲಸಕ್ಕೆ ಗಮನ ನೀಡಬೇಕು. ಇಲ್ಲದಿದ್ದರೆ ಅವರು ಸಮಸ್ಯೆ ಎದುರಿಸಬೇಕಾದೀತು. ನಿಮ್ಮ ವರ್ತನೆಯನ್ನು ಸುಧಾರಿಸಲು ಯತ್ನಿಸಿ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ ತಮ್ಮ ಅಧ್ಯಯನದಲ್ಲಿ ಏನಾದರೂ ಹೊಸತನ್ನು ಮಾಡಲು ಅವರಿಗೆ ಅವಕಾಶ ದೊರೆಯಲಿದೆ. ಈ ಮೂಲಕ ತಮ್ಮ ಅಧ್ಯಯನವನ್ನು ಕ್ರಿಯಾಶೀಲವಾಗಿ ಮುಂದುವರಿಸಲು ಅವರಿಗೆ ಸಾಧ್ಯವಾಗಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಈ ವಾರವು ನಿಮಗೆ ಒಳ್ಳೆಯದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಇದನ್ನೂ ಓದಿ: ಭಾನುವಾರದ ಪಂಚಾಂಗ, ರಾಶಿ ಭವಿಷ್ಯ : ಇಂದು ಮೀನ ರಾಶಿಯವರಿಗೆ ಶುಭ ದಿನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.