ಇಂದಿನ ಪಂಚಾಂಗ :
ದಿನ : 09-08-2023, ಬುಧವಾರ
ಸಂವತ್ಸರ : ಶುಭಕೃತ್
ಆಯನ : ದಕ್ಷಿಣಾಯಣ
ಋತು : ವರ್ಷ
ಮಾಸ : ಶ್ರಾವಣ
ನಕ್ಷತ್ರ : ಕೃತಿಕಾ
ತಿಥಿ : ಕೃಷ್ಣ ನವಮಿ
ಪಕ್ಷ : ಕೃಷ್ಣ
ಸೂರ್ಯೋದಯ : ಮುಂಜಾನೆ 6.04 ಗಂಟೆಗೆ
ಅಮೃತಕಾಲ : ಮಧ್ಯಾಹ್ನ 1:58 ರಿಂದ 3:33 ಗಂಟೆವರೆಗೆ
ವರ್ಜ್ಯಂ : ಸಂಜೆ 6.15 ರಿಂದ 7:50 ಗಂಟೆವರೆಗೆ
ದುರ್ಮುಹೂರ್ತ : ಬೆಳಗ್ಗೆ 11:40 ರಿಂದ 12:28 ರವರೆಗೆ
ರಾಹುಕಾಲ : ಮಧ್ಯಾಹ್ನ 12:23 ರಿಂದ 1:58 ಗಂಟೆವರೆಗೆ
ಸೂರ್ಯಾಸ್ತ : ಸಾಯಂಕಾಲ 06:42 ಗಂಟೆಗೆ
ಇಂದಿನ ರಾಶಿ ಭವಿಷ್ಯ :
ಮೇಷ : ಬಹಳ ಎಚ್ಚರದಿಂದಿರಿ; ನೀವು ಇಂದು ಹಲವು ಹೃದಯಗಳನ್ನು ಒಡೆಯಲಿದ್ದೀರಿ! ಉಳಿದಂತೆ ನಿಮ್ಮ ಪ್ರೀತಿಯ ಜೀವನ ಸ್ಥಿರವಾಗಿರುತ್ತದೆ ಮತ್ತು ನೀವು ನಿಮ್ಮ ಪ್ರೀತಿಪಾತ್ರರಿಗೆ ಬದ್ಧರಾಗಲು ಸಿದ್ಧವಾದಂತೆ ಭಾವಿಸುತ್ತೀರಿ. ವಿವಾಹಿತರಾದರೆ, ನಿಮ್ಮ ಬಾಂಧವ್ಯ ಆಳವಾದ ರಂಗು ಪಡೆಯುತ್ತದೆ ಮತ್ತು ಸದೃಢ ಬಾಂಧವ್ಯದ ಲಗತ್ತು ಹೊಂದಿರುತ್ತದೆ.
ವೃಷಭ : ನೀವು ಕಠಿಣ ಪರಿಶ್ರಮ ಪಟ್ಟರೂ ನೀವು ನಿರೀಕ್ಷಿಸಿದಂತೆ ಪ್ರತಿಫಲ ದೊರೆಯದೇ ಇರುವ ಸಾಧ್ಯತೆಗಳಿವೆ. ಮಧ್ಯಾಹ್ನದಲ್ಲಿ ಪ್ರಯಾಣ ಮಾಡಲು ನಿಮಗೆ ಉತ್ಸಾಹ ಇರುವುದಿಲ್ಲ. ವಿಶ್ರಾಂತಿಯ ಸಂಜೆ ಮತ್ತು ಆತ್ಮೀಯ ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ.
ಮಿಥುನ : ಇದು ನಿಮ್ಮ ಕುಟುಂಬಕ್ಕೆ ಸಂಭ್ರಮದ ದಿನ. ಆದರೆ, ನಿಮ್ಮ ಕುಟುಂಬ ಸಂತೋಷದಿಂದ ನಲಿಯುತ್ತಿದ್ದರೆ ನೀವು ವ್ಯಾಪಾರ ವಹಿವಾಟು ನಿರ್ವಹಣೆಯಲ್ಲಿ ವ್ಯಸ್ತರಾಗಿರುತ್ತೀರಿ. ದಿನದ ನಂತರದಲ್ಲಿ ನೀವು ವ್ಯಾಪಾರ ಪ್ರವಾಸ ತೆರಳಲೂಬಹುದು. ವೈಯಕ್ತಿಕ ಸಾಧನೆಯನ್ನು ಸಂಭ್ರಮಿಸುವುದಕ್ಕಿಂತ ವೃತ್ತಿಪರ ಯಶಸ್ಸು ಸಾಧಿಸಲು ಸಮಯ ಮೀಸಲಿಡುತ್ತೀರಿ.
ಕರ್ಕಾಟಕ : ಅಪಾರ ಒತ್ತಡ ಮತ್ತು ಇತರರ ಕೆಲಸದ ಭಾರ. ಆದರೂ ನೀವು ಸಾಧಿಸುತ್ತೀರಿ. ವ್ಯಾಪಾರದಲ್ಲಿ, ಪ್ರತಿಸ್ಪರ್ಧಿಗಳು ಮತ್ತು ವಿರೋಧಿಗಳು ಅವರ ಯುಕ್ತಿಗಳಲ್ಲಿ ವಿಫಲರಾಗುತ್ತಾರೆ. ಈ ಹಂತದ ಸಂಪೂರ್ಣ ಬಳಕೆ ಮಾಡಿಕೊಳ್ಳಿರಿ.
ಸಿಂಹ : ಇಂದು ನೀವು ಅತಿಯಾದ ಭಾವನಾತ್ಮಕತೆಯಿಂದ ದೂರ ಉಳಿಯಬೇಕು. ಜೀವನದತ್ತ ನಿಮ್ಮ ಪ್ರವೃತ್ತಿಯನ್ನು ಬದಲಾಯಿಸುವ ನಿಮ್ಮ ಬಯಕೆಗೆ ಅನುಸಾರ ನೀವು ನಿಮ್ಮ ಜೀವನದ ಎಲ್ಲ ವೃತ್ತಗಳಲ್ಲೂ ಶ್ರೇಷ್ಠರಾಗಲು ಸಮರ್ಥರಾಗುತ್ತೀರಿ. ಇಂದು ನಿಮ್ಮ ಮನೆಯನ್ನು ಮರು ಅಲಂಕರಣ ಅಥವಾ ನವೀಕರಣ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪ್ರಗತಿಪರ ದಿನ ಕಾಯುತ್ತಿದೆ.
ಕನ್ಯಾ : ಇಂದು ನಿಮ್ಮ ಹೊಸ ಅಡ್ಡಹೆಸರು ಹಾರ್ಟ್ ಬ್ರೇಕ್ ಕಿಡ್ ಎಂದು. ನಿಮ್ಮ ಖರ್ಚುಗಳು ನೀವು ಮಾಡಿರುವ ಉಳಿತಾಯ ಮೀರುತ್ತವೆ. ನೀವು ನಿಮ್ಮ ವೈವಾಹಿಕ ಬಾಂಧವ್ಯ ಅರಳುವುದನ್ನು ಕಾಣುತ್ತೀರಿ. ಸಂತೋಷಕರ ಜೀವನ ನಡೆಸಲು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಂಧವನ್ನು ಸದೃಢಗೊಳಿಸಿಕೊಳ್ಳಿ.
ತುಲಾ : ನಿಮ್ಮ ದಿರಿಸು ಮತ್ತು ಉಡುಪು ಧರಿಸುವ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಮತ್ತು ಸೌಂದರ್ಯಕ್ಕೆ ಸೇರ್ಪಡೆಯಾಗುತ್ತದೆ. ಜನರು ನಿಮ್ಮ ಸೌಂದರ್ಯದಿಂದ ಪ್ರಭಾವಿತರಾಗುತ್ತಾರೆ. ಸಂಜೆಯ ಸಾಮಾಜಿಕ ಕಾರ್ಯಕ್ರಮ ನಿಮ್ಮನ್ನು ಮತ್ತೊಬ್ಬರಿಗೆ ಹತ್ತಿರವಾಗಿಸುತ್ತದೆ ಮತ್ತು ಪ್ರಣಯದ ಸಾಧ್ಯತೆ ಇದೆ.
ವೃಶ್ಚಿಕ : ಅವಸರದಿಂದ ಕೆಲಸ ಕೆಡುತ್ತದೆ. ನೀವು ನಿರ್ಧಾರ ಕೈಗೊಳ್ಳುವ ಮುನ್ನ ಅಥವಾ ನಿಮ್ಮ ಯೋಜನೆಗಳು ನಿಯಂತ್ರಣ ಕಳೆದುಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸುವುದು ಮುಖ್ಯ. ನಿಮ್ಮ ಪ್ರಯತ್ನಗಳು ವ್ಯರ್ಥವಾಗುವುದರಿಂದ ಈ ದಿನ ನಿಮಗೆ ಭರವಸೆಯಿಂದ ಕೂಡಿಲ್ಲ. ವ್ಯಾಪಾರದ ಪ್ರವಾಸದ ಸಾಧ್ಯತೆ ಇದೆ. ಸಂಜೆ ನಿಮ್ಮ ಪ್ರೀತಿಪಾತ್ರರನ್ನು ವಿಶೇಷವಾಗಿ ಭಾವಿಸುವಂತೆ ಮಾಡಿರಿ!
ಧನು : ಶಾಂತಿ ಮತ್ತು ನೆಮ್ಮದಿ, ಇಂದು ನೀವು ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದೀರಿ. ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತೀರಿ ಮತ್ತು ನಿಮ್ಮ ಕುಟುಂಬ ಸದಸ್ಯರ ಮುಂದೆ ಭಾವನಾತ್ಮಕ ವ್ಯಕ್ತಿಯಾಗಿ ಕಾಣುತ್ತೀರಿ. ಮಧ್ಯಾಹ್ನ ವ್ಯಾಪಾರ ಅಥವಾ ವಿನೋದ ಮತ್ತು ಮನರಂಜನೆಯ ಚಟುವಟಿಕೆಗಳಲ್ಲಿ ಮುಳುಗಿಹೋಗುತ್ತೀರಿ. ಆದಾಗ್ಯೂ, ಸಂಜೆ ನಿಮ್ಮ ಅಲಂಕರಣಕ್ಕಾಗಿ ನೀವು ಕೊಂಚ ಹಣ ಖರ್ಚು ಮಾಡುವ ಸಾಧ್ಯತೆ ಇದೆ.
ಮಕರ : ನೀವು ಇಂದು ಸಮತೋಲನದ ಕಾರ್ಯ ನಿರ್ವಹಿಸುತ್ತೀರಿ. ಒಂದೆಡೆ ನೀವು ನಿಮ್ಮ ಗುರಿಗಳನ್ನು ತಲುಪಲು ಬಹಳ ಶ್ರಮ ವಹಿಸುತ್ತೀರಿ, ಮತ್ತೊಂದೆಡೆ, ನಿಮ್ಮ ಹವ್ಯಾಸಗಳಿಗೆ ಕೊಂಚ ಸಮಯ ಮೀಸಲಿಡುತ್ತೀರಿ. ನಿಮ್ಮ ಮೇಲಧಿಕಾರಿ ಮತ್ತು ಸಹೋದ್ಯೋಗಿಗಳು ನಿಮ್ಮ ಮೇಲೆ ಪ್ರಶಂಸೆಗಳ ಸುರಿಮಳೆ ಸುರಿಸುತ್ತಾರೆ. ಆದರೆ ಹೊಳೆಯುವುದೆಲ್ಲಾ ಚಿನ್ನವಲ್ಲ. ಅವರ ಮಾತುಗಳನ್ನು ಹಾಗೆಯೇ ಪರಿಗಣಿಸಬೇಡಿ, ನೀವು ಅದರ ಗೂಢಾರ್ಥ ತಿಳಿಯದೇ ಇರಬಹುದು. ಇದು ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ.
ಕುಂಭ : ಇಂದು ನಿಮಗೆ ಪಾರ್ಟಿ ಮಾಡಲು ಅತ್ಯಂತ ಸಣ್ಣ ಕಾರಣಗಳು ಸಾಕು! ಶುಭಸುದ್ದಿ ನಿಮ್ಮ ಉತ್ಸಾಹಕ್ಕೆ ಸೇರ್ಪಡೆಯಾಗುತ್ತದೆ. ಈ ದಿನ ಧನಾತ್ಮಕವಾಗಿ ಪ್ರಾರಂಭವಾಗುತ್ತದೆ, ಮತ್ತು ಇದು ಇಡೀ ದಿನ ಮುಂದುವರೆಯುತ್ತದೆ. ನೀವು ಜೀವನಕ್ಕಾಗಿ ಹೊಸ ಜನರನ್ನು ಭೇಟಿಯಾಗುತ್ತೀರಿ ಮತ್ತು ಮಿತ್ರರನ್ನು ಮಾಡಿಕೊಳ್ಳುತ್ತೀರಿ. ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯಿರಿ ಮತ್ತು ಪರಿಪೂರ್ಣ ದಿನವನ್ನು ಪರಿಪೂರ್ಣವಾಗಿ ಮುಗಿಸಿರಿ.
ಮೀನ : ಒಂಟಿಯಾಗಿರುವ ಎಲ್ಲರಿಗೂ ಈ ದಿನ "ಬಂಧನ"ಕ್ಕೆ ಒಳಗಾಗಲು ಒಳ್ಳೆಯ ದಿನ. ವಿವಾಹಿತರು ಅಥವಾ ಪ್ರೇಮಿಗಳನ್ನು ಹೊಂದಿರುವವರಿಗೆ ಪ್ರಣಯದ ದಿನ ನಿಮಗಾಗಿ ಕಾದಿದ್ದು ನಿಮ್ಮನ್ನು ನಿಮ್ಮ ಸಂಗಾತಿಗೆ ಬಹಳ ಹತ್ತಿರ ತರುತ್ತದೆ. ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗಳ ಸಾಧ್ಯತೆಯೂ ಇದೆ. ಹೊಸ ಬಾಂಧವ್ಯಗಳನ್ನು ರೂಪಿಸಿಕೊಳ್ಳಲು ಮತ್ತು ಹಳೆಯವನ್ನು ನವೀಕರಿಸಲು ಇದು ಅದ್ಭುತವಾದ ದಿನ.