ಫಿರೋಜ್‌ಪುರ (ಪಂಜಾಬ್): ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಬಿಎಸ್‌ಎಫ್ ಸಿಬ್ಬಂದಿ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿಧಾನಸಭಾ ಚುನಾವಣೆಗಾಗಿ ಪಂಜಾಬ್ನಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿತ್ತು. ಈ ಬಿಗಿ ಭದ್ರತೆ ಮತ್ತು ಚುನಾವಣೆ ಮುಕ್ತಾಯವಾದ ಮರು ದಿನವೇ ಗಡಿ ಭಾಗದಲ್ಲಿ ಫಿರೋಜ್‌ಪುರದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇವುಗಳನ್ನು ಪಾಕಿಸ್ತಾನದಿಂದ ತಂದು ಸುಸಾತ್‌ನ ಹೊರವಲಯದಲ್ಲಿ ಸಂಗ್ರಹಿಸಲಾಗಿತ್ತು ಎಂದು ಹೇಳಲಾಗಿದೆ.
ಎಐಎಸ್‌ಟಿಎಫ್ ಮತ್ತು ಬಿಎಸ್‌ಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಈ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ 47 ರೈಫಲ್‌ಗಳು ಮತ್ತು ಎ-10 ಮ್ಯಾಗಜೀನ್‌ಗಳು, 8 ರೈಫಲ್‌ಗಳು, 6 ಮ್ಯಾಗಜೀನ್‌ಗಳು, 5 ಪಿಸ್ತೂಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಮೇಯರ್ ಕೊಂದಿದ್ದಕ್ಕೆ ನಡೀತು ಗ್ಯಾಂಗ್ ವಾರ್: ಗುಂಡಿನ ಚಕಮಕಿಯಲ್ಲಿ ಐವರು ಡ್ರಗ್ಸ್ ಕಾರ್ಟಲ್ಸ್ ಸಾವು!