ETV Bharat / bharat

ಮದುವೆ ಮೆರವಣಿಗೆಯಲ್ಲಿ ಮೋದಿ-ಯೋಗಿ ಹೊಗಳುವ ಹಾಡು ಹಾಕಿದ್ದಕ್ಕೆ ಹಲ್ಲೆ, ಹಣ-ಚಿನ್ನ ದರೋಡೆ

author img

By

Published : Mar 13, 2022, 12:45 PM IST

ಕಾರು ಮತ್ತು ವ್ಯಾನ್​ಗಳಿಗೆ ಹಾನಿಯಾಗಿದ್ದು, ಗಾಜುಗಳನ್ನು ಒಡೆದ ಪರಿಣಾಮದಿಂದಾಗಿ ಕೆಲವರಿಗೆ ಗಂಭೀರವಾದ ಗಾಯಗಳಾಗಿವೆ. ಪ್ರಕರಣ ದಾಖಲಿಸಿಕೊಂಡು ದಾಳಿಕೋರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

Wedding procession attacked for playing Modi-Yogi songs
ಮದುವೆ ಮೆರವಣಿಗೆಯಲ್ಲಿ ಮೋದಿ-ಯೋಗಿ ಹೊಗಳುವ ಹಾಡು ಹಾಕಿದ್ದಕ್ಕೆ ಹಲ್ಲೆ, ಹಣ-ಚಿನ್ನ ದರೋಡೆ

ಔರೈಯಾ, ಉತ್ತರಪ್ರದೇಶ : ಮದುವೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಕೆಲವು ಅಪರಿಚಿತರು ಹಲ್ಲೆ ನಡೆಸಿ ಹಣ, ಚಿನ್ನಾಭರಣವನ್ನು ದರೋಡೆ ಮಾಡಿರುವ ಘಟನೆ ಔರೈಯಾ ಜಿಲ್ಲೆಯಲ್ಲಿ ಕಳೆದ ಶುಕ್ರವಾರ ನಡೆದಿದೆ.

ದಿಲೀಪುರ್ ಗ್ರಾಮದ ನಿವಾಸಿ ಬ್ರಿಜ್ಭಾನ್ ಸಿಂಗ್ ಎಂಬುವರ ಪುತ್ರ ರೋಹಿತ್ ಎಂಬಾತನ ವಿವಾಹದ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳುವ ಹಾಡನ್ನು ಹಾಕಲಾಗಿತ್ತು.

ಇದನ್ನೂ ಓದಿ: ಹೈದರಾಬಾದ್​​ ಕಂಟೋನ್ಮೆಂಟ್​ನ ಮಿಲ್ಟ್ರಿ ಪ್ರಾಧಿಕಾರಕ್ಕೆ ನೀರು, ವಿದ್ಯುತ್ ಸ್ಥಗಿತಗೊಳಿಸುತ್ತೇವೆ : ತೆಲಂಗಾಣ ಸಚಿವ ಕೆಟಿಆರ್

ಈ ವೇಳೆ ಬಂದ ದುಷ್ಕರ್ಮಿಗಳು, ಬಲವಂತವಾಗಿ ರೋಹಿತ್ ಮತ್ತು ಅವರ ಸಂಬಂಧಿಗಳು ಬರುತ್ತಿದ್ದ ನಾಲ್ಕು ಕಾರುಗಳು ಮತ್ತು ಮೂರು ವ್ಯಾನ್​ಗಳನ್ನು ತಡೆದಿದ್ದಾರೆ. ನಂತರ ಕಾರುಗಳನ್ನು ಜಖಂಗೊಳಿಸಿದ್ದು, ವಧುವಿಗೆ ನೀಡಬೇಕಾಗಿದ್ದ ಚಿನ್ನಾಭರಣಗಳ ಸಹಿತ, ಎರಡು ಲಕ್ಷ ರೂಪಾಯಿಯನ್ನು ದೋಚಿದ್ದಾರೆ.

ಕಾರು ಮತ್ತು ವ್ಯಾನ್​ಗಳಿಗೆ ಹಾನಿಯಾಗಿದ್ದು, ಗಾಜುಗಳನ್ನು ಒಡೆದ ಪರಿಣಾಮದಿಂದಾಗಿ ಕೆಲವರಿಗೆ ಗಂಭೀರವಾದ ಗಾಯಗಳಾಗಿವೆ. ಪ್ರಕರಣ ದಾಖಲಿಸಿಕೊಂಡು ದಾಳಿಕೋರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.