ETV Bharat / bharat

ಅದ್ಧೂರಿ ಮೆರವಣಿಗೆಯೊಂದಿಗೆ ಸಾಕು ನಾಯಿಗಳ ಮದುವೆ ಮಾಡಿದ ಸಂತರು; ಸಾಕ್ಷಿಯಾದ ಶಿಷ್ಯ ಬಳಗ - ಉತ್ತರ ಪ್ರದೇಶದಲ್ಲಿ ಸಾಕು ನಾಯಿಗಳ ಮದುವೆ

ಉತ್ತರ ಪ್ರದೇಶದ ಹಮೀರ್​​ಪುರದಲ್ಲಿ ವಿಶಿಷ್ಟ ವಿವಾಹವೊಂದು ನಡೆಯುತ್ತಿದ್ದು, ಸದ್ಯ ಈ ಮದುವೆ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿ ನಡೆದ ಮದುವೆಯಲ್ಲಿ ಬಗೆಬಗೆಯ ಖಾದ್ಯಗಳನ್ನು ಸಹ ತಯಾರಿಸಲಾಗಿತ್ತು. ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದು ಸಾಧು-ಸಂತರು ಮತ್ತು ಅವರ ಶಿಷ್ಯವರ್ಗ.

WEDDING OF PET DOG AND BITCH WAS DONE ACCORDING TO HINDU CUSTOMS
ಸಾಕು ನಾಯಿಗಳ ಅದ್ಧೂರಿ ಮದುವೆ
author img

By

Published : Jun 6, 2022, 8:33 PM IST

ಉತ್ತರ ಪ್ರದೇಶದ: ಚಿನ್ನಾಭರಣಗಳಿಂದ ಅಲಂಕೃತಗೊಂಡ ವಧು-ವರ.. 500 ಮಂದಿಯೊಂದಿಗೆ ಅದ್ಧೂರಿ ಮೆರವಣಿಗೆ.. ವೈವಿಧ್ಯಮಯ ತಿನಿಸು ಹಾಗೂ ಖಾದ್ಯಗಳು.. ಇವೆಲ್ಲ ಕಂಡುಬಂದಿದ್ದು ಸಾಕು ನಾಯಿಯ ಮದುವೆಯಲ್ಲಿ!. ಹೌದು, ಉತ್ತರ ಪ್ರದೇಶದ ಸುಮೇರ್​ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದ್ದೊಂದು ಅಪರೂಪದ ಮದುವೆ ಈ ರೀತಿ ನೆರವೇರಿದ್ದು ಇದೀಗ ಅಚ್ಚರಿ ಮೂಡಿಸಿದೆ.

WEDDING OF PET DOG AND BITCH WAS DONE ACCORDING TO HINDU CUSTOMS
ಸಾಕು ನಾಯಿಗಳ ಅದ್ಧೂರಿ ಮದುವೆ

ಇಲ್ಲಿಯ ಭರುವ ಎಂಬ ಗ್ರಾಮದ ಇಬ್ಬರು ಸಂತರು (ಸನ್ಯಾಸಿಗಳು) ತಮ್ಮ ಸಾಕುನಾಯಿಗಳಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ. ಪ್ರಸಿದ್ಧ ಮನ್ಸರ್ ಬಾಬಾನ ಎಂಬ ಶಿವ ದೇವಾಲಯದ ಪ್ರಧಾನ ಅರ್ಚಕ ಸ್ವಾಮಿ ದ್ವಾರಕಾ ದಾಸ್ ಮಹಾರಾಜ್ ಬಾಬಾ ಅವರು ಕಲ್ಲು ಎಂಬ ಒಂದು ನಾಯಿ ಸಾಕಿದ್ದರು.

ಈ ಮುದ್ದಿನ ನಾಯಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದಿದ್ದರು. ಇವರ ಇಚ್ಛೆಯಂತೆ ತಮ್ಮ ನೆಚ್ಚಿನ ನಾಯಿಯ ಕಂಕಣಬಲವೂ ಕೂಡಿ ಬಂದಿತ್ತು. ಮೊದಲೇ ನೋಡಿದ ದಿನಾಂಕದಂತೆ ಪರಚ್‌ನ ಬಜರಂಗಬಲಿ ದೇವಸ್ಥಾನದ ಅರ್ಚಕ ಅರ್ಜುನ್ ದಾಸ್ ಅವರ ಭೂರಿ ಎಂಬ ಸಾಕು ಹೆಣ್ಣು ನಾಯಿಯೊಂದಿಗೆ ಭಾನುವಾರ (ಜೂ.​ 5) ಮದುವೆ ಮಾಡಿಸಿದರು.

ಸಾಕು ನಾಯಿಗಳ ಮದುವೆಗೂ ಮುನ್ನ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಅವರು ತಮ್ಮ ಶಿಷ್ಯರು ಮತ್ತು ಭಕ್ತರನ್ನೆಲ್ಲ ಮುಹೂರ್ತಕ್ಕೆ ಆಹ್ವಾನಿಸಿದ್ದರು. ಅದರಂತೆ 500 ಜನರೊಂದಿಗೆ ಮನ್ಸರ್ ಶಿವ ದೇವಸ್ಥಾನದಿಂದ ಪರಚ್‌ ಗ್ರಾಮದ ವರೆಗೆ ಅದ್ಧೂರಿ ಮೆರವಣಿಗೆ ಸಹ ಮಾಡಲಾಯಿತು.

ಬಳಿಕ ಸಂಪ್ರದಾಯದ ಪ್ರಕಾರ ಶ್ವಾನಗಳಿಗೆ ಹೊಸ ಬಟ್ಟೆ, ಬಂಗಾರದ ಆಭರಣಗಳನ್ನು ಸಹ ತೊಡಿಸಲಾಯಿತು. ನಂತರ ಭಕ್ತರ ಹಾಗೂ ಶಿಷ್ಯರು ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮದುವೆಯ ನಂತರ ಅತಿಥಿಗಳಿಗೆ ವಿವಿಧ ಖಾದ್ಯಗಳ ಊಟ ಸಹ ಬಡಿಸಲಾಯಿತು.

ಇದನ್ನೂ ಓದಿ: ತನ್ನನ್ನು ತಾನೇ ವಿವಾಹ ಮಾಡಿಕೊಳ್ಳಲಿರುವ ಯುವತಿ; 2 ವಾರ ಹನಿಮೂನ್​​: ಗುಜರಾತ್​​ನಲ್ಲೊಂದು ಸೆಲ್ಫ್ ಮ್ಯಾರೇಜ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.