ಮೇಷ: ಇದು ನಿಮ್ಮ ಪಾಲಿಗೆ ಸಾಧಾರಣ ವಾರ ಎನಿಸಲಿದೆ. ನೀವು ಪ್ರಯಾಣದಿಂದ ಲಾಭ ಗಳಿಸಲಿದ್ದು ಕೆಲವು ಹೊಸ ವ್ಯಕ್ತಿಗಳನ್ನೂ ಭೇಟಿಯಾಗಲಿದ್ದೀರಿ. ನಂತರ ಇವರಲ್ಲಿ ಕೆಲವರು ನಿಮ್ಮ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ವಾರದ ಮಧ್ಯ ಭಾಗದಲ್ಲಿ, ನಿಮ್ಮ ಖರ್ಚುವೆಚ್ಚಗಳು ಹೆಚ್ಚಲಿದ್ದು ಇದು ನಿಮ್ಮ ಹಣಕಾಸು ಸ್ಥಿತಿಗೆ ಧಕ್ಕೆ ಮಾಡಬಹುದು. ನಿಮ್ಮ ಆದಾಯವು ಚೆನ್ನಾಗಿರಲಿದೆ. ಆದರೆ ಅಧಿಕ ವೆಚ್ಚದ ಕಾರಣ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಪ್ರೇಮ ಬದುಕಿನಲ್ಲಿ, ನೀವು ಮೂರನೇ ವ್ಯಕ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಿದ್ದು, ಇದು ನಿಮ್ಮ ಪ್ರೇಮ ಬದುಕಿಗೆ ಅಡಚಣೆ ಉಂಟು ಮಾಡಲಿದೆ. ವಿವಾಹಿತ ಜೋಡಿಗಳು ತಮ್ಮ ಸಂಗಾತಿಯಿಂದ ಪ್ರೀತಿ ಮತ್ತು ವಾತ್ಸಲ್ಯವನ್ನು ಗಳಿಸಲಿದ್ದಾರೆ. ನೀವು ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ. ಆದರೂ, ಚರ್ಮದ ಅಲರ್ಜಿ ಅಥವಾ ಜ್ವರವು ನಿಮ್ಮನ್ನು ಕಾಡಬಹುದು.
ವೃಷಭ: ಈ ವಾರ ನಿಮಗೆ ನಿಜಕ್ಕೂ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೆಲವು ಯೋಜನೆಗಳು ಪ್ರಗತಿ ಕಾಣಲಿವೆ. ನಿಮ್ಮ ಕುಟುಂಬದ ಸದಸ್ಯರ ಬೆಂಬಲವು ನಿಮ್ಮ ವೃತ್ತಿಪರ ಗುರಿಗಳನ್ನು ಸಾಧಿಸಲು ನೆರವಿಗೆ ಬರಲಿದೆ. ಈ ರೀತಿ, ನಿಮ್ಮ ವ್ಯವಹಾರವೂ ವೃದ್ಧಿಸಲಿದೆ. ನೀವು ಉದ್ಯೋಗದಲ್ಲಿದ್ದರೆ, ನಿಮಗೆ ಕೆಲವೊಂದು ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಇದು ನಿಮ್ಮ ಸಾಮರ್ಥ್ಯವನ್ನು ವೃದ್ಧಿಸಲು ನಿಮಗೆ ಸಹಕರಿಸಲಿದೆ. ನಿಮ್ಮ ಪ್ರೇಮ ಜೀವನವು ಸಾಂಗವಾಗಿ ಮುಂದುವರಿಯಲಿದೆ. ಇದೇವೇಳೆ, ನಿಮ್ಮ ಪ್ರಣಯ ಸಂಗಾತಿಯ ಹೆಗಲಿಗೆ ವೈಯಕ್ತಿಕ ಜವಾಬ್ದಾರಿ ಬರಬಹುದು. ಹೀಗಾಗಿ, ಅವರಿಗೆ ಅವರ ಜವಾಬ್ದಾರಿಯನ್ನು ಪೂರೈಸಲು ಸಮಯ ನೀಡಿ. ವಿವಾಹಿತ ಜೋಡಿಗಳಿಗೆ ಇದು ಸಕಾಲ. ಆದರೆ ಕುಟುಂಬದಲ್ಲಿ ಏನಾದರೂ ಭಿನ್ನಾಭಿಪ್ರಾಯ ಮೂಡಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ನಿಮ್ಮ ಮಗ ಅಥವಾ ಮಗಳ ಕುರಿತು ಚಿಂತೆ ಕಾಡಲಿದೆ. ಈ ವಾರದಲ್ಲಿ, ಯಾವುದೇ ಪ್ರವಾಸಕ್ಕೆ ಹೋಗುವ ಮೊದಲು ಸಾಕಷ್ಟು ಪೂರ್ವತಯಾರಿಯನ್ನು ಮಾಡಿ. ಏಕೆಂದರೆ ಪ್ರಯಾಣದ ವೇಳೆ ನೀವು ತೊಂದರೆಗೆ ಸಿಲುಕಬಹುದು.
ಮಿಥುನ: ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ ಹಾಗೂ ಹೊಸ ವಿಚಾರಗಳೊಂದಿಗೆ ನೀವು ಮುಂದುವರಿಯಬಹುದು. ಈ ವಾರ, ನಿಮ್ಮ ಮಿತ್ರರ ಜೊತೆಗೂಡಿ ಸಮಯ ಕಳೆಯಲು ನಿಮಗೆ ಅವಕಾಶ ಸಿಗಬಹುದು. ಅಲ್ಲದೆ ನೀವು ಪ್ರಯಾಣದಲ್ಲಿ ಸಾಕಷ್ಟು ಸಮಯ ಕಳೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರಿಗಾಗಿ ನೀವು ವಸ್ತುಗಳನ್ನು ಖರೀದಿಸಲಿದ್ದು, ಇದು ನಿಮಗೆ ಸಂತಸ ನೀಡಲಿದೆ. ನಿಮ್ಮ ತಾಯಿಗಾಗಿ ನೀವು ಕೆಲವೊಂದು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲಿದ್ದೀರಿ. ಪ್ರಣಯ ಪಕ್ಷಿಗಳಿಗೆ ಇದು ಉತ್ತಮ ಕಾಲವೆನಿಸಲಿದೆ. ನೀವು ನಿಮ್ಮ ಪ್ರಣಯ ಬದುಕಿನಲ್ಲಿ ಮುಂದೆ ಸಾಗಲಿದ್ದೀರಿ. ಈ ವಾರದಲ್ಲಿ ವಿವಾಹಿತ ಜೋಡಿಗಳೂ ಉತ್ತಮ ಸಮಯವನ್ನು ಆನಂದಿಸಲಿದ್ದಾರೆ. ನಿಮ್ಮ ಮನೆ ಮತ್ತು ನಿಮ್ಮ ಅತ್ತೆ-ಮಾವಂದಿರ ಮನೆಯ ನಡುವೆ ಉತ್ತಮ ಸಮತೋಲನ ಇರಲಿದೆ. ಹೀಗಾಗಿ ಎರಡೂ ಕುಟುಂಬಗಳು ಸಂತಸದ ಮತ್ತು ಸಂತೃಪ್ತಿಯ ಜೀವನವನ್ನು ನಡೆಸಲಿವೆ. ವ್ಯಾಪಾರೋದ್ಯಮಿಗಳು ಹೊಸ ಅಥವಾ ಚಾಲ್ತಿಯಲ್ಲಿರುವ ಸರ್ಕಾರಿ ನೀತಿಯಿಂದ ಸ್ವಲ್ಪ ಲಾಭ ಗಳಿಸಲಿದ್ದಾರೆ. ಉದ್ಯೋಗಿಗಳಿಗೆ ಇದು ಉತ್ತಮ ಕಾಲವೆನಿಸಲಿದೆ. ನೀವು ಕಚೇರಿಯಲ್ಲಿ ಕೆಲಸ ಮಾಡುವುದನ್ನು ಆನಂದಿಸಲಿದ್ದೀರಿ. ಕಚೇರಿಯ ವಾತಾವರಣವನ್ನು ನೀವು ಇಷ್ಟಪಡಲಿದ್ದೀರಿ. ವಿದ್ಯಾರ್ಥಿಗಳು ಈ ವಾರ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.
ಕರ್ಕಾಟಕ: ವಾರದ ಆರಂಭದಲ್ಲಿ, ನಿಮ್ಮ ವೈಯಕ್ತಿಕ ಬದುಕಿನಲ್ಲಿ ನೀವು ಕೆಲವೊಂದು ಅಡೆತಡೆ, ಅಡಚಣೆಗಳನ್ನು ಎದುರಿಸಬಹುದು ನಿಮ್ಮ ಕೌಟುಂಬಿಕ ಬದುಕಿನಲ್ಲಿ ನೀವು ಯಾವುದೇ ತೊಂದರೆ ಅತೃಪ್ತಿಯನ್ನು ಎದುರಿಸುತ್ತಿದ್ದರೆ, ಈ ವಾರದಲ್ಲಿ ಈ ಸಮಸ್ಯೆಗಳು ಇನ್ನಷ್ಟು ಹೆಚ್ಚಬಹುದು. ಸಂಬಂಧಕ್ಕೆ ಸಂಬಂಧಿಸಿದ ಈ ಸಮಸ್ಯೆಗಳು ನಿಮ್ಮ ತಾಳ್ಮೆಗೆಡಿಸಬಹುದು ಮತ್ತು ನಿಮ್ಮನ್ನು ಅಕ್ರಮಣಕಾರಿಯಾಗಿ ರೂಪಿಸಬಹುದು. ಹೀಗಾಗಿ, ನಿಮಗೆ ಕಹಿ ಅನುಭವವಾಗಬಹುದು. ವಾರದ ಮಧ್ಯ ಭಾಗದಲ್ಲಿ, ಕಣ್ಣಿಗೆ ಸಂಬಂಧಿಸಿದಂತೆ ನೀವು ಗಂಭೀರ ಸಮಸ್ಯೆಯನ್ನು ಎದುರಿಸಬಹುದು. ನಿಮ್ಮ ಆಹಾರ ಪದ್ಧತಿಯನ್ನು ಸುಧಾರಿಸಲು ಪ್ರಯತ್ನಿಸಿ ಹಾಗೂ ಅತಿಯಾಗಿ ಆಹಾರ ಸೇವಿಸಬೇಡಿ. ನಿಮ್ಮ ಕೈಗಳು, ಕಾಲುಗಳು, ಬೆನ್ನು ಅಥವಾ ಇಡೀ ದೇಹದಲ್ಲಿ ನೋವು ಉಂಟಾಗಬಹುದು. ಅಲ್ಲದೆ, ನಿಮ್ಮ ಹೊಟ್ಟೆಯಲ್ಲಿ ಊತ ಕಾಣಿಸಿಕೊಳ್ಳಬಹುದು. ಹಿರಿಯರ ಜೊತೆ ಯಾವುದೇ ವಿಷಯದಲ್ಲಿ ಮಾತನಾಡುವಾಗ ತಾಳ್ಮೆ ಕಾಪಾಡಿ. ವಾರದ ಕೊನೆಯಲ್ಲಿ, ಕೆಲವು ವಿಚಾರಗಳ ಕುರಿತು ಸುಮ್ಮನೆ ಇರುವುದು ಒಳ್ಳೆಯದು. ಈ ವಾರದಲ್ಲಿ ವ್ಯಾಪಾರದ ಪಾಲುಗಾರಿಕೆ, ಕಾನೂನು-ನ್ಯಾಯಾಂಗ, ಅಧಿಕೃತ, ಸಾರ್ವಜನಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಗಮನ ನೀಡಿ.
ಸಿಂಹ: ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ಆದರೆ ಅನಗತ್ಯ ವೆಚ್ಚಗಳ ಕುರಿತು ನೀವು ಎಚ್ಚರಿಕೆ ವಹಿಸಬೇಕು. ಏಕೆಂದರೆ ನೀವು ಆಗಾಗ್ಗೆ ಇಂತಹ ಸಮಸ್ಯೆಗಳಲ್ಲಿ ಸಿಲುಕಿಕೊಂಡು ಸಮಸ್ಯೆಗಳನ್ನು ಎದುರಿಸುತ್ತೀರಿ. ನಿಮ್ಮ ಆದಾಯವು ಸಾಧಾರಣ ಮಟ್ಟದಲ್ಲಿರುತ್ತದೆ. ಹೀಗಾಗಿ ಯಾವುದೇ ಹೆಚ್ಚುವರಿ ಹಣಕಾಸು ಹೊರೆಯನ್ನು ತೆಗೆದುಕೊಳ್ಳಬೇಡಿ. ನೀವು ಸಾಲ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ, ಕೆಲಕಾಲ ಇದನ್ನು ಮುಂದೂಡಿ. ಇದು ಸೂಕ್ತ ಸಮಯವಲ್ಲ. ಮನೆಯಲ್ಲಿ ಸಾಮರಸ್ಯದ ವಾತಾವರಣ ಇರಲಿದೆ ಹಾಗೂ ನಿಮ್ಮನ್ನು ತೃಪ್ತಿಪಡಿಸುವುದಕ್ಕಾಗಿ ನಿಮ್ಮ ಕುಟುಂಬದ ಸದಸ್ಯರು ಏನಾದರೂ ದೊಡ್ಡದನ್ನು ಮಾಡಲಿದ್ದಾರೆ. ವ್ಯಾಪಾರದಲ್ಲಿ ದೊಡ್ಡ ಲಾಭ ಗಳಿಸುವ ಸಾಧ್ಯತೆ ಇದೆ. ನಿಮ್ಮ ವ್ಯಾಪಾರವು ಲಾಭದಲ್ಲಿ ಮುಂದುವರಿಯಲಿದೆ. ಉದ್ಯೋಗದಲ್ಲಿರುವವರು ತನ್ನ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಕೆಲ ಸರ್ಕಾರಿ ನೀತಿಯ ಕಾರಣ ನೀವು ಲಾಭ ಗಳಿಸಲಿದ್ದೀರಿ. ಆದರೂ, ಅತಿಯಾದ ಆತ್ಮವಿಶ್ವಾಸದಿಂದ ದೂರವಿರಿ. ಇದು ನಿಮ್ಮ ಅವಕಾಶಗಳಿಗೆ ಹಾನಿಯುಂಟು ಮಾಡಬಹುದು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ ಹಾಗೂ ನೀವು ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಪೂರ್ಣ ಮನಸ್ಸಿನಿಂದ ಭಾಗವಹಿಸುವಿರಿ.
ಕನ್ಯಾ: ಈ ವಾರವು ಕಳೆದ ವಾರಕ್ಕಿಂತ ಚೆನ್ನಾಗಿರಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಉಂಟಾಗಲಿದೆ. ನಿಮಗಾಗಿ ನೀವು ಬಟ್ಟೆ ಖರೀದಿಸಬಹುದು ಅಥವಾ ಒಂದು ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್ ಖರೀದಿಸಬಹುದು. ನಿಮ್ಮ ಸೌಕರ್ಯಗಳು ಮತ್ತು ಐಷಾರಾಮದಲ್ಲಿಯೂ ಹೆಚ್ಚಳ ಉಂಟಾಗಲಿದೆ. ನಿಮ್ಮ ಕುಟುಂಬದ ವಾತಾವರಣವು ಧನಾತ್ಮಕವಾಗಿರಲಿದೆ. ಇದು ಬದುಕಿನಲ್ಲಿ ಮುಂದೆ ಸಾಗಲು ನಿಮಗೆ ಸಹಕರಿಸಲಿದೆ. ಉದ್ಯೋಗದಲ್ಲಿರುವವರು ತನ್ನ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಬಾಸ್ ನಿಮ್ಮನ್ನು ಹೊಗಳಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಜ್ವರದಂತಹ ಸಮಸ್ಯೆಗಳಿಂದ ದೂರವಿರಿ ಮತ್ತು ಸರಿಯಾದ ಸಮಯಕ್ಕೆ ನಿದ್ದೆ ಮಾಡಿ. ವಾರದ ಆರಂಭದಲ್ಲಿ, ಒಂದಷ್ಟು ಆತಂಕವು ನಿಮ್ಮನ್ನು ಕಾಡಬಹುದು. ಆದರೆ ಮೆಲ್ಲನೆ ಇದು ಕಡಿಮೆಯಾಗಲಿದೆ. ನಿಮ್ಮ ವೈವಾಹಿಕ ಜೀವನವು ಪ್ರೀತಿ ಮತ್ತು ಸಂಬಂಧದ ಭಾವನೆಗಳಿಂದ ತುಂಬಿ ತುಳುಕಲಿದೆ. ಪ್ರೇಮಿಗಳ ಪಾಲಿಗೆ, ಈ ವಾರವು ಸಾಕಷ್ಟು ಮಟ್ಟಿಗೆ ಚೆನ್ನಾಗಿರಲಿದೆ. ವಿರೋಧಿಗಳ ಕುರಿತು ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ನಿಮ್ಮ ಅವಕಾಶಗಳಿಗೆ ಅಡ್ಡಿಪಡಿಸಲು ಅವರು ಯತ್ನಿಸಬಹುದು.
ತುಲಾ: ಈ ವಾರ ನೀವು ಉತ್ತಮ ಪ್ರಗತಿ ಸಾಧಿಸಲಿದ್ದೀರಿ. ವಾರದ ಆರಂಭದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ ಹಾಗೂ ಇದು ನಿಮ್ಮ ಪಾಲಿಗೆ ಸಾಕಷ್ಟು ಉತ್ಸಾಹ ತರಲಿದೆ. ನೀವು ವಿದ್ಯಾರ್ಥಿಯಾಗಿದ್ದಲ್ಲಿ, ಸಾಕಷ್ಟು ಅಡಚಣೆಗಳು ಉಂಟಾಗಬಹುದು. ಹೀಗಾಗಿ, ಈ ಹಂತದಲ್ಲಿ, ನಿಮ್ಮ ಅಧ್ಯಯನಗಳಲ್ಲಿ ಅಡ್ಡಿ ಆತಂಕ ಉಂಟು ಮಾಡುವ ವ್ಯಕ್ತಿಗಳಿಂದ ಅಂತರ ಕಾಪಾಡಿ. ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸ ಮನೆ ಮಾಡಲಿದೆ. ನಿಮ್ಮ ಜೀವನ ಸಂಗಾತಿಯು ಬೇರೆ ಬೇರೆ ರೀತಿಯಲ್ಲಿ ನಿಮ್ಮನ್ನು ಸಂತಸಪಡಿಸಲಿದ್ದಾರೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದು, ಇದನ್ನು ಅವರಿಗೆ ಇನ್ನೂ ವ್ಯಕ್ತಪಡಿಸದೆ ಇದ್ದರೆ, ನಿಮ್ಮ ಪ್ರೀತಿಯ ವ್ಯಕ್ತಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸಕಾಲ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕಾರ್ಯಗಳನ್ನು ಆನಂದಿಸಲಿದ್ದಾರೆ. ವ್ಯಾಪಾರೋದ್ಯಮಿಗಳು ಈ ಹಂತವನ್ನು ಚೆನ್ನಾಗಿ ಬಳಸಿಕೊಳ್ಳಲಿದ್ದಾರೆ. ದುರ್ಬಲ ಆರೋಗ್ಯ ಮಾತ್ರ ನಿಮ್ಮನ್ನು ಕಾಡಬಹುದು.
ವೃಶ್ಚಿಕ: ಈ ವಾರ ನಿಮಗೆ ನಿಜಕ್ಕೂ ಅತ್ಯುತ್ತಮ ಫಲ ದೊರೆಯಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ ಹಾಗೂ ಅವರನ್ನು ಚೆನ್ನಾಗಿ ಅರಿತುಕೊಳ್ಳಲಿದ್ದೀರಿ. ನೀವು ಅವರ ಬೆಂಬಲವನ್ನು ಪಡೆಯಲಿದ್ದು, ಇದು ನಿಮಗೆ ಬೇರೆ ಬೇರೆ ರೀತಿಯಲ್ಲಿ ನೆರವಿಗೆ ಬರಲಿದೆ. ನಿಮ್ಮ ಕುಟುಂಬದ ಸದಸ್ಯರ ಸಲಹೆಯು ನಿಮ್ಮ ವೃತ್ತಿಯಲ್ಲಿ ಬೇರೆ ಬೇರೆ ರೀತಿಯಲ್ಲಿ ನೆರವಿಗೆ ಬರಲಿದ್ದು, ಇದು ನಿಮ್ಮ ಉದ್ಯೋಗವಕಾಶಗಳನ್ನು ವೃದ್ಧಿಸಲಿದೆ. ವ್ಯಾಪಾರೋದ್ಯಮಿಗಳು ಎಚ್ಚರದಿಂದ ಇರಬೇಕು. ಏಕೆಂದರೆ ಕೆಲವು ವಿರೋಧಿಗಳು ನಿಮ್ಮನ್ನು ಹಣಿಯಲು ಯತ್ನಿಸಬಹುದು. ಆದರೆ ನಿಮ್ಮ ವ್ಯಾಪಾರ ನೀತಿಗಳು ಚೆನ್ನಾಗಿರಲಿವೆ ಹಾಗೂ ಅವು ನಿಮ್ಮ ವ್ಯಾಪಾರದ ಪ್ರಗತಿಯಲ್ಲಿ ಸಾಕಷ್ಟು ನೆರವಿಗೆ ಬರುತ್ತವೆ. ವಿವಾಹಿತ ಜೋಡಿಗಳ ಬದುಕು ಸಾಧಾರಣ ಮಟ್ಟದಲ್ಲಿ ಇರಲಿದೆ ಹಾಗೂ ಅವರು ತಮ್ಮ ನಡುವೆ ಯಾವುದೇ ಮೂರನೇ ವ್ಯಕ್ತಿಯನ್ನು ಒಳಗೊಳ್ಳಬಾರದು. ಈ ವಾರದಲ್ಲಿ ಪ್ರೇಮಿಗಳು ಒಳ್ಳೆಯ ಫಲವನ್ನು ಪಡೆಯಲಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಪ್ರಣಯವು ಮನೆ ಮಾಡಲಿದ್ದು, ನಿಮ್ಮ ಸಂಗಾತಿಯೂ ನಿಮ್ಮ ಕುರಿತು ಸಂತಸ ವ್ಯಕ್ತಪಡಿಸಲಿದ್ದಾರೆ. ನಿಮ್ಮ ಸಂಬಂಧವು ಸಾಂಗವಾಗಿ ಮುಂದುವರಿಯಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ ಹಾಗೂ ನೀವು ಎಲ್ಲಾ ರೀತಿಯ ಗೌರವನ್ನು ಪಡೆಯಲಿದ್ದೀರಿ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ. ಈ ಪ್ರಯಾಣಗಳ ಕಾರಣ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ.
ಧನು: ಈ ವಾರ ನಿಮಗೆ ಸಾಧಾರಣ ಫಲ ದೊರೆಯಲಿದೆ. ವಾರದ ಪ್ರಾರಂಭದಲ್ಲಿ, ನೀವು ಪ್ರಯಾಣಕ್ಕೆ ಹೋಗಬಹುದು ಹಾಗೂ ಹೊಸ ಜನರಿಗೆ ಭೇಟಿಯಾಗಿ ಅವರ ಜೊತೆ ಸ್ನೇಹ ಬೆಳೆಸಿಕೊಳ್ಳಬಹುದು. ನೀವು ಯಾರಾದರೂ ಹಿರಿಯ ವ್ಯಕ್ತಿಯನ್ನು ಭೇಟಿಯಾಗಬಹುದು. ಆ ಹಿರಿಯ ವ್ಯಕ್ತಿಯು ನಿಮಗೆ ಸಾಕಷ್ಟು ಸಹಾಯ ಮಾಡಲಿದ್ದಾರೆ ಹಾಗೂ ಸರಿಯಾದ ಸಲಹೆಯನ್ನು ನೀಡಲಿದ್ದಾರೆ. ಉದ್ಯೋಗದಲ್ಲಿರುವವರು ಎಚ್ಚರಿಕೆಯಿಂದ ಇರಬೇಕು. ನೀವು ವ್ಯಾಪಾರೋದ್ಯಮದಲ್ಲಿ ತೊಡಗಿಕೊಂಡಿದ್ದರೆ, ನೀವು ಒಂದಷ್ಟು ನಾವಿನ್ಯತೆಗೆ ಕೈ ಹಾಕಬೇಕು. ಆಗ ಮಾತ್ರವೇ ನೀವು ಯಶಸ್ಸಿನ ಮೆಟ್ಟಿಲೇರಬಹುದು. ಆರೋಗ್ಯದ ವಿಚಾರದಲ್ಲಿ ನೀವು ಅದೃಷ್ಟಶಾಲಿ ಹಾಗೂ ತೊಂದರೆಗಳನ್ನು ನಿವಾರಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ನಿಮ್ಮ ವೈವಾಹಿಕ ಜೀವನವು ಚೆನ್ನಾಗಿರಲಿದೆ ಹಾಗೂ ನಿಮ್ಮ ಜೀವನ ಸಂಗಾತಿಯು ನಿಮಗೆ ಉತ್ತಮ ಸಲಹೆಯನ್ನು ನೀಡಲಿದ್ದಾರೆ. ಪ್ರೇಮಿಗಳು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಸಂಬಂಧದ ಮೇಲೆ ದುಷ್ಟ ಕಣ್ಣು ಬೀಳಬಹುದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಮಕರ: ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ವಾರವು ಪ್ರಾರಂಭಗೊಂಡಂತೆ ನಿಮ್ಮ ಗಳಿಕೆಯು ಪ್ರಾರಂಭಗೊಳ್ಳುತ್ತದೆ. ಇದೇ ವೇಳೆ, ನಿಮ್ಮ ಖರ್ಚು ವೆಚ್ಚದಲ್ಲಿ ಇಳಿಕೆ ಉಂಟಾಗಲಿದೆ. ಹೀಗಾಗಿ ನಿಮ್ಮ ಹಣಕಾಸು ಸ್ಥಿತಿಯು ಸುಧಾರಣೆಗೊಳ್ಳಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವಿವಾಹಿತ ಜೋಡಿಗಳು ವೈವಾಹಿಕ ಬದುಕು ಚೆನ್ನಾಗಿರಲಿದೆ. ಆದರೆ ಅವರ ಅತ್ತೆ-ಮಾವಂದಿರ ದೀರ್ಘಕಾಲದ ಕುಂದುಕೊರತೆಗಳಿಗೆ ಅವರು ಗಮನ ನೀಡಬೇಕಾದೀತು. ಇದು, ನಿಮ್ಮ ಸಂಬಂಧವನ್ನು ಸುಧಾರಿಸಲು ಮಾಡುವ ಪ್ರಯತ್ನವೆಂದು ಪರಿಗಣಿಸಬಹುದು. ನೀವು ಈ ಹಂತವನ್ನು ಗರಿಷ್ಠ ಪ್ರಮಾಣದಲ್ಲಿ ಆನಂದಿಸಲಿದ್ದೀರಿ. ಅಲ್ಲದೆ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಣಯಭರಿತ ಕ್ಷಣಗಳನ್ನು ಆನಂದಿಸಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸಕಾರ್ಯಗಳಲ್ಲಿ ತೃಪ್ತಿ ದೊರೆಯಲಿದೆ. ನಿಮಗೆ ವರ್ಗಾವಣೆಯೂ ಸಿಗಬಹುದು. ನೀವು ನಿಮ್ಮ ಉದ್ಯೋಗಿಯೊಂದಿಗೆ ಚೆನ್ನಾಗಿ ವರ್ತಿಸಿದರೆ ಇದು ನಿಮ್ಮನ್ನು ಸದೃಢರನ್ನಾಗಿಸುತ್ತದೆ. ವ್ಯಾಪಾರೋದ್ಯಮಿಗಳ ಪಾಲಿಗೆ ಇದು ಸಾಧಾರಣ ವಾರ ಎನಿಸಲಿದೆ. ನೀವು ನಿಮ್ಮ ಬ್ಯಾಲನ್ಸ್ ಶೀಟ್ ಮೇಲೆ ಗಮನ ನೀಡಬೇಕು. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು ಹಾಗೂ ನಿಮ್ಮ ಆದಾಯದಲ್ಲಿ ಕುಸಿತ ಉಂಟಾಗಬಹುದು. ವಾರದ ಮಧ್ಯ ಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.
ಕುಂಭ: ಇದು ನಿಮ್ಮ ಪಾಲಿಗೆ ಅತ್ಯಂತ ಫಲದಾಯಕ ವಾರ ಎನಿಸಲಿದೆ. ನಿಮ್ಮ ವ್ಯಕ್ತಿತ್ವಕ್ಕೆ ಇನ್ನಷ್ಟು ನಾಜೂಕುತನ ದೊರೆಯಲಿದೆ. ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ ಹಾಗೂ ಅವು ನಿಮಗೆ ಲಾಭದ ಬಾಗಿಲನ್ನು ತೆರೆಯಲಿವೆ. ವ್ಯಾಪಾರೋದ್ಯಮಿಗಳು ಸಾಕಷ್ಟು ಗಳಿಕೆಯನ್ನು ಮಾಡಲಿದ್ದಾರೆ. ಉದ್ಯೋಗದಲ್ಲಿರುವವರು ಕಾರ್ಯಸ್ಥಳದಲ್ಲಿ ಉತ್ತಮ ಸಾಧನೆ ಮಾಡಲಿದ್ದು, ನಿಮ್ಮ ಹಿರಿಯರು ನಿಮ್ಮ ಕುರಿತು ಸಂತಸ ವ್ಯಕ್ತಪಡಿಸಲಿದ್ದಾರೆ. ನೀವು ನಿಮ್ಮ ಕೆಲಸದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳ ಬದುಕು ಚೆನ್ನಾಗಿರಲಿದೆ. ಆದರೂ, ನಿಮ್ಮ ಜೀವನ ಸಂಗಾತಿಯು ಯಾವುದಾದರೂ ವಿಷಯದ ಕುರಿತು ನಿಮ್ಮ ಜೊತೆ ವಾದ ಮಾಡಬಹುದು. ನಿಮ್ಮ ಜೀವನ ಸಂಗಾತಿಯ ಈ ಕೋಪದ ವರ್ತನೆಯು ನಿಮಗೆ ಬೇಸರ ತರಿಸಬಹುದು. ಪ್ರಣಯ ಪಕ್ಷಿಗಳಿಗೂ ಇದು ಸಕಾಲ. ನೀವು ನಿಮ್ಮ ಪ್ರಣಯದ ಬದುಕನ್ನು ಇನ್ನಷ್ಟು ಸುಧಾರಿಸಲು ಪ್ರಯತ್ನಿಸಲಿದ್ದೀರಿ. ಇಡೀ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬೇಕು ಮತ್ತು ಕಠಿಣ ಶ್ರಮ ತೋರಬೇಕು.
ಮೀನ: ಈ ವಾರ ನಿಮಗೆ ಸಾಧಾರಣ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಏನಾದರೂ ಪೂಜೆಗೆ ಅಥವಾ ದೇವಸ್ಥಾನಕ್ಕೆ ಸೇವೆಯ ರೂಪದಲ್ಲಿ ಒಂದಷ್ಟು ಹಣ ನೀಡಬಹುದು. ಇದು ನಿಮಗೆ ಸಂತೃಪ್ತಿ ನೀಡಲಿದೆ ಹಾಗೂ ನಿಮ್ಮ ಗೌರವವೂ ವೃದ್ಧಿಸಲಿದೆ. ವಾರದ ಆರಂಭದಲ್ಲಿ ನೀವು ತೀರ್ಥಯಾತ್ರೆಗೆ ಹೋಗಬಹುದು. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ನಿಮ್ಮ ವ್ಯಾಪಾರವು ವೃದ್ಧಿಸಲಿದೆ ಹಾಗೂ ನಿಮ್ಮ ವಿರೋಧಿಗಳನ್ನು ನೀವು ಹಿಂದಿಕ್ಕಲಿದ್ದೀರಿ. ನೀವು ಕೆಲವೊಂದು ಕಾನೂನು ಸಂಬಂಧಿ ವಿಚಾರಗಳಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ನಿಮ್ಮ ಕೌಟುಂಬಿಕ ಬದುಕಿನ ಕುರಿತು ನಿಮಗೆ ಸಂತಸ ಉಂಟಾಗಲಿದೆ. ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಉತ್ತಮ ಬಾಂಧವ್ಯ ಇರಲಿದೆ ಹಾಗೂ ನೀವಿಬ್ಬರೂ ಪರಸ್ಪರ ಸಾಮಿಪ್ಯ ಸಾಧಿಸಲಿದ್ದೀರಿ. ಆದರೆ ಆಸ್ತಿಗೆ ಸಂಬಂಧಿಸಿದ ವಿವಾದಗಳು ಉಂಟಾಗಬಹುದು. ಪ್ರೇಮಿಗಳ ವಿಚಾರದಲ್ಲಿ ಹೇಳುವುದಾದರೆ, ಪರಸ್ಪರ ಮಾತುಕತೆ ಮತ್ತು ಸಂವಹನದ ಮೂಲಕ ನೀವು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಯತ್ನಿಸಬೇಕು. ವಿದ್ಯಾರ್ಥಿಗಳ ಪಾಲಿಗೆ ಇದು ಉತ್ತಮ ವಾರ ಎನಿಸಲಿದೆ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ಕೊನೆಯ ದಿನಗಳು ನಿಮಗೆ ಸೂಕ್ತ.